ಯುವಕರಿಂದಲೇ ಬದಲಾವಣೆ ಸಾಧ್ಯ - ಸಚಿವ ಪ್ರಲ್ಹಾದ ಜೋಶಿ

Source: SO News | By Laxmi Tanaya | Published on 8th January 2023, 10:53 PM | State News | Don't Miss |

ಧಾರವಾಡ : ಯಾವುದೇ ಒಂದು ವ್ಯವಸ್ಥೆ ಬದಲಾವಣೆಗೆ ಯುವ ಮನಸ್ಸು ಯುವ ಹೃದಯಗಳೆ ಮಹತ್ವ ಈ ದೇಶದಲ್ಲಿ ಯುವಕರಿಂದ ಬದಲಾವಣೆಯಾಗುತ್ತಿದೆಯೆಂದು ಗಣಿ ಮತ್ತು ಕಲ್ಲಿದಲು ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.

 ಅವರು ಹುಬ್ಬಳ್ಳಿಯ ಬಿವಿಬಿ ಕಾಲೇಜು ಬಯೋಟೆಕ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ 26ನೇ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಲಾಂಚನ ಹಾಗೂ ಮ್ಯಾಸ್ಕಾಟ್‍ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರೊಂದಿಗೆ ಏಕಕಾಲಕ್ಕೆ ವರ್ಚುವಲ್ ಮೂಲಕ ಅನಾವರಣ ಮಾಡಿ ಮಾತನಾಡಿದರು.

ಮೋದಿ ಅವರಿಗೆ 73 ವರ್ಷ, ಅವರು ಇನ್ನು ಹೃದಯದಲ್ಲಿ ಯುವಕರಿದ್ದಾರೆ. ಮೋದಿ ನಿತ್ಯ ಹೊಸ ಹೊಸ ಅಲೋಚನೆ ಮಾಡುತ್ತಾರೆ. ಇಡಿ ಜಗತ್ತು ಭಾರತದ ಆಲೋಚನೆಗಳನ್ನ ಸ್ವೀಕಾರ ಮಾಡುತ್ತಿದೆ. ಭಾರತದ ಯೋಗವನ್ನು ಜಗತ್ತು ಸ್ವೀಕಾರ ಮಾಡುತಿದೆ. ಯುವ ಉತ್ಸವಗಳು ನಡಿತಿರೋದು ಮನಸ್ಸು ಪುನಶ್ಚೇತನಗೊಳುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.

ಯುವಜನೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಭಾವನೆಗಳನ್ನು ಅರಳಿಸೋ ಕೆಲಸ ಮಾಡುತ್ತಿದೆವೆ. ಭಾವನೆಗಳನ್ನು ಕೆರಳಿಸೋ ಕೆಲಸ ಮಾಡಬಾರದು. ಜಗತ್ತು ಭಾರತದ ಕಡೆ ನೋಡುತಿದೆ. 21 ನೇ ಶತಮಾನ, ಭಾರತದ ಶತಮಾನ, 19 ನೇ ಶತಮಾನ, ಇಂಗ್ಲೆಂಡ್ ಶತಮಾನ, 20ನೇ ಶತಮಾನ ಅಮೇರಿಕಾ ಶತಮಾನ. 21 ನೇ ಶತಮಾನ ಭಾರತದ ಆಗಬೇಕು ಎಂದರು.

ಆಧುನಿಕ ವಿಜ್ಞಾನ ತಂತ್ರಜ್ಞಾನದಲ್ಲಿ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಜಿ-20 ಸಭೆಯ ನಂತರ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಒಂದು ಜಗತ್ತು ಒಂದು ಭವಿಷ್ಯದಂತಹ ಯೋಜನೆ ಭಾರತದ ಮುಂದಿದೆ. ಭಾರತವು ಇಡೀ ಜಗತ್ತಿನಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಈಗ 5ನೇ ಸ್ಥಾನದಲ್ಲಿದೆ. 2027ಕ್ಕೆ 3ನೇ ಸ್ಥಾನಕ್ಕೆ ತಲುಪಲಿದೆಯೆಂದ ಸಚಿವರು ಯವಕರನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಲಾಗುತ್ತಿದೆ ಎಂದರು.

ನಮ್ಮ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಮತ್ತು ಧಾರವಾಡದ ಕೆಸಿಡಿ ಕಾಲೇಜು ಮೈದಾನದಲ್ಲಿ  ಯುವಜನೋತ್ಸವ ನಡೆಯಲಿದೆ. ಜನೇವರಿ 12 ರಂದು ಹುಬ್ಬಳ್ಳಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಯುವಕರನ್ನು ಉದ್ದೇಶಿಸಿ ಮೋದಿ ಮಾತಾಡಲಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೆಶ್ ಜಗಲಾಸರ, ಕ್ರಿಡಾ ಇಲಾಖೆ ಮುಲೈ ಮಲ್ಲೈನ್, ಡಾ.ಅಶೋಕ ಶೆಟ್ಟರ್ ಮುಂತಾದವರು ಉಪಸ್ಥಿತರಿದ್ದರು.

ಲಾಂಛನ ಮತ್ತು ಮ್ಯಾಸ್ಕಾಟ್ ರಚನೆಗಾಗಿ ದೇಶಾದ್ಯಂತ ಆಸಕ್ತ ಕ್ರಿಯಾಶೀಲ ಪ್ರತಿನಿಧಿಗಳು ಭಾಗವಹಿಸಿದ್ದರು.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ - ಭಾರತ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ - ಕರ್ನಾಟಕ ಸರ್ಕಾರ, ರಾಷ್ಟ್ರೀಯ ಸೇವಾ ಯೋಜನಾ ಕೋಶ - ಕರ್ನಾಟಕ ಸರ್ಕಾರ, ಹಾಗೂ ಎನ್. ವೈ. ಕೆ. ಎಸ್., ಕರ್ನಾಟಕ ಸಹಯೋಗದೊಂದಿಗೆ “ಲೋಗೋ, ಮ್ಯಾಸ್ಕಾಟ್ ಮತ್ತು ಥೀಮ್ ರಚನಾ ಸ್ಪರ್ಧೆ”ಯನ್ನು ಆಹ್ವಾನಿಸಲಾಗಿತ್ತು.
ಈ ಸಂಬಂಧ 70 ಲೋಗೋ, 11 ಮ್ಯಾಸ್ಕಾಟ್ ಹಾಗೂ 9 ಥೀಮ್‍ಗಳನ್ನು ಸ್ಪರ್ಧೆಯಲ್ಲಿ ಪ್ರಸ್ತುತಪಡಿಸಲಾಯಿತು.
ಒಡಿಶಾದ ಬನ್ಸಿಲಾಲ್ ಕೇತ್ಕಿ ರೂಪಿಸಿದ ಲೋಗೋವನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ 50 ಸಾವಿರ ರೂ.ಗಳ ಬಹುಮಾನ ದೊರೆಯಲಿದೆ.
ಅಂತೆಯೇ ಬೆಂಗಳೂರಿನ ಇನ್ಬಂ ಅವರು ರೂಪಿಸಿದ ಚಂಪಿ ಚಿಕ್ಕ ಮ್ಯಾಸ್ಕಟ್ ಆಯ್ಕೆಯಾಗಿದ್ದು, ಅವರಿಗೂ 50 ಸಾವಿರ ರೂ.ಗಳ ಬಹುಮಾನ ನೀಡಲಾಗುತ್ತಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...