ಸರಕಾರದಿಂದ ಗರಿಷ್ಠ ಸವಲತ್ತು ಪಡೆಯುವ ಜನ; ಭಟ್ಕಳ 22 ಬೂತ್‍ಗಳಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ; ಭಟ್ಕಳದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

Source: S O News service | By V. D. Bhatkal | Published on 20th February 2023, 5:58 PM | Coastal News | State News |

ಭಟ್ಕಳ: ನಾವು ಯು.ಟಿ.ಖಾದರ್, ಹ್ಯಾರೀಸ್, ಜಾರ್ಜ, ಜಮೀರ್ ಎಲ್ಲರಿಗೂ ಮತ ನೀಡಿ ಚುನಾವಣೆಯನ್ನು ಗೆಲ್ಲಿಸುತ್ತೇವೆ. ಆದರೆ ಭಟ್ಕಳದ 22 ಮತಗಟ್ಟೆಗಳಲ್ಲಿ ಸರಕಾರದಿಂದ ಗರಿಷ್ಠ ಸವಲತ್ತು ಪಡೆಯುವ ಜನ ಬಿಜೆಪಿಗೆ ಮತ ಹಾಕುವುದಿಲ್ಲ. ಇಂತವರು ನಮಗೆ ಸೆಕ್ಯೂಲರ್ ಪಾಠವನ್ನು ಹೇಳಲು ಬರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಅವರು ರವಿವಾರ ಸಂಜೆ ಭಟ್ಕಳ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ರಕ್ತದಲ್ಲಿಯೇ ಸರ್ವ ಧರ್ಮ ಸಮಭಾವ ಇದೆ. ಭಾರತದಲ್ಲಿ ಪ್ರತಿ 50ಕಿಮೀ. ಅಂತರದಲ್ಲಿ ಆಹಾರ ಪದ್ಧತಿ, ಭಾಷೆಯಲ್ಲಿ ವ್ಯತ್ಯಾಸ ಇರುವುದು ಕಂಡು ಬರುತ್ತದೆ. ನಾವೂ ಭಟ್ಕಳದ ತಂಝೀಮ್‍ನಂತೆ ಆಗಿದ್ದರೆ ದೇಶದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಭಟ್ಕಳದ ನಾಗಬನದ ಇತಿಹಾಸ 800 ವರ್ಷಗಳಿಗೂ ಹಳೆಯದಾಗಿದ್ದರೆ, ಭಟ್ಕಳ ಮುಸ್ಲೀಮರ ಇತಿಹಾಸ 300 ವರ್ಷಗಳದ್ದಾಗಿದೆ. ಆದರೂ ನಾಗಬನದ ಪೂಜೆಗೆ ಅಡ್ಡಿ ಬಂದಿತ್ತು. ಬಿಜೆಪಿ ಇಂತಹ ತಾತ್ವಿಕ ಕಾರಣವನ್ನು ಮುಂದೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತದೆ. ಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ ನಮ್ಮ ಧ್ಯೇಯವಾಗಿದೆ. ಕರ್ನಾಟಕ ಸರಕಾರವನ್ನು ಮೋದಿಯವರ ಸರಕಾರದೊಂದಿಗೆ ತುಲನೆ

ನಮ್ಮ ಪ್ರಶ್ನೆಗೆ ಸಿ.ಟಿ.ರವಿ ಕೊಟ್ಟ ಉತ್ತರವೇನು?

* ಖಾದರ್, ಜಾರ್ಜ, ಜಮೀರ್, ಹ್ಯಾರೀಸ್ ಅಂತವರಿಗೆ ಮತ ಹಾಕುತ್ತೇವೆ. ಭಟ್ಕಳದ 22 ಬೂತ್‍ಗಳಲ್ಲಿ ಬಿಜೆಪಿಗೆ ಮತ ಇಲ್ಲ ಎನ್ನುತ್ತೀರಿ. ಆದರೆ ಆ ಬೂತ್‍ಗಳಿಂದಲೂ ಹಿಂದೂಗಳೇ ಆಗಿರುವ ಕಾಂಗ್ರೆಸ್ಸಿನ ಆರ್.ಎನ್.ನಾಯ್ಕ, ಜೆ.ಡಿ.ನಾಯ್ಕ, ಮಂಕಾಳರಿಗೆ ಮತ ಬಂದಿದೆ. ನೀವು ಕಮ್ಯೂನಲ್ ಎನ್ನುವ ಕಾರಣದಿಂದ ಆ ರೀತಿ ಆಗಿರಬಹುದಲ್ಲವೇ?
    ಉ.  ಭಟ್ಕಳದ ಆ 22 ಬೂತ್‍ಗಳಂತೆ ದೇಶದ ಎಲ್ಲ ಬೂತ್‍ಗಳೂ ಆಗಿದ್ದರೆ ಮತ ಆರ್.ಎನ್.ನಾಯ್ಕ, ಜೆ.ಡಿ.ನಾಯ್ಕ, ಮಂಕಾಳಗೆ ಸಿಗುತ್ತಿತ್ತೇ ಊಹಿಸಿ 

