ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮುದಾಯ ಬದುಕಿನ ಶಿಬಿರ ಹಾಗೂ ಎನ್.ಎಸ್.ಎಸ್. ಘಟಕಕ್ಕೆ  ಚಾಲನೆ

Source: sonews | By Staff Correspondent | Published on 20th September 2019, 12:19 AM | Coastal News |

ಭಟ್ಕಳ: ಇಲ್ಲಿನ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮುದಾಯ ಬದುಕಿನ ಶಿಬಿರ ಹಾಗೂ ಎನ್.ಎಸ್.ಎಸ್. ಘಟಕದ ಉದ್ಘಾಟನೆ ನಡೆಯಿತು. ಶಿಬಿರ ಹಾಗೂ ಎನ್ ಎಸದ್‍ಎಸ್. ಘಟಕವನ್ನು ಕರ್ನಾಟಕ ವಿ.ವಿ.ಯ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಎಮ್.ಬಿ. ದಳಪತಿ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಎನ್.ಎಸ.ಎಸ್.ಯೋಜನೆಯ ಕುರಿತು ಮಾಹಿತಿ ನೀಡಿ ಶಿಕ್ಷಣದೊಂದಿಗೆ ಸಮಾಜಸೇವೆ ಮತ್ತು ಸಮಾಜ ಸೇವೆಯೊಂದಿಗೆ ಶಿಕ್ಷಣ ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳಲ್ಲಿ ನಾಯಕತ್ವ ಗುಣ, ಸಮಾಜಸೇವಾ ಭಾವನೆ ಬೆಳೆಸಲು ಇಂಥ ಶಿಭಿರಗಳು ಸಹಾಯಕ ಎಂದು ನುಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟನ ಅಧ್ಯಕ್ಷರ ಡಾ.ಸುರೇಶ ನಾಯಕ ಮಾತನಾಡಿ ಶಿಕ್ಷಕರಾಗುವವರಿಗೆ ಸಮುದಾಯದೊಡನೆ ಬೆರೆಯುವ, ಸಮುದಾಯದ ಪ್ರಗತಿಗೆ ಕಾರ್ಯಮಾಡುವ ಸೇವಾ ಮನೋಭಾವವಿರಬೇಕು ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಚಾರ್ಯ ಡಾ. ಆರ್. ನೆರಸಿಂಹ ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. 

ವೇದಿಕೆಯಲ್ಲಿ ವಿದ್ಯಾಂಜಲಿ ಪಬ್ಲಿಕ್ ಸ್ಕೂಲಿನ ಪ್ರಾಚಾರ್ಯರಾದ ಮಮತಾ ಕೆ. ಸಮುದಾಯ ಬದುಕಿನ ಶಿಭಿರದ ಕಾರ್ಯಾಧ್ಯಕ್ಷರಾದ ರಶ್ಮಿ ಏ.ಆರ್, ವಿದ್ಯಾರ್ಥಿ ಕಾರ್ಯದರ್ಶಿ ಚಂದ್ರಪ್ರಭಾ ಕೊಡಿಯಾ ಹಾಗೂ ಎನ್.ಎಸ್.ಎಸ್. ಘಟಕದ ಕಾರ್ಯಧ್ಯಕ್ಷರಾದ ನಾಗರಾಜ ಮಡಿವಾಳ, ವಿದ್ಯಾರ್ಥಿ ಪ್ರತಿನಿದಿ ಪೂರ್ಣಿಮಾ ಉಪಸ್ಥಿತರಿದ್ದರು. 

ಪ್ರಶಿಕ್ಷಣಾರ್ಥಿಗಳಾದ ಮೇಘಾ ಸಂಗಡಿಗರು ಪ್ರಾರ್ಥಿಸಿದರೆ ಅಂಬಿಕಾ ಮತ್ತು ರೂಪಾ ಗೌಡ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...