ಭಟ್ಕಳ ಜೆಸಿಐ ಮತ್ತು ಪುರಸಭೆ ವತಿಯಿಂದ ನಡೆದ ಪೌರ ಕಾರ್ಮಿಕರ ಆರೋಗ್ಯ ಶಿಬಿರ.

Source: SO News | By Laxmi Tanaya | Published on 30th July 2021, 9:51 PM | Coastal News |

ಭಟ್ಕಳ : ಜೆಸಿಐ ಭಟ್ಕಳ ಸಿಟಿ ಹಾಗೂ  ಪುರಸಭೆ ಭಟ್ಕಳ ಇದರ  ಸಹಯೋಗದೊಂದಿಗೆ  ಇಲ್ಲಿನ ಪುರಸಭೆ ಸಭಾಭವನದಲ್ಲಿ ಪೌರ ಕಾರ್ಮಿಕರ ಆರೋಗ್ಯ ಶಿಬಿರವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 ಪುರಸಭೆ ಅಧ್ಯಕ್ಷ  ಪರ್ವೇಜ್ ಕಾಶಿಮ್ ಜಿ ಅವರು ಗಿಡಗಳಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,  ಪೌರಕಾರ್ಮಿಕರು ಪುರಸಭೆಯ ಬೆನ್ನೆಲುಬಾಗಿದ್ದು,  ಪೌರಕಾರ್ಮಿಕರ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಅಧ್ಯಕ್ಷರಾಗಿದ್ದ  ಜಿಸಿಐ ಭಟ್ಕಳ ಸಿಟಿಯ ನಿಕಟಪೂರ್ವ ಅಧ್ಯಕ್ಷ ಜೆಸಿ ಸುರೇಶ್ ಪೂಜಾರಿ ಅವರು ಜೆಸಿಐನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಸಿಸ್ಟೆಂಟ್ ಕಮಿಷನರ್  ಶ್ರೀಮತಿ ಮಮತಾ ದೇವಿ ಮಾತನಾಡಿ, ಪೌರಕಾರ್ಮಿಕರು ಹೇಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.  ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಸಮುದಾಯ ವ್ಯವಹಾರಗಳ ಅಧಿಕಾರಿ, ವೇಣುಗೋಪಾಲ ಶಾಸ್ತ್ರಿ,  ಮಾತನಾಡಿ,  ಆರೋಗ್ಯಕ್ಕೆ   ಸಂಬಂಧಿಸಿದ ವಿಚಾರಗಳ ಬಗ್ಗೆ ತಿಳಿಸಿದರು. 

ವೇದಿಕೆಯಲ್ಲಿ ಪುರಸಭೆಯ ಮುಖ್ಯ ಅಧಿಕಾರಿಯಾದ ಶ್ರೀಮತಿ ರಾಧಿಕಾ ಎನ್ ಎಸ್, ಜೆಸಿಐ ವಲಯ 15ರ  ಜೋನ್ ಪ್ರೋಗ್ರಾಮ್ ಕಮಿಟಿ ಚೇರ್ಮೆನ್ ಸೆನೆಟರ್ ಅಬ್ದುಲ್ ಜಬ್ಬರ್ ಸಾಹೇಬ್, ಜೆಸಿಐ ಭಟ್ಕಳ ಸಿಟಿಯ ನಿಕಟಪೂರ್ವ ಕಾರ್ಯದರ್ಶಿ  ಪಾಂಡುರಂಗ ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣಾ ವೈದ್ಯರಾದ  ಅಬ್ದುಲ್ ಖಾದಿರ್ , ಹೆಲ್ತ್ ಕೇರ್ ಹಾಸ್ಪಿಟಲ್ ಹೆಡ್ ನರ್ಸ್  ಆಯಿಷಾ ನಾಸೀರ್, ಅಕ್ಷತಾ, ಕಾರ್ಯಕ್ರಮದ   ಮೇಲ್ವಿಚಾರಕರಾದ ಶ್ರೀಮತಿ ಸೋಜಿಯಾ ಸೋಮನ್ ಆರೋಗ್ಯ ಅಧಿಕಾರಿ ಭಟ್ಕಳ, ಪುರಸಭಾ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಹಾಗೂ  ಜೆಸಿಐ ಭಟ್ಕಳ ಸಿಟಿಯ ಸದಸ್ಯರು ಉಪಸ್ಥಿತರಿದ್ದರು. 

ಶಿಬಿರದಲ್ಲಿ 50ಕ್ಕೂ ಹೆಚ್ಚಿನ ಪೌರಕಾರ್ಮಿಕರ ಆರೋಗ್ಯ ಹಾಗೂ  ತಪಾಸಣೆ  ಹಾಗೂ ನೇತ್ರ ತಪಾಸಣೆಯನ್ನು  ಸನಾ  ಆಪ್ಟಿಕ್ಸ್  ಭಟ್ಕಳ ಅವರ ಸಹಯೋಗದೊಂದಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜೆಸಿ  ಭಟ್ಕಳ ಸಿಟಿಯ ನಿಕಟಪೂರ್ವ  ಅಧ್ಯಕ್ಷ ಸುರೇಶ್ ಪೂಜಾರಿ   ಸರ್ವರನ್ನು ಸ್ವಾಗತಿಸಿ ಗೌರವಿಸಿದರು. ನಿಕಟಪೂರ್ವ ಕಾರ್ಯದರ್ಶಿಯಾದ ಪಾಂಡುರಂಗ ನಾಯ್ಕ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...