ಪೊಲೀಸರಿಂದ ಕೊರೋನಾ ಸೊಂಕು ತಡೆ ಜಾಗೃತ ಜಾಥಾ

Source: sonews | By Staff Correspondent | Published on 6th April 2020, 9:55 PM | Coastal News |

ಮುಂಡಗೋಡ : ಪಟ್ಟಣದಲ್ಲಿ ಕೊರೋನ ವೈರಸ್ ತಡೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರವಿವಾರ ಸಂಜೆ ಪೊಲೀಸ್ ಇನ್ಸಪೇಕ್ಟರ ಶಿವಾನಂದ ಚಲವಾದಿ ನೇತೃತ್ವದಲ್ಲಿ ಪೊಲೀಸ ಜಾಥ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪೊಲೀಸರು ಯಾರೂ ಮನೆಯಿಂದ ಹೊರಗೆ ಬರಬೇಡಿ ಅವಶ್ಯಕ ವಸ್ತುಗಳನ್ನು ನಿಮ್ಮ ಮನೆಯ ಬಾಗಿಲಿಗೆ ಬರುತ್ತಿದೆ ಹೊರಗೆ ಬರುವ ಅವಶ್ಯಕತೆ ಇಲ್ಲಾ. ನಾವು ಯಾವೆಲ್ಲ ಕ್ರಮ ತೆಗೆದುಕೊಂಡಿರುವುದು ನಿಮಗೆ ಸೊಂಕು ತಗಲದಿರುವಂತೆ ನೋಡಿಕೊಳ್ಳುವುದು ನಿಮ್ಮ ಆರೋಗ್ಯ,ಪ್ರಾಣ ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸಮಾಡುತ್ತಿದ್ದೇವೆ ನೀವು ಸಹಕಾರ ನೀಡಿ ಆದ್ದರಿಂದ ಯಾರೂ ಹೊರಗೆ ಬರದೆ ನಮಗೆ ಸಹಕಾರ ನೀಡಿ ಎಂದು ಪಿಆಯ್ ಶಿವಾನಂದ ಚಲವಾದಿ ಸಾರ್ವಜನಿಕರಿಗೆ ಕೇಳುವಂತೆ ಬಿತ್ತರಿಸುತ್ತಿದ್ದರು.  

ಜಾಥ ಹೊರಟಿರುವಾಗ ಮಧ್ಯದಲ್ಲಿ ಪಡಿತರ ಅಂಗಡಿಯೊಂದರಲ್ಲಿ ಪಡಿತರದಾರರು ಸಮಾಜಿಕ ಅಂತರದಲ್ಲಿ ನಿಂತುಕೊಳ್ಳದೆ ಪಡಿತರ ಪಡೆಯುತ್ತಿರುವುದನ್ನು ಗಮನಿಸಿದ ಇನ್ಸಪೇಕ್ಟರ ಅಂಗಡಿ ಮಾಲಿಕನನ್ನು ಕರೆದು ಪಡಿತರವನ್ನು ಗ್ರಾಹಕರಿಗೆ ಗುಂಪಾಗಿ ನಿಲ್ಲಿಸದೇ  ಸಮಾಜಿಕ ಅಂತರದಲ್ಲಿ ಗ್ರಾಹಕರನ್ನು ನಿಲ್ಲುವಂತೆ ಮಾಡಿ ಪಡಿತರ ಪೂರೈಸಬೇಕು ಅಲ್ಲದೆ ಪಡಿತರದಾರರನ್ನು ಸಹ ಸಮಾಜಿಕ ಅಂತರದಲ್ಲಿ ನಿಂತು  ಪಡಿತರ ಪಡೆಯಬೇಕು ಹೀಗೆ ಹೇಳುತ್ತಿರುವುದು ಒಬ್ಬರಿಂದ ಇನ್ನೊಬ್ಬರಿಗೆ ಸೊಂಕು ತಗಲುವುದು ಬೇಡ ಇದಕ್ಕಾಗಿ ಹೇಳುತ್ತಿರುವು ಎಂದರು ಈ ಸಂದರ್ಭದಲ್ಲಿ  ಸಬ್ ಇನ್ಸಪೇಕ್ಟರ ಬಸವರಾಜ ಮಬನೂರ ಉಪಸ್ಥಿತರಿದ್ದರು.

Read These Next

ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ...