ಕಾರವಾರ: ಜನವರಿ 26 ರಿಂದ ಜಿಲ್ಲೆಯಾದ್ಯಂತ ಸಂವಿಧಾನ ಜಾಗೃತಿ ಜಾಥಾ

Source: S O News | By I.G. Bhatkali | Published on 17th January 2024, 12:54 AM | Coastal News |

ಕಾರವಾರ : ದೇಶದ ಸಂವಿಧಾನದಆಚರಣೆ  ಮತ್ತುಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜನವರಿ 26 ರಿಂದ ಜಿಲ್ಲೆಯಾದ್ಯಂತ ಆಚರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು. ಅವರು ಇಂದು ಜಿಲ್ಲಾಧಿಕಾರಿಕಚೇರಿಯಲ್ಲಿ ನಡೆದ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸ್ತಬ್ದಚಿತ್ರ ರಚನೆಗೆ ಹಾಗೂ ಜಿಲ್ಲೆಯಾದ್ಯಂತ ಅದರ ಸಂಚಾರಕ್ಕೆ ಮೆರವಣಿಗೆ ಮಾರ್ಗವನ್ನು ಸಿದ್ದಪಡಿಸಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಸ್ತಬ್ದಚಿತ್ರರಚನೆಗೆ,  ಭಾರತದ ಸಂವಿಧಾನ ಪೀಠಿಕೆ, ನ್ಯಾಯ , ಸಾಮಾಜಿಕ, ಆರ್ಥಿಕ ಮತ್ತುರಾಜಕೀಯ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಭಾರತದ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ ದಿಗ್ಗಜರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಹಾಗೂ ಸ್ಥಳೀಯ ಕಲೆ ಸಂಸ್ಕøತಿ ಇತ್ಯಾದಿಗಳನ್ನು ಒಳಗೊಂಡಿರುವ ಸ್ತಬ್ದಚಿತ್ರ, ಅನುಚ್ಚೇದ 41ರ, ರಾಜ್ಯವು ತನ್ನ ಆರ್ಥಿಕ ಸಾಮಥ್ರ್ಯ ಮತ್ತು ಅಭಿವೃದ್ದಿಯ ಪರಿಮಿತಿಯಲ್ಲಿ ಉದ್ಯೋಗ ಶಿಕ್ಷಣ ಹಕ್ಕುಗಳನ್ನು ಪಡೆಯಲು ಹಾಗೂ ನಿರುದ್ಯೋಗ, ವೃದ್ದಾಪ್ಯ, ಅನಾರೋಗ್ಯ ಮತ್ತು ಅಸಮರ್ಥತೆಯ ಸಂದರ್ಭಗಳಲ್ಲಿ ಸಹಾಯ ನೀಡಲು ಪರಿಣಾಮಕಾರಿ ಅವಕಾಶಗಳನ್ನು ಕಲ್ಪಿಸುವುದಲ್ಲದೆ ಇನ್ನಿತರ ಅರ್ಹ ಬೇಡಿಕೆಗಳ ಪ್ರಕರಣಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಐದು ಖಾತರಿಗಳನ್ನು ಜಾರಿಗೊಳಿಸಿದೆ (ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆ) ಈ ವಿಷಯಗಳನ್ನು ಒಳಗೊಂಡ ಕನಿಷ್ಠ ಒಂದು ಸ್ತಬ್ದಚಿತ್ರ ಇರಬೇಕಾಗಿದ್ದು, ಈ ವಿಷಯಗಳನ್ನು ಸಾಧ್ಯವಾದಷ್ಟು ಸೃಜನಶೀಲವಾಗಿಸಲು ಅವಕಾಶವಿದೆ ಎಂದರು.

ಜಾಥಾ ಸಂದರ್ಭದಲ್ಲಿ ಮೇಲಿನ ವಿಷಯಗಳನ್ನು ಒಳಗೊಂಡ ಭಾಷಣಗಳು, ನಾಟಕ ಮತ್ತು ರಂಗಭೂಮಿಯ ಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಲು ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಾಥಾ ಮೆರವಣಿಗೆಯು ಜಿಲ್ಲೆಯ ಎಲ್ಲಾ ಗ್ರಾಮಗಳ ಮೂಲಕ ಹಾದು ಹೋಗುವಂತೆ ಮಾರ್ಗ ಸಿದ್ದಪಡಿಸಬೇಕು. ತಾಲೂಕುಗಳ ಗಡಿಯಲ್ಲಿ  ಸಂಬಂದಪಟ್ಟ ತಾಲೂಕಿನ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಥಾವನ್ನು ಸ್ವಾಗತಿಸಲು ಸಿದ್ದತೆ ಮಾಡಿಕೊಳ್ಳಿ, ಅಂಗನವಾಡಿ ಕಾಂiÀರ್iಕರ್ತೆಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲಾ ಸರಕಾರಿ ನೌಕರರುಜಾಥಾದಲ್ಲಿ ಭಾಗವಹಿಸಬೇಕು ಎಂದರು.

ಜಾಥಾತಂಗುವ ಸ್ಥಳಗಳಲ್ಲಿ ಸಂವಿಧಾನ ಮತ್ತು ಸಂಬಂಧಿತ ವಿಷಯಗಳ ಕುರಿತು ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಬೇಕು. ಜಾಥಾದಲ್ಲಿ  ಸಾರ್ವಜನಿಕರಿಗೆ ಸಂವಿಧಾನ ಮಹತ್ವ ಕುರಿತು ಪುಸ್ತಕಗಳನ್ನು ಹಾಗೂ  ಸಂವಿಧಾನ ಪೀಠಿಕೆಯ ಪ್ರತಿಗಳನ್ನು ವಿತರಿಸಲುಕ್ರಮ ಕೈಗೊಳ್ಳಿ.  ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪ.ಜಾತಿ, ಪಂಗಡಗಳ ಜನರ ಮನೆಗೆ ಭೇಟಿ ನೀಡಿ, ಅವರು ಇದುವರೆಗೂ ಸರ್ಕಾರದ ಐದು ಖಾತರಿ ವ್ಯಾಪ್ತಿಗೆ ಒಳಪಡದೇ ಇದ್ದು, ಯೋಜನೆಗೆ ಅರ್ಹರಿದ್ದಲ್ಲಿ ಅವರಿಗೆ ಯೋಜನೆಯ ಸೌಲಭ್ಯ ಒದಗಿಸಲು ಎಲ್ಲಾ ಅಗತ್ಯ ನೆರವು ನೀಡಬೇಕು ಎಂದರು.

ಕಾಂiÀರ್iಕ್ರಮಕ್ಕೆ ಜಿಲ್ಲೆಯ ಗ್ರಾಮ ಪಂಚಾಯತ್ ಗಳು, ನಗರಸ್ಥಳೀಯ ಸಂಸ್ಥೆಗಳು ಹಾಗೂ  ಎಲ್ಲಾ ಸಂಘ ಸಂಸ್ಥೆಗಳ ಅಗತ್ಯ ನೆರವು ಪಡೆದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅತ್ಯಂತ ವೈಭವಯುತವಾಗಿ ಆಯೋಜಿಸುವ ಮೂಲಕ ಸಾರ್ವಜನಿಕರಿಗೆ, ಯುವಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ದೇಶದ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕುಎಂದರು.

ಸಭೆಯಲ್ಲಿಜಿಲ್ಲಾ ಪಂಚಾಯತ್ ಸಿಇಒ ಈಶ್ವರಕುಮಾರಕಾಂದು, ಅಪರಜಿಲ್ಲಾಧಿಕಾರಿ  ಪ್ರಕಾಶ್ ರಜಪೂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next