ಭಟ್ಕಳದಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭ; ಮೊದಲ ದಿನ 18 ಬಸ್ ರಸ್ತೆಗೆ; ಗ್ರಾಮೀಣ ಭಾಗಗಳಲ್ಲಿ ಓಡಾಟವಿಲ್ಲ

Source: S O News service | By I.G. Bhatkali | Published on 21st June 2021, 2:29 PM | Coastal News |

ಭಟ್ಕಳ: ಕೊನೆಗೂ ಸೋಮವಾರ ಭಟ್ಕಳದಿಂದ ವಾಯುವ್ಯ ಸಾರಿಗೆ ಬಸ್ ಪ್ರಯಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಪಕ್ಕದ ಉಡುಪಿ, ಧಾರವಾಡ ಮತ್ತಿತರ ನಗರಗಳಲ್ಲಿ ಕೊರೊನಾ ಸೋಂಕಿನ ಕಾಟ ಇನ್ನೂ ಇರುವುದರಿಂದ ಮೊದಲ ಹಂತವಾಗಿ ಭಟ್ಕಳದಿಂದ ಕಾರವಾರ, ಕುಮಟಾ, ಶಿರಸಿ ಭಾಗಗಳಿಗೆ ಬಸ್ಸುಗಳನ್ನು ಓಡಿಸಲು ವಾಯುವ್ಯ ಸಾರಿಗೆ ಭಟ್ಕಳ ಘಟಕ ಸಿದ್ಧತೆಯನ್ನು ಮಾಡಿಕೊಂಡಿದೆ.

ಭಟ್ಕಳ ಬಸ್ ಡಿಪೋದಲ್ಲಿರುವ 70 ಬಸ್ಸುಗಳ ಪೈಕಿ 58 ಬಸ್ಸುಗಳು ಸರ್ವ ಸನ್ನದ್ಧ

  ಸೋಮವಾರ ಭಟ್ಕಳದಿಂದ ಸಾರಿಗೆ ಬಸ್ಸುಗಳ ಓಡಾಟ ಆರಂಭವಾಗಲಿವೆ. ಮೊದಲ ಹಂತವಾಗಿ ಕುಮಟಾ, ಕಾರವಾರ ಮಾರ್ಗವಾಗಿ ಹೆಚ್ಚಿನ ಬಸ್ಸುಗಳನ್ನು ಬಿಡಲಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್ ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ
 - ದಿವಾಕರ, ಭಟ್ಕಳ ಡಿಪೋ ವ್ಯವಸ್ಥಾಪಕರು

ಸ್ಥಿತಿಯಲ್ಲಿದ್ದರೂ, ಮೊದಲ ವಾರ 18 ಬಸ್ಸುಗಳು ರಸ್ತೆಗೆ ಇಳಿಯಲಿವೆ. ಭಟ್ಕಳ ಸಾರಿಗೆ ಘಟಕದಲ್ಲಿ ಇರುವ 205 ಚಾಲಕರು, ನಿರ್ವಾಹಕರಲ್ಲಿ 36 ಚಾಲಕರು, ನಿರ್ವಾಹಕರಿಗೆ ಇಲಾಖೆ ಬುಲಾವ್ ನೀಡಿದೆ. ಉಳಿದಂತೆ ಮೆಕ್ಯಾನಿಕ್‍ಗಳೂ ಮೊದಲಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಬಸ್ ಪ್ರಯಾಣ ಆರಂಭದ ಕುರಿತಂತೆ ಭಟ್ಕಳ ಸಾರಿಗೆ ಅಧಿಕಾರಿಗಳು ರವಿವಾರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಇಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದ್ದಾರೆ. 

ಗ್ರಾಮೀಣ ಭಾಗಗಳಿಗೆ ಬಸ್ ಇಲ್ಲ:
ತಾಲೂಕಿನಲ್ಲಿ ಬಸ್ ಓಡಾಟಕ್ಕೆ ಸರಕಾರ ಅನುಮತಿ ನೀಡಿದ್ದರೂ, ಭಟ್ಕಳ ಗ್ರಾಮೀಣ ಭಾಗಗಳಲ್ಲಿ ಜನರು ಬಸ್ ಓಡಾಟಕ್ಕೆ ಇನ್ನೂ ಕೆಲವು ದಿನ ಕಾಯಬೇಕಾಗಿದೆ. ಈ ಕುರಿತು ಮಾಹಿತಿ ನೀಡಿರುವ ಭಟ್ಕಳ ಡಿಪೋ ವ್ಯವಸ್ಥಾಪಕ ದಿವಾಕರ, ಸೋಮವಾರದಿಂದ ಕುಮಟಾ, ಕಾರವಾರ ಮಾರ್ಗವಾಗಿ ಹೆಚ್ಚಿನ ಬಸ್ಸುಗಳು ಓಡಾಡಲಿವೆ. ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಬಸ್ ಆರಂಭಿಸುವುದರ ಕುರಿತಂತೆ ಮುಂದಿನ ದಿನಗಳಲ್ಲಿ ತಿರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...