ಭಟ್ಕಳ ಪೊಲೀಸ್ ಇಲಾಖೆಯಿಂದ ೩೧ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

Source: so news | Published on 23rd November 2020, 11:31 PM | Coastal News |

 

 
ಭಟ್ಕಳ:ಭಟ್ಕಳ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯಿಂದ ಸೋಮವಾರ ಸಂಜೆ ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ೩೧ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಸಿಲಾಯಿತು.  
ಪ್ರಬಾರಿ ಸಿ.ಪಿ.ಐ ನಿಶ್ಚಲ್ ಕುಮಾರ್ ಕಾರ್ಯಕ್ರಮ ಕ್ರಮಕ್ಕೆ ಚಾಲನೆ ನೀಡಿದರು. 
ನಂತರ ಮಾತನಾಡಿದ ಅವರು ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿಗೂ ಕಾರಣವಾಗುತ್ತದೆ. ಯಾವುದೇ ರೀತಿಯ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಚಾಲನೆ, ರಸ್ತೆ ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು.ಈ ಕುರಿತು ಪ್ರತಿಯೊಬ್ಬರು ಜಾಗೃತರಾಗಿ, ಇತರರಿಗೂ ಜಾಗೃತಿ ಮೂಡಿಸಬೇಕು  ನ.೨೩ರಿಂದ ನ೩೦ರ ವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆಯಲ್ಲಿರುವದು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರೆಲ್ಲರೂ ತಮ್ಮ ಸಹಕಾರವನ್ನು ನೀಡಬೇಕು. ರಸ್ತೆ ಸುರಕ್ಷತೆಗೆ ಸಂಬಧಿಸಿದತೆ ತಮ್ಮ ಸಲಹೆ ಸೂಚನೆಗಳು ಇದ್ದಲ್ಲಿ ಭಟ್ಕಳ ಶಹರ ಪೊಲೀಸ ಠಾಣೆಗೆ ಮಾಹಿತಿ ನೀಡಬೇಕು.ಈ ಸಪ್ತಾಹದಲ್ಲಿ ಮೊದಲೆರಡು ದಿನ ಯಾವುದೇ ದಂಡ ವಿಧಿಸದೆ ವಾಹನ ಚಾಲಕರಿಗೆ ಸೂಕ್ತ ತಿಳುವಳಿಕೆಯನ್ನು ಹಾಗೂ ರಸ್ತೆ ಸುರಕ್ಷತೆಗೆ ಸಂಬಧಪಟ್ಟತೆ ವಿವಿಧ ಕಾರ್ಯಕ್ರಮಗಳನ್ನು ಭಟ್ಕಳ ಶಹರ ವ್ಯಾಪ್ತಿಯ ಸಂಚಾರ ದಟ್ಟಣೆ ಇರುವ ಸಾರ್ವಜನಿಕ ಸ್ಥಳಗಳಲ್ಲ ನೇರವೇರಿಸಲಾಗುವುದು. ನ.೨೫ರನಂತರ ದಿನಗಳಲ್ಲೂ  ಸಂಚಾರ ನಿಯಮಗಳನ್ನು ಉಲ್ಲಂಘನೆಯನ್ನು ಮಾಡಿದ ಪ್ರತಿಯೊಬ್ಬ ತಪ್ಪಿತಸ್ಥ ವಾಹನ ಚಾಲಕ ಮಾಲೀಕರಿಗೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು.ಭಟ್ಕಳ ಶಹರ ಠಾಣಾ ವ್ಯಾಪ್ತಿಯಲ್ಲಿ ದಿನನಿತ್ಯ ಘಮಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಭಟ್ಕಳ ಶಹರ ಪೊಲೀಸ ಠಾಣೆ ನಡೆಸುವ ಈ ಸಣ್ಣ ಪ್ರಯತ್ನಕ್ಕೆ ಸಾರ್ವಜನಿಕರೆಲ್ಲರೂ ತಮ್ಮ ಕೈ ಜೋಡಿಸಬೇಕು ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.ನಂತರ ಎಲ್ಲಾ ವಾಹನ ಸವಾರರಿಗೆ ಪೊಲೀಸರು ಗುಲಾಬಿ ಹೂವುಗಳನ್ನು ನೀಡಿ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ವಾಹನ ಸವಾರರು ಪಾಲಿಸಬೇಕಾದ ಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು.ಹಾಗೂ ಶಮ್ಸುದ್ದೀನ್ ವೃತ್ತ ದಿಂದ 
ಬೈಕ್ ರ್ಯಾಲಿ ಆರಂಭಗೊಂಡು,ಹಳೆ ಬಸ್ ನಿಲ್ದಾಣ,ಹನುಮಾನ್ ದೇವಸ್ಥಾನ,ಮುಂತಾದ ಕಡೆಗೆ ತೆರಳಿ
ರಸ್ತೆ ಸುರಕ್ಷತೆಗೆ ತಿಳಿಸಿದರು.
ಈ ಸಂದರ್ಭದಲ್ಲಿ, ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ, ಗ್ರಾಮೀಣ ಠಾಣೆ ಪಿ.ಎಸ್.ಐ ಓಂಕಾರಪ್ಪ, ಎ.ಎಸ್.ಐ ನವೀನ ಬೋರ್ಕರ್,ರಾಮಚಂದ್ರ ವೈದ್ಯ, ರಾಮಚಂದ್ರ ನಾಯ್ಕ, ಸೇರಿ ಇತರ ಪೊಲೀಸ್ ಸಿಬ್ಬಂದಿಗಳು,ಆಟೋ ಚಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...