ಭಟ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಇಂಜಿನಿಯರ ವಿರುದ್ಧ ಪುರಸಭಾ ಸದಸ್ಯರು ಆಕ್ರೋಶ

Source: S.O. News Service | By MV Bhatkal | Published on 1st December 2017, 9:10 PM | Coastal News | Don't Miss |

ಭಟ್ಕಳ: ತಾಲೂಕಿನ  ಪುರಸಭೆಯ ಸಭಾಗೃಹದಲ್ಲಿ ಗುರುವಾರದಂದು ಪುರಸಭೆಯ ಸಭೆಯ ಅಧ್ಯಕ್ಷ ಮಹ್ಮದ್ ಸಾದಿಕ್ ಮಟ್ಟಾ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ವ್ಯಾಪ್ತಿಯ ಹಲವು ಸಮಸ್ಯೆಗಳ ಕುರಿತಾದ ಸಾಮಾನ್ಯ ಸಭೆ ನಡೆಯಿತು. 
 ಸಾಮಾನ್ಯ ಸಭೆಯಲ್ಲಿ ಇಂಜಿನಿಯರ ವಿರುದ್ಧ ಪುರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು. ಪುರಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಕಳಪೆ ಕಾಮಗಾರಿ ನಡೆಯುತ್ತಿದ್ದರ ಬಗ್ಗೆ ಸಾರ್ವಜನಿಕರಿಂದ ಕೇಳಿ ಬಂದ ಆರೋಪದ ಮೇರೆಗೆ ಇಂಜಿನಿಯರ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಪುರಸಭಾ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಕಾಮಗಾರಿಯ ಮೇಲೆ ಇಂಜಿನಿಯರ್ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಸಭೆಯಲ್ಲಿ ಬಂದ ಸಮಸ್ಯೆಗಳ ಬಗ್ಗೆ ಒಂದು ಪಟ್ಟಿ ಮಾಡಿ ಚರ್ಚೆ ಆದ ವಿಷಯದ ಮೇಲೆ ಕಾರ್ಯ ಮಾಡಿ ಎಂದು ಸೂಚನೆ ನೀಡಿದರು. 
ಪುರಸಭಾ ಕೌನ್ಸಿಲರ್ ಫಯಾಜ್ ಮುಲ್ಲಾ ಅವರು ಪುರಸಭೆಗೆ ಬರೆದ ಸಮಸ್ಯೆಗಳ ಕುರಿತಾದ ಪತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪತ್ರದಲ್ಲಿ ಭಟ್ಕಳದಲ್ಲಿ ವಾರಕ್ಕೊಮ್ಮೆ ನಡೆಯುವ ಆರ್.ಟಿ.ಓ. ಕ್ಯಾಂಪ್‍ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಲೈಸೆನ್ಸಗೆ ಅವಶ್ಯಕವಾದ ಪೋಟೋ ವ್ಯವಸ್ಥೆಗೆ ತಾಲುಕಿನ ಸಾರ್ವಜನಿಕರು ಪದೇ ಪದೇ ಹೊನ್ನಾವರಕ್ಕೆ ತೆರಳಬೇಕಾದ ಅನಿವಾರ್ಯತೆಯಿದ್ದ ಕಾರಣ ಭಟ್ಕಳದಲ್ಲಿಯೇ ಪೋಟೋ ತೆಗೆಯುವ ವ್ಯವಸ್ಥೆಯನ್ನು ಮಾಡಬೇಕು, ಅದೇ ರೀತಿ ಅಲ್ಪಸಂಖ್ಯಾತರಿಗೆ ಬರುವ ಯೋಜನೆಯ ಬಗ್ಗೆ ಯಾವುದೇ ಪುರಸಭಾ ಸದಸ್ಯರ ಗಮನಕ್ಕೆ ಬರುತ್ತಿಲ್ಲವಾಗಿದ್ದು, ಈ ಬಗ್ಗೆ ಆಧಿಕಾರಿಗಳು ಗಮನ ಹರಿಸಬೇಕೆಂದು