ಚಂಡಮಾರುತದ ಭೀತಿ; ಮುರ್ಡೇಶ್ವರ ಸೇರಿದಂತೆ ಉ.ಕ.ಜಿಲ್ಲೆಯ ಸಮುದ್ರ ತೀರಗಳಲ್ಲಿ ಎರಡು ದಿನಗಳಿಂದ ಪ್ರವಾಸಿಗರಿಗೆ ನಿಷೇಧ

Source: SOnews | By Staff Correspondent | Published on 17th January 2024, 4:06 PM | Coastal News |

ಭಟ್ಕಳ:  ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಲಕ್ಷಣಗಳ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಕಡಲತೀರಗಳಲ್ಲಿ ಎರಡು ದಿನಗಳ ಕಾಲ ಪ್ರವಾಸಿಗರ ಆಗಮನವನ್ನು ನಿಷೇಧಿಸಲಾಗಿದೆ.

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ನಿನ್ನೆಯಿಂದ ಅರಬ್ಬಿ ಸಮುದ್ರದಲ್ಲಿ ಒತ್ತಡ ಉಂಟಾಗಿದ್ದು, ಚಂಡಮಾರುತದ ಅಬ್ಬರ ಶುರುವಾಗಿದೆ.

ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಕಡಲತೀರಗಳಲ್ಲಿ ಮುಳುಗಿ ಅನೇಕ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.  ಹೊಸ ವರ್ಷದ ಆರಂಭದಿಂದಲೇ ಮುರ್ಡೇಶ್ವರ, ಗೋಕರ್ಣ, ಕಾರವಾರ ಮೊದಲಾದ ಕಡಲತೀರಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹೀಗಾಗಿ ಚಂಡಮಾರುತದ ಲಕ್ಷಣಗಳನ್ನು ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮವಾಗಿ 500ಕ್ಕೂ ಹೆಚ್ಚು ಜೀವ ರಕ್ಷಕರನ್ನು ನಿಯೋಜಿಸಲಾಗಿದೆ.

Read These Next