ರಾಹುಲ್ ಗಾಂಧಿಯ ಅನರ್ಹತೆ ವಾಪಸ್ ಪಡೆಯುವಲ್ಲಿ ವಿಳಂಬ; ಕಾಂಗ್ರೆಸ್ ವಾಗ್ದಾಳಿ

Source: Vb | By I.G. Bhatkali | Published on 7th August 2023, 11:08 AM | National News |

ಹೊಸದಿಲ್ಲಿ: ಸಂಸತ್ ಸದಸ್ಯರನ್ನಾಗಿ ರಾಹುಲ್ ಗಾಂಧಿಯವರ ಮರುಸ್ಥಾಪನೆಯಲ್ಲಿ ವಿಳಂಬಕ್ಕಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಮುಂದಿನ ಕ್ರಮಕ್ಕಾಗಿ ಪಕ್ಷವು ಸೋಮವಾರದವರೆಗೆ ಕಾಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು.

ರಾಹುಲ್ ಸಂಸದನಾಗಿ ತನ್ನ ಮರುಸ್ಥಾಪನೆಯ ಕುರಿತು ಲೋಕಸಭಾ ಸಚಿವಾಲಯದ ಅಧಿಸೂಚನೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸೋಮವಾರ ಸಂಸತ್ತಿಗೆ ಆಗಮಿಸುವ ಸಾಧ್ಯತೆಯಿದೆ ಎಂಬ ವದಂತಿಗಳೆದ್ದಿವೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ವೇಣುಗೋಪಾಲ್ ನಿರಾಕರಿಸಿದರು.

ಕೆಳ ನ್ಯಾಯಾಲಯದಿಂದ ದೋಷ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿರುವುದರಿಂದ ಅನರ್ಹತೆ ಸೇರಿದಂತೆ ಎಲ್ಲ ಕಾನೂನು ಕ್ರಮಗಳು ರದ್ದುಗೊಂಡಿವೆ. ತನ್ನ ಅನರ್ಹತೆ ವಾಪಸಾತಿಗೆ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ರಾಹುಲ್ ಸ್ಪೀಕರ್ ಕಚೇರಿಯನ್ನು ಸಂಪರ್ಕಿಸಿದ್ದರು

ಆದರೆ ಅವರಿಗೆ ಭೇಟಿಗೆ ಸಮಯ ನೀಡಲು ನಿರಾಕರಿಸಿರುವ ಸ್ಪೀಕರ್‌ ತನ್ನ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ಅವರಿಗೆ ಸೂಚಿಸಿದ್ದಾರೆ ಎಂದು ವೇಣುಗೋಪಾಲ್‌ ತಿಳಿಸಿದರು.

ಸಂಸತ್ತಿನಲ್ಲಿ ತನ್ನ ಪ್ರತಿನಿಧಿಯನ್ನು ಕಳೆದುಕೊಂಡ ಕ್ಷೇತ್ರವು ಬಹಳಷ್ಟು ತೊಂದರೆಗಳನ್ನು ಬಳಿಕ ವಯನಾಡ್‌ ಎದುರಿಸುತ್ತಿದೆ ಎಂದು ಬೆಟ್ಟು ಮಾಡಿದ ಅವರು, ರಾಹುಲ್ ಅನರ್ಹತೆ ಹಲವಾರು ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದ್ದು, ವಯನಾಡ್ ಜನರಿಗೆ ಅವರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂದರು. ಸಂಸದ ಹುದ್ದೆಯ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಂಡಿಲ್ಲ. ಆದರೆ ಕೇಂದ್ರವು ರಾಹುಲ್ ಅವರಿಗೆ ಚಿತ್ರಹಿಂಸೆಯನ್ನು ನೀಡುತ್ತಿದೆ. ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪು ನೀಡಿದ ಬಳಿಕ ಲೋಕಸಭಾ ಸ್ಪೀಕರ್ ರಾಹುಲ್ ಅವರಿಗೆ ಭೇಟಿ ಅವಕಾಶವನ್ನು ನಿರಾಕರಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ರಾಹುಲ್ ಪರವಾಗಿ ತೀರ್ಪು ನೀಡಿರುವುದರಿಂದ ಅವರ ಸಂಸದ ಸ್ಥಾನ ಮರುಸ್ಥಾಪನೆಗೆ ಲೋಕಸಭಾ ಸಚಿವಾಲಯವು ಬದ್ಧವಾಗಿದೆ ಎಂದು ಹೇಳಿದ ವೇಣುಗೋಪಾಲ್, ಲೋಕಸಭಾ ಸಚಿವಾಲಯವು ರಾಹುಲ್‌ರನ್ನು ಅನರ್ಹಗೊಳಿಸಲು ಅತ್ಯಂತ ಚುರುಕಾಗಿ ಕ್ರಮವನ್ನು ಕೈಗೊಂಡಿತ್ತು ಮತ್ತು ತನ್ನ ಅಧಿಕೃತ ನಿವಾಸವನ್ನು ತೆರವುಗೊಳಿಸುವಂತೆ ಕೇಂದ್ರವು ಅವರನ್ನು ಬಲವಂತಗೊಳಿಸಿತ್ತು.

ಆದರೆ ಈಗ ಅವರ ಸದಸ್ಯತ್ವ ಮರುಸ್ಥಾಪನೆಗಾಗಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಲೋಕಸಭೆಯಲ್ಲಿ ರಾಹುಲ್ ಭಾಷಣಕ್ಕೆ ಬಿಜೆಪಿ ಹೆದರಿಕೊಂಡಿದೆ ಎಂದು ಭಾವಿಸಿದ್ದೇನೆ. ಲೋಕಸಭೆಯಲ್ಲಿ ರಾಹುಲ್ ಉಪಸ್ಥಿತಿಯ ಬಗ್ಗೆ ಮೋದಿಯವರಿಗೆ ಭೀತಿಯಿದ್ದರೆ ಅವರು ಅದನ್ನು ಸ್ಪಷ್ಟಪಡಿಸಬೇಕು ಎಂದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...