ಸಭೆಯಲ್ಲಿ ಭಟ್ಕಳವನ್ನು ಬಯಲು ಮುಕ್ತ ಶೌಚ ಎಂದು ಘೋಷಿಸುವ  ಬೇಕೆಂದು ಹೇಳಿದರು  ಸ್ವಚ್ಛ ಸರ್ವೇಕ್ಷಣ-2018ರ ಕುರಿತಾಗಿ ಜನವರಿ ತಿಂಗಳಿನಿಂದ ಮನೆ ಮನೆ ಸಮೀಕ್ಷೆ ತೆರಳಲಿದ್ದು, ಆಗ ಸ್ವಚ್ಛ ಭಟ್ಕಳ ಎಂದು ಘೋಷಣೆ ನೀಡಲಿದ್ದೇವೆ. ಈ ಎಲ್ಲಾ ವಿವರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೀಡಲಾಗುವುದು. ಇದೇ ಸಂಧರ್ಭದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುವುದರ ಜೊತೆಗೆ ಸುಂದರ ಪರಿಸರ ನಿರ್ಮಾಣ ಮಾಡಿ ರಸ್ತೆಯ ಮೇಲೆ ಎಲ್ಲಿಯೂ ಕಸವನ್ನು ಹಾಕದೇ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರು ಗಮನ ಹರಿಸಬೇಕೆಂದು  ಡಿಸೆಂಬರ್ 6 ರಂದು ಭಟ್ಕಳಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಪುರಸಭೆ ವತಿಯಿಂದ ನಗರೋತ್ತಾನ, ಗೃಹ ಭಾಗ್ಯ, ಇಂದಿರಾ ಕ್ಯಾಂಟಿನ್ ಕಾಮಗಾರಿಗಳ ಉದ್ಘಾಟನೆಗೆ ಬರಲಿದ್ದು, ಪುರಸಭಾ ಸದಸ್ಯರೆಲ್ಲರಿಗೂ ಕಾರ್ಯಕ್ರಮಕ್ಕೆ ಬರಬೇಕೆಂದು ಅಧ್ಯಕ್ಷ ಮಹ್ಮದ್ ಸಾದಿಕ್ ಮಟ್ಟಾ ಹೇಳಿದರು.  ಭಾರಿ ಭರವಸೆಯ ಇಂದಿರಾ ಕ್ಯಾಂಟಿನ್ ಭಟ್ಕಳದಲ್ಲಿಯೂ ನಿರ್ಮಾಣವಾಗಲಿದ್ದು, ತಾಲುಕಿನ ಪುರಭವನ, ಸರ್ದಾರ ವಲ್ಲಭಾಯಿ ಪಟೇಲ್ ಉದ್ಯಾನವನ ಸಮೀಪ ಸೇರಿದಂತೆ ಮಿನಿ ವಿಧಾನ ಸೌಧದ ಸ್ಥಳದ ಹತ್ತಿರ ನಿರ್ಮಾಣಕ್ಕೆ ಗುರುತಿಸಲಾಗಿದ್ದು, ಅಧಿಕಾರಿಗಳ ಜೊತೆಗೆ ಕ್ಯಾಂಟಿನ್ ನಿರ್ಮಾಣದ ಜಾಗಾವನ್ನು ನಿಗದಿಮಾಡಲಿದ್ದೇವೆ ಎಂದು ಪುರಸಭೆ ಅಧ್ಯಕ್ಷ ಮಹ್ಮದ್ ಸಾದಿಕ್ ಮಟ್ಟಾ ತಿಳಿಸಿದರು. ಸಭೆಯ ಅಂತ್ಯದಲ್ಲಿ ಪುರಸಭೆಯಲ್ಲಿ ಸತತ 34 ವರ್ಷಗಳಿಂದ ವಾಹನಚಾಲಕರಾಗಿ ಸೇವೆ ಸಲ್ಲಿಸಿದ ಮಂಜುನಾಥ ನಾಯ್ಕ ನಿವೃತ್ತಿ ಹೊಂದಿದ್ದು, ಪುರಸಭೆ ವತಿಯಿಂದ ಸನ್ಮಾನಿಸಿ ಗೌರವಿಸಿ ಅವರ ನಿವೃತ್ತಿ ಜೀವನ ಸುಗಮವಾಗಿರಲಿ ಎಂದು ಹಾರೈಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಕೆ ಎಂ ಅಸ್ಪಾಕ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. 

                                                                                                       
 

Read These Next