ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 7,700 ಕೋಟಿ ರೂ. ಎಡಿಆರ್

Source: Vb | By I.G. Bhatkali | Published on 17th March 2024, 10:47 AM | National News |

ಹೊಸದಿಲ್ಲಿ: 2017-18ರಲ್ಲಿ ಚುನಾವಣಾ ಬಾಂಡ್‌ಗಳು ಪರಿಚಯಿಸಲ್ಪಟ್ಟಾಗಿನಿಂದ ಒಟ್ಟು ದೇಣಿಗೆಗಳ ಸುಮಾರು ಶೇ.50ರಷ್ಟು ಬಿಜೆಪಿ ಬೊಕ್ಕಸವನ್ನು ಸೇರಿದೆ.

2017-18 ಮತ್ತು 2018-19ರಲ್ಲಿ ಬಿಜೆಪಿ ಅನುಕ್ರಮವಾಗಿ 1,450.9 ಕೋ.ರೂ. ಮತ್ತು 210 ಕೋ.ರೂ.ಗಳನ್ನು ಸ್ವೀಕರಿಸಿತ್ತು ಮತ್ತು ಈ ಮೊತ್ತವನ್ನು 2019,ಎ.19ರಿಂದ 2024, ಜ.24ರ ವರೆಗಿನ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಅದು ಸ್ವೀಕರಿಸಿದ 6,060.5 ಕೋ.ರೂ.ಗಳಿಗೆ ಸೇರಿಸಿದರೆ ಒಟ್ಟು ಮೊತ್ತವು 7,721.4 ಕೋ.ರೂ.ಆಗುತ್ತದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನ ದತ್ತಾಂಶಗಳು ತೋರಿಸಿವೆ.

ಇದು ಈವರೆಗಿನ ಒಟ್ಟು ದೇಣಿಗೆಗಳ ಮೊತ್ತ 15,529 ಕೋ.ರೂ.ಗಳ ಸುಮಾರು ಶೇ.50ರಷ್ಟಿದೆ. ಕಾಂಗ್ರೆಸ್ ಮೊದಲ ಎರಡು ವರ್ಷಗಳಲ್ಲಿ 383.3 ಕೋ.ರೂ.ಗಳನ್ನು ಸ್ವೀಕರಿಸಿದ್ದು, ಅದು ಈವರೆಗೆ ಗಳಿಸಿರುವ ಒಟ್ಟು ಮೊತ್ತ 1,810 ಕೋ. ರೊ. ಆಗಿದೆ. 

ಟಿಎಂಸಿ ಮೊದಲ ಎರಡು ವರ್ಷಗಳಲ್ಲಿ 97.3 ಕೋ.ರೂ.ಗಳನ್ನು ಪಡೆದಿದ್ದು,ಎಸ್‌ಬಿಐ ಬಹಿರಂಗಗೊಳಿಸಿರುವ ವಿವವರಗಳಲ್ಲಿಯ ಮೊತ್ತಕ್ಕೆ ಸೇರಿಸಿದರೆ ಅದು ಪಡೆದಿರುವ ಒಟ್ಟು ಹಣ 1,706.8 ಕೋ.ರೂ. ಗಳಾಗುತ್ತವೆ.

ಬಿಜೆಡಿ 2018-19ರಲ್ಲಿ 213.5 ಕೋ.ರೂ.ಗಳನ್ನು ಸ್ವೀಕರಿಸಿದ್ದರೆ 2017-18ರಲ್ಲಿ ಯಾವುದೇ ದೇಣಿಗೆಯನ್ನು ಪಡೆದಿರಲಿಲ್ಲ. ಎಸ್‌ಬಿಐ ವಿವರಗಳಲ್ಲಿಯ ಮೊತ್ತವನ್ನು ಸೇರಿಸಿದರೆ ಅದು ಒಟ್ಟು 989 ಕೋ.ರೂ.. ಗಳನ್ನು ಸ್ವೀಕರಿಸಿದೆ. ಇದರಲ್ಲಿ 2019 ಎ.1ರಿಂದ ಎ.11ರವರೆಗಿನ ದತ್ತಾಂಶ ಸೇರಿಲ್ಲ. 2019ರ ಲೋಕಸಭಾ ಚುನಾವಣೆಗೆ ಕೆಲವೇ ಸಮಯದ ಮೊದಲಿನ ಕೇವಲ 11 ದಿನಗಳ ಈ ಅವಧಿಯಲ್ಲಿ ರಾಜಕೀಯ ಪಕ್ಷಗಳು ದೇಣಿಗೆ ಸ್ವೀಕೃತಿಯಲ್ಲಿ ವ್ಯಸ್ತವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನಗದು ಹಣ ಹರಿದಿರುವ ಸಾಧ್ಯತೆಯಿದೆ.

2017ರಲ್ಲಿ ಚುನಾವಣಾ ಬಾಂಡ್ ಯೋಜನೆಯು ಆರಂಭಗೊಂಡಾಗಿ ನಿಂದ ಸರ್ವೋಚ್ಚ ನ್ಯಾಯಾಲಯವು ಅದನ್ನು ರದ್ದುಗೊಳಿಸುವವರೆಗೆ ಯಾವ ಪಕ್ಷವು ಎಷ್ಟು ಹಣವನ್ನು ಪಡೆದಿದೆ ಎಂಬ ಬಗ್ಗೆ ಸಂಪೂರ್ಣ ವಿವರ ಲಭ್ಯವಿಲ್ಲ. ಚುನಾವಣಾ ಆಯೋಗವು ತಾನು ಮೊಹರು ಮಾಡಿದ ಲಕೋಟೆಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಕಂಪನಿಗಳ ದೇಣಿಗೆ ಮತ್ತು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ತನ್ನ ವೆಬ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಇದು ಬಹಿರಂಗಗೊಳ್ಳಲಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...