ಈಜು ಕ್ರೀಡಾಕೂಟದಲ್ಲಿ ಗೆದ್ದ ಭಟ್ಕಳ ಅಂಜುಮನ್ ಕಾಲೇಜು ತಂಡ

Source: SO News | By Laxmi Tanaya | Published on 5th December 2022, 10:43 PM | Coastal News | Don't Miss |

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಏಕ ವಲಯ ಅಂತರ್ ಕಾಲೇಜು ಈಜು ಕ್ರೀಡಾಕೂಟದಲ್ಲಿ ಭಟ್ಕಳ ಅಂಜುಮನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಕಂಪ್ಯೂಟರ್ ಎಪ್ಲಿಕೇಶನ್ ಕಾಲೇಜು ಅತ್ಯುತ್ತಮ ಸಾಧನೆ ಮರೆದು ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

  ಧಾರವಾಡ ಜೆಎಸ್‍ಎಸ್ ಕಾಲೇಜಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಟ್ಕಳ ಅಂಜುಮನ್ ಬಿಸಿಎ ತೃತೀಯ ವರ್ಷದ ವಿದ್ಯಾರ್ಥಿ ಖಾಶ್ಫಿ ಫರಿದಾ 200 ಮೀಟರ್ ಬ್ಯಾಕ್‍ಸ್ಟ್ರೋಕ್‍ನಲ್ಲಿ ದ್ವಿತೀಯ, 100ಮೀ ಬ್ಯಾಕ್‍ಸ್ಟ್ರೋಕ್‍ನಲ್ಲಿ ತೃತೀಯ, 50 ಮೀಟರ್ ಬ್ಯಾಕ್ ಸ್ಟ್ರೋಕ್‍ನಲ್ಲಿ ತೃತೀಯ, ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿ ನವಾಫ್ ಸಿದ್ದಿಕಾ 100ಮೀ. ಬಟರ್‍ಫ್ಲೈ ಸ್ಟ್ರೋಕ್‍ನಲ್ಲಿ ಪ್ರಥಮ, 50ಮೀ. ಬಟರ್‍ಫ್ಲೈ ಸ್ಟ್ರೋಕ್‍ನಲ್ಲಿ ದ್ವಿತೀಯ, ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿ ಕಾಬ್ ಜಬಾಲಿ 100ಮೀ. ಬಟರ್‍ಫ್ಲೈ ಸ್ಟ್ರೋಕ್‍ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 

ಈಜು ಪಟುಗಳಾದ ಕಾಶ್ಫಿ ಫರಿದಾ, ನವಾಫ್ ಸಿದ್ದಿಕಾ, ಕಾಬ್ ಜಬಾಲಿ, ಹಾಶೀಮ್ ಮುಸ್ಬಾ, ಮೊಹಿದ್ದೀನ್ ಸಿದ್ದಿ ಅಹ್ಮೆದಾ ಅವರನ್ನು ಒಳಗೊಂಡ ಭಟ್ಕಳ ಅಂಜುಮನ್ ತಂಡವು 4*100 ಮೆಡ್ಲೆ ರಿಲೇಯಲ್ಲಿ ಪ್ರಥಮ, 4*100 ಫ್ರೀ ಸ್ಟೈಲ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಅಗ್ರ ಸ್ಥಾನಕ್ಕೆ ಏರಿತು. ಪ್ರಶಸ್ತಿ ಪಡೆದ ಈಜುಪಟುಗಳು ಹಾಗೂ ತರಬೇತಿ ನೀಡಿದ ಭಟ್ಕಳ ಅಂಜುಮನ್ ದೈಹಿಕ ಶಿಕ್ಷಣ ನಿರ್ದೇಶಕ ಮೋಹನ ಮೇಸ್ತ, ಮಾಜಿ ಕ್ರೀಡಾ ಕಾರ್ಯದರ್ಶಿ ಮಹ್ಮದ್ ಸಕೀಬ್ ವರಿಗೆ ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಝಾಮಿಲ್ ಖಾಜಿಯಾ, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಇಸ್ಮೈಲ್, ಕಾಲೇಜ್ ಬೋರ್ಡ ಕಾರ್ಯದರ್ಶಿ ಆಫ್ತಾಬ್, ಸಂಸ್ಥೆಯ ಸದಸ್ಯರು, ಪ್ರಾಚಾರ್ಯ ಮಹ್ಮದ್ ಮೊಸೀನ್, ಉಪನ್ಯಾಸಕರು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read These Next

ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚುವ ಕಾರ್ಯಾಚರಣೆ ;ಪೊಕ್ಲೆನ್ ಯಂತ್ರ ಬಳಸಿ ಕಾರ್ಯಾಚರಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರಿನಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ...

ಮನೆಯಂಗಳದಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ‌ ಕಾಡಿಗೆ ಬಿಟ್ಟ ಉರಗ ಪ್ರೇಮಿಗಳು 

ಭಟ್ಕಳ ಕರಾವಳಿ ಭಾಗದಲ್ಲಿ ಮಳೆಯು  ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿದ್ದು ತಾಲೂಕಿನ ...

ಗುಡ್ಡ ಕುಸಿತದಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ತಲಾ ೫ಲಕ್ಷ ರೂ ಪರಿಹಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ

ಅಂಕೋಲಾ : ಇತ್ತಿಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಉ.ಕ. ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ  ಗುಡ್ಡ ಕುಸಿದು ಮೃತ ಪಟ್ಟವರ ...