ಕಾರವಾರ: ಚದುರಂಗ ತರಬೇತಿ.

Source: S O News | By I.G. Bhatkali | Published on 10th November 2023, 8:07 PM | Coastal News |

ಕಾರವಾರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಮತ್ತು ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಸ್ಥೆ ಕಾರವಾರ ಇವರ ಸಹಯೋಗದಲ್ಲಿ ನ.26 ರಂದು ಒಂದು ದಿನದ ಚದುರಂಗ ತರಬೇತಿ ಕಾರ್ಯಕ್ರಮವು ಕಾರವಾರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದಾರೆ.

 ಚದುರಂಗ ತರಬೇತಿಯನ್ನು ಪ್ರಾರಂಭಿಕ ಹಂತ ಹಾಗೂ ಉನ್ನತ ಹಂತದ ಎರಡು ವಿಭಾಗಗಳಲ್ಲಿ ನೀಡಲಾಗುವುದು. ಆಸಕ್ತರು ಎರಡು ವಿಭಾಗಗಳಲ್ಲಿ ತರಬೇತಿಯನ್ನು ಪಡೆಯಬಹುದಾಗಿದೆ. ಪ್ರಾರಂಭಿಕ ಹಂತ (Biginers)  ಬೆಳಗ್ಗೆ 10 ರಿಂದ 1  ಗಂಟೆಯವರೆಗೆ ಶುಲ್ಕ ರೂ 200,  ಉನ್ನತ ಹಂತ (Advance) ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಶುಲ್ಕ ರೂ 300  ಅಂತರಾಷ್ಟ್ರೀಯ ಮಟ್ಟದ ಚದುರಂಗ ಆಟಗಾರ ಹಾಗೂ ಅನುಭವಿ ಚೆಸ್ ತರಬೇತುದಾರರಾದ ಮತ್ತು ಚದುರಂಗದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವ ರಾಮಚಂದ್ರ ಭಟ್ ಅವರು ಚದುರಂಗ ತರಬೇತಿಯನ್ನು ನೀಡಲಿದ್ದು, ಚದುರಂಗದ ಆರಂಬಿಕ ಆಟಗಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮತ್ತು ಆಸಕ್ತರು ಈ ತರಬೇತಿಯನ್ನು ಪಡೆಯಬಹು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ಚದುರಂಗ ತರಬೇತಿಯ ರಾಮಚಂದ್ರ ಭಟ್ 9481360128 ವ್ಯಾಟ್ಸಪ್ ಮೂಲಕ ಸಂಪರ್ಕಬಹುದೆಂದು ಕ ರಾ ಸ ನೌ ಸಂಘ ಜಿಲ್ಲಾ ಶಾಖೆ ಜಿಲ್ಲಾಧ್ಯಕ್ಷ ಸಂಜೀವಕುಮಾರ ಎಸ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...