* ಮಾತು ಮಾತಿಗೆ ನಾವು ಪಾಂಡವರು, ಉಳಿದವರು ಕೌರವರು ಎನ್ನುತ್ತೀರಿ. ನಿಮ್ಮದೇ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಾಂಡವರೆಲ್ಲ ಕೌರವರ ಪಾರ್ಟಿಯನ್ನು ಸೇರಲು ಸಜ್ಜಾಗಿದ್ದಾರಲ್ಲ?
  ಉ. ಅದು ಚುನಾವಣೆಯ ತಂತ್ರಗಾರಿಕೆ. ಅಂತಹ ತಂತ್ರಗಾರಿಕೆಯನ್ನು ನಾವೂ ಹೆಣೆಯುತ್ತೇವೆ ನೋಡುತ್ತಿರಿ

* ಧರ್ಮ, ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿ ಹೊಡೆದು ಹಾಕಿ ರಾಜಕಾರಣದಿಂದ ಚುನಾವಣೆಯನ್ನು ಗೆಲ್ಲಲು ಹೊರಟಿದೆ.....
   ಉ. ನಾವು ಯಾವತ್ತೂ ಹಿಂಸೆಯ ಪರ ಇಲ್ಲ. ಅಂತಹ ರಾಜಕಾರಣ ನಮಗೆ ಬೇಕಿಲ್ಲ. ನಾವು ಅದನ್ನು ಪ್ರೋತ್ಸಾಹಿಸುವುದೂ ಇಲ್ಲ. 

ಮಾಡಬೇಡಿ. ನಮಗೆ ಎರಡು ಅವಧಿಯಲ್ಲಿಯೂ ಬಹುಮತ ಸಿಗದ ಕಾರಣಕ್ಕೆ ಅವರಿವರನ್ನು ಸೇರಿಸಿಕೊಂಡು ಸರಕಾರ ರಚಿಸಿದ ಕಾರಣ ಇಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು. ಬಿಜೆಪಿ ಸರಕಾರ ಇದೆ ಎನ್ನುವ ಕಾರಣಕ್ಕೆ 302 ಪ್ರಕರಣಗಳು ಇಲ್ಲ. ಬಿಜೆಪಿಗರು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೆ ಒತ್ತಿ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಬೇಕು. ಪ್ರತಿ ಬೂತ್ ಕಾಯುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು, ಕೂಡಿಸುವ ರಾಜಕಾರಣದಿಂದಷ್ಟೇ ಯಶಸ್ಸು ಸಿಗುತ್ತದೆ. ದೂಡುವ ರಾಜಕಾರಣದಿಂದ ಅಲ್ಲ. ಮಹಾಭಾರತದಲ್ಲಿ ಪಾಂಡವರ ಸಂಖ್ಯೆ ಕಡಿಮೆ ಇದ್ದರೂ, ಕೌರವರಲ್ಲಿ ಬಲಶಾಲಿಗಳಿದ್ದರೂ ಗೆದ್ದಿದ್ದು ಪಾಂಡವರು. ಬಿಜೆಪಿ ಕಾರ್ಯಕರ್ತರಿಗೆ ಗೆಲುವೊಂದೇ ಮುಖ್ಯವಾಗಬೇಕು ಎಂದರು.

ಬಿಜೆಪಿಯಲ್ಲಿ ಕಾರ್ಯಕರ್ತರೇ ಮಾಲಕರು:
ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ, ದೇವೇಗೌಡರೇ ನಿರ್ಣಯ ಕೈಗೊಳ್ಳುತ್ತಾರೆ. ಕಾಂಗ್ರೆಸ್ ಸೋನಿಯಾ, ರಾಹುಲ್ ಮಾಲಕತ್ವದ ಕಂಪನಿಯಾಗಿದ್ದು, ಮಲ್ಲಿಕಾರ್ಜುನ ಖರ್ಗೆಗೆ ಹೆಚ್ಚೆಂದರೆ ಕಂಪನಿಯ ಮ್ಯಾನೇಜರ್ ಆಗಲು ಸಾಧ್ಯ. ಆದರೆ ಬಿಜೆಪಿಯಲ್ಲಿ ಕಾರ್ಯಕರ್ತರೇ ಪಕ್ಷದ ಮಾಲಕರಾಗಿದ್ದಾರೆ ಎಂದರು. ಶಾಸಕ ಸುನಿಲ್ ನಾಯ್ಕ, ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್, ಎನ್.ಎಸ್.ಹೆಗಡೆ, ಪ್ರಶಾಂತ ನಾಯ್ಕ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಡಿಗ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ ನಾಯ್ಕ, ಭಾಸ್ಕರ ದೈಮನೆ, ರವಿ ನಾಯ್ಕ ಜಾಲಿ, ಮುಕುಂದ ನಾಯ್ಕ, ರಾಜೇಶ ನಾಯ್ಕ, ದಿನೇಶ ನಾಯ್ಕ, ಗೋವರ್ಧನ ನಾಯ್ಕ, ಸುಬ್ರಾಯ ನಾಯ್ಕ, ಸುರೇಶ ನಾಯ್ಕ, ಶ್ರೀಕಾಂತ ನಾಯ್ಕ ಮೊದಲಾದವರು  ಉಪಸ್ಥಿತರಿದ್ದರು. 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...