ಸಿಬಿಎಸ್‌ಇ 10,12ನೇ ತರಗತಿ ಫಲಿತಾಂಶ ಪ್ರಕಟ

Source: Vb | By I.G. Bhatkali | Published on 24th July 2022, 1:41 AM | National News |

ಹೊಸದಿಲ್ಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ಶುಕ್ರವಾರ ತನ್ನ 2022ರ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.

ಈ ವರ್ಷ ಪರೀಕ್ಷೆ ಬರೆದ 94.40 ಶೇ. ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದೇ ವೇಳೆ ಫಲಿತಾಂಶದಲ್ಲಿ ಬಾಲಕಿಯರು ಬಾಲಕರನ್ನು 1.41 ಶೇ.ದಷ್ಟು ಅಂತರದಿಂದ ಹಿಂದಿಕ್ಕಿದ್ದಾರೆ. 64,908 ವಿದ್ಯಾರ್ಥಿಗಳು 95 ಶೇ.ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ ಹಾಗೂ 2,36,993 ವಿದ್ಯಾ ರ್ಥಿಗಳು 90 ಶೇಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಒಟ್ಟು 1.07 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಮರು ಪರೀಕ್ಷೆಗೆ ಹಾಜ ರಾಗಬಹುದಾಗಿದೆ.

ಫಲಿತಾಂಶ ಪ್ರಕಟ ಉತ್ತೀರ್ಣತೆಯಲ್ಲಿ ತಿರುವನಂತಪುರಂ (99.68 ಶೇ.) ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು (98.22 ಶೇ.) ಮತ್ತು ಚೆನ್ನೈ (98.97 ಶೇ.) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿವೆ

ಸಿಬಿಎಸ್‌ಇಯು 12ನೇ ತರಗತಿ ಫಲಿತಾಂಶವನ್ನೂ ಶುಕ್ರವಾರ ಪ್ರಕಟಿಸಿದೆ. 12ನೇ ತರಗತಿಯಲ್ಲಿ 92.71 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಿರುವನಂತಪುರಮ್ 98.83 ಶೇ. ತೇರ್ಗಡೆಯೊಂದಿಗೆ ಮಂಚೂಣಿಯಲ್ಲಿದೆ. ನಂತರದ ಸ್ಥಾನಗಳಲ್ಲಿ ಬೆಂಗಳೂರು (98.16 ಶೇ.) ಮತ್ತು ಚೆನ್ನೈ (97.79 ಶೇ.) ಇವೆ 33,432 ವಿದ್ಯಾರ್ಥಿಗಳು (2.33 ಶೇ.) 95 ಶೇ.ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಅದೇ ವೇಳೆ, 9.39 ಶೇ. ವಿದ್ಯಾರ್ಥಿಗಳು 90 ಶೇ.ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ.

ಉತ್ತರ ಪ್ರದೇಶದ ಇಬರು ಬಾಲಕಿಯರಿಗೆ 500/500
ಉತ್ತರಪ್ರದೇಶದ ತರಪ್ರದೇಶದ ಬುಲಂದ್‌ಶಹರ್‌ನ 12ನೇ ತರಗತಿ ವಿದ್ಯಾರ್ಥಿನಿ ತಾನಿಯಾ ಸಿಂಗ್ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ 500 ಕ್ಕೇ 500 ಅಂಕಗಳನ್ನು ಪಡೆದು ಶೇಕಡ 100 ಸಾಧನೆ ಮಾಡಿದ್ದಾರೆ. ಬುಲಂದ್‌ಶಹರ್ ನಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಯಾಗಿರುವ ತಾನಿಯಾಗೆ ಐಎಎಸ್ ಅಧಿಕಾರಿ ಯಾಗುವ ಆಕಾಂಕ್ಷೆ ಹೊಂದಿದ್ದಾರೆ. ನೋಯ್ಡಾದ ಯುವಾಕ್ಷಿವಿಗ್ ಕೂಡ12ನೇ ತರಗತಿಯಲ್ಲಿ ಎಲ್ಲ ವಿಷಯಗಳಲ್ಲಿ ಸಂಪೂರ್ಣ 100 ಅಂಕಗಳನ್ನು ಪಡೆದು 100 ಶೇ. ಸಾಧನೆ ಮಾಡಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...