ಆರ್ಯ ವೈಶ್ಯ ಜನಾಂಗದವರಿಗೆ “ನಮೂನೆ-ಜಿ” ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಭ್ಯ

Source: sonews | By Staff Correspondent | Published on 28th January 2020, 3:40 PM | Coastal News |

ಕಾರವಾರ: ಕರ್ನಾಟಕ ರಾಜ್ಯ ಸರಕಾರವು ಡಿಸೆಂಬರ್ 16 ರಂದು, ಇನ್ನು ಮುಂದೆ ಆರ್ಯ ವೈಶ್ಯ ಜನಾಂಗದವರಿಗೆ ಶಾಲಾ ಪ್ರವೇಶಕ್ಕೆ ಮಾತ್ರವಲ್ಲದೆ ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ತರಬೇತಿ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ``ನಮೂನೆ-ಜಿ'' ಯಲ್ಲಿ ಪಡೆಯುವಂತೇ ಆದೇಶಿಸಿದೆ.

ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಂದ ಸಾಲ-ಸೌಲಭ್ಯಗಳನ್ನು ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಕಡ್ಡಾಯವಾಗಿದ್ದು, ಆರ್ಯ ವೈಶ್ಯ ಸಮುದಾಯದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು `` ನಮೂನೆ-ಜಿ'' ಯಲ್ಲಿ ಪಡೆಯಲು ನಾಡಕಛೇರಿ ಕೇಂದ್ರ, ಬೆಂಗಳೂರು-ಒನ್, ಹಾಗೂ ನಾಡಕಛೇರಿ ಅಂತರ್ಜಾಲ www.nadakacheri.karnataka.gov.in ಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ: 91 9448451111 ಅಥವಾ ಇ-ಮೇಲ್: [email protected] ಅಥವಾ ನಾಡಕಛೇರಿಯ ಸಹಾಯವಾಣಿ 18005990044 ಗೆ ಸಂಪರ್ಕಿಸಬಹುದಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...