ಚೀನಿ ಲೋನ್ ಆ್ಯಪ್ ಪ್ರಕರಣ; ಪೇಟಿಎಂ, ಇತರ ಪೇಮೆಂಟ್ ಗೇಟ್‌ವೇ ಕಚೇರಿಗಳ ಮೇಲೆ ಈ.ಡಿ. ದಾಳಿ; 17 ಕೋಟಿ ರೂ. ಜಪ್ತಿ

Source: Vb | By I.G. Bhatkali | Published on 4th September 2022, 7:13 AM | National News |

ಹೊಸದಿಲ್ಲಿ: ಚೀನಿ ವ್ಯಕ್ತಿಗಳ ನಿಯಂತ್ರಣದ ಅಕ್ರಮ ತ್ವರಿತ ಸ್ಮಾರ್ಟ್‌ ಫೋನ್ ಆಧಾರಿತ ಸಾಲಗಳ ಕುರಿತು ತನ್ನ ತನಿಖೆಯ ಅಂಗವಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಬೆಂಗಳೂರಿನಲ್ಲಿನ ರೇಝರ್‌ಪೇ, ಪೇಟಿಎಂ ಮತ್ತು ಕ್ಯಾಷ್ ಫ್ರೀಗಳಂತಹ ಆನ್‌ಲೈನ್ ಪೇಮೆಂಟ್ ಗೇಟ್‌ ವೇಗಳ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ್ದು, ಶೋಧ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿದೆ.

ಶುಕ್ರವಾರ ಬೆಂಗಳೂರಿನ ಆರು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿದ್ದು, ಶನಿವಾರವೂ ಇದು ಜಾರಿಯಲ್ಲಿದೆ ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ.

ದಾಳಿಯ ವೇಳೆ ಈ ಚೀನಿ ವ್ಯಕ್ತಿಗಳಿಂದ ನಿಯಂತ್ರಿತ ಘಟಕಗಳ ಮರ್ಚಂಟ್ ಐಡಿಗಳು ಮತ್ತು ಬ್ಯಾಂಕ್‌ ಖಾತೆಗಳಲ್ಲಿದ್ದ 17 ಕೋ.ರೂ.ಯನ್ನು ತಾನು ಜಪ್ತಿ ಮಾಡಿರುವುದಾಗಿ ಈ.ಡಿ. ತಿಳಿಸಿದೆ.

ಭಾರತೀಯರ ನಕಲಿ ದಾಖಲೆ ಗಳನ್ನು ಬಳಸಿ ಅವರನ್ನು ಡಮ್ಮಿ ನಿರ್ದೇಶಕರನ್ನಾಗಿಸುವ ಮೂಲಕ ಅಪರಾಧದ ಹಣವನ್ನು ಸೃಷ್ಟಿಸುವುದು ಈ ಘಟಕಗಳ ಕಾರ್ಯತಂತ್ರವಾಗಿದೆ ಎಂದು ಈ.ಡಿ.ಆರೋಪಿಸಿದೆ.

ಈ ಘಟಕಗಳು ಪೇಮೆಂಟ್ ಗೇಟ್‌ವೇಗಳು/ ಬ್ಯಾಂಕುಗಳಲ್ಲಿಯ ತಮ್ಮ ವಿವಿಧ ಮರ್ಚಂಟ್ ಐಡಿಗಳು/ಖಾತೆಗಳ ಮೂಲಕ ತಮ್ಮ ಶಂಕಿತ/ಅಕ್ರಮ ವ್ಯವಹಾರವನ್ನು ನಡೆಸುತ್ತಿದ್ದವು ಎನ್ನುವುದು ಗಮನಕ್ಕೆ ಬಂದಿದೆ. 

ರೇಝರ್ ಪೇ, ಕ್ಯಾಷ್‌ ಫ್ರೀ, ಪೇಟಿಎಂ ಮತ್ತು ಚೀನಿ ವ್ಯಕ್ತಿಗಳು ನಡೆಸುತ್ತಿರುವ ಘಟಕಗಳಲ್ಲಿ ಶೋಧ ಕಾರ್ಯಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಈಡಿ ಹೇಳಿಕೆಯಲ್ಲಿ ತಿಳಿಸಿದೆ.

ಚೀನಿಯರಿ೦ದ ನಿಯ೦ತ್ರಿತ ಘಟಕಗಳು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಾಲತಾಣದಲ್ಲಿ ನೋ೦ದಾಯಿತ ವಿಳಾಸಗಳಿ೦ದ ಕಾರ್ಯಾಚರಿಸುತ್ತಿಲ್ಲ ಮತ್ತು ಅವು ನಕಲಿ ವಿಳಾಸಗಳನ್ನು ಹೊಂದಿವೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣವು ಈ ಘಟಕಗಳ/ವ್ಯಕ್ತಿಗಳ ಮೊಬೈಲ್ ಆ್ಯಪ್ ಗಳ ಮೂಲಕ ಸಣ್ಣ ಮೊತ್ತದ ಸಾಲಗಳನ್ನು ಪಡೆದುಕೊಂಡಿರುವ ಸಾರ್ವಜನಿಕರ ಸುಲಿಗೆ ಮತ್ತು ಅವರಿಗೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅವುಗಳ ವಿರುದ್ಧ ಬೆಂಗಳೂರು ಪೊಲೀಸ್‌ನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾದ ಕನಿಷ್ಠ 18 ಎಫ್‌ಐಆರ್‌ಗಳನ್ನು ಆಧರಿಸಿದೆ ಎಂದು ಈ.ಡಿ.ತಿಳಿಸಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...