ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ಸಂಪನ್ನ

Source: SOnews | By Staff Correspondent | Published on 19th February 2024, 5:18 PM | Coastal News |

ಭಟ್ಕಳ : ತಾಲ್ಲೂಕಿನ ಶಕ್ತಿಕ್ಷೇತ್ರವಾದ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಾನುವಾರ ಮಧ್ಯಾಹ್ನ ಸಂಪನ್ನಗೊಂಡಿತು.

ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ತಾಂತ್ರಿಕ ಅಮೃತೇಶ್ ಭಟ್ಟ ಗೋಕರ್ಣ ನೇತೃತ್ವದಲ್ಲಿ ಸಾಂಗವಾಗಿ ಜರುಗಿತು. ನೂರಾರು ಜನರು ರಥ ಕಾಣಿಕೆ ಸಲ್ಲಿಸಿದರು. ಭಾನುವಾರ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮುಂತಾದವು ಜರುಗಿದವು.

ರಥೋತ್ಸವದಲ್ಲಿ ದೇವಸ್ಥಾನದ ಮೊಕ್ತೇಸರ ಉಮೇಶ್ ಹೆಗಡೆ,ಪ್ರದಾನ ಅರ್ಚಕ ಬಾಲಚಂದ್ರ ಭಟ್ಟ, ವೇ ಮೂ ಸುಬ್ರಮಣ್ಯ ಉಪಾಧ್ಯಾಯ, ಗುರು ಉಪಾಧ್ಯಯ, ಶ್ರೀಧರ ಭಟ್ಟ, ಹವ್ಯಕ ಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್ ಜಿ ಹೆಗಡೆ, ದೇವಿಮನೆ ಆಡಳಿತ ಸಮಿತಿಯ ಅಧ್ಯಕ್ಷ ಶಿವಾನಂದ ಹೆಬ್ಬಾರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ಟ ತೆಕ್ನಗದ್ದೆ, ಪ್ರಮುಖರಾದ ಎಂ ಎಂ ಹೆಬ್ಬಾರ್, ನಾರಾಯಣ ಹೆಬ್ಬಾರ ಬೆಣಂದೂರು,ರಾಧಾಕೃಷ್ಣ ಬೆಂಗಳೂರು, ಶಿವಾನಂದ ಹೆಬ್ಬಾರ್, ಅನಂತ ಹೆಬ್ಬಾರ ,ಅನಂತ್ ಹೆಬ್ಬಾರ್, ಶ್ರೀನಿವಾಸ ಹೆಗಡೆ, ಪರಮೇಶ್ವರ ಭಟ್ಟ, ಶಂಕರ್ ಭಟ್ಟ ಮುಂತಾವರು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀರಕ್ಷಾ ಹೆಬ್ಬಾರ ಇವರಿಂದ ನಡೆದ ತಬಲಾ ಸೋಲೋ, ಶಿರಸಿಯ ನಾಟ್ಯದೀಪ ಕಲ್ಚರಲ್ ತಂಡದಿಂದ ನಡೆದ ಭರತನಾಟ್ಯ, ಪಂಡಿತ್ ಗಣಪತಿ ಭಟ್ಟ ಹಾಸಣಗಿ ಇವರ ಹಿಂದೂಸ್ಥಾನಿ ಸಂಗೀತ ಹಾಗೂ ಸರಿಗಮಪ ಖ್ಯಾತಿಯ ಶ್ರೀ ಹರ್ಷ ತಂಡದವರ ಭಕ್ತಿ ಭಾವ ಸಂಗಮ ಪ್ರೇಕ್ಷಕರ ಮನರಂಜಿಸಿತು

Read These Next