ವಿವಾದಿತ ನಾಗಬನ ಕಂಪೌಂಡ್ ನಿರ್ಮಾಣ ಪೊಲೀಸ್ ಭದ್ರತೆಯಲ್ಲಿ ಮುಕ್ತಾಯ:ನಗರ ೧೪೪ ಸೆಕ್ಷನ್ ಜಾರಿ

Source: so news | By MV Bhatkal | Published on 18th April 2021, 6:30 AM | Coastal News |

ಭಟ್ಕಳ:ಪಟ್ಟಣದ ರಾಜಾಂಗಣದ ಬಳಿ ನಾಗಬನದ ಕಂಪೌಡ್ ನಿರ್ಮಾಣ ವಿವಾದ ತಾರಕ್ಕಕೇರಿ ಬಿಗುವಿನ ವಾತಾವರಣ ನಿರ್ಮಾಣವಾದ  ಬೆನ್ನಲ್ಲಿ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ವರೆಗೂ ೧೪೪ಸೆ. ನಿಷೇದಾಜ್ಞೆ ಜಾರಿಗೆ ಗೊಳಿಸಿ ತಹಸೀಲ್ದಾ ಎಸ್ ರವಿಚಂದ್ರ ಆದೇಶ ನೀಡಿದ್ದಾರೆ.
ನಾಗಬನ ನಿರ್ಮಾಣದ ವಿಚಾರದಲ್ಲಿ ಶುಕ್ರವಾರ ಉಭಯ ಕೋಮುಗಳ ನಡುವೆ ವಿವಾದ ನಡೆದು ಮಾತಿನ ಚಕಮಕಿ ನಡೆದಿತ್ತು. ನಂತರ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್ ಅವರ ಮದ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆದಿತ್ತು. ಅಲ್ಲೂ ವಾದ ವಿವಾದಗಳು ನಡೆದು ಉಭಯ ಕೋಮಿನ ಮುಖಂಡರು ಸಭೆ ಬಿಟ್ಟು ಹೊರಗೆ ಬಂದಿದ್ದರು.  ಮತೀಯವಾಗಿ ಭಟ್ಕಳ ಅತಿ ಸೂಕ್ಷö್ಮ ಪ್ರದೇಶವಾಗಿದ್ದು ಸಣ್ಣ ಘಟನೆಗಳು ಕೋಮು ಗಲಭೆ ಆಗುವ ಸಾದ್ಯತೆಗಳಿರುವೆ. ಪ್ರಸ್ತುತ ನಾಗಬನದ ಬಳಿ ಮುಸ್ಲಿಂ ಸಮುದಾಯ ಬಹುಳ್ಯವಿದೆ. ಅಲ್ಲದೆ ಈ ವಿಷಯದಲ್ಲಿ ವಿವಾದವಿದೆಬೆಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ  ಭಟ್ಕಳ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ನಿಷೇದಾಜ್ಞೆ ಹೊರಡಿಸಿ ಆದೇಶ ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ನಿಷೇದಾಜ್ಞೆಯನ್ನು ಮುಂದುವರೆಸುವದಾಗಿ ಪತ್ರಿಕೆಗೆ ತಿಳಿಸಿದ್ದಾರೆ.
ಪೊಲೀಸ್ ಸುಪರ್ದಿಯಲ್ಲಿ ನಾಗಬನದ ಕಂಪೌಡ ನಿರ್ಮಾಣ ಕಾರ್ಯ ಆರಂಭ ಮುಸ್ಲಿ ಸಮುದಾಯದ ಸುಮಾರು ನೂರಕ್ಕೂ ಅಧಿಕ ಮಂದಿ ನಾಗಬನದ ಕಂಪೌಡ್ ನಿರ್ಮಾಣ ಮಾಡದಂತೆ ತಡೆ ಒಡ್ಡಿ ಶುಕ್ರವಾರ ಕಾಮಗಾರಿ ಸ್ಥಗಿತಗೊಳ್ಳುವಂತೆ ಮಾಡಿದ್ದರು. ಇದರಿಂದ ವಾದವಿವಾದ ಏರ್ಪಟ್ಟು ಕಾಮಗಾರಿ ಸ್ಥಗಿತಗೊಂಡಿತ್ತು. ಉಪವಿಭಾಗಾಧಿಕಾರಿ ಶುಕ್ರವಾರ ರಾತ್ರಿ ಪೂರಾ ತಂಜೀ ಸಂಸ್ಥೆಯವರನ್ನು ಕರೆಯಿಸಿ ಚರ್ಚೆ ನಡೆಸಿ ಧಾರ್ಮಿಕ ಕಾರ್ಯಕ್ಕೆ ಅಡ್ಡಿಪಡಿಸದಂತೆ ಮನವೊಳಿಸಿದ್ದರು. ಅದರಂತೆ ಶನಿವಾರ ನಾಗಬನದ ಕಂಪೌಡ ಕಾಮಗಾರಿ ಸಿಪಿಐ ದಿವಾಕರ ಎಸ್ ಅವರ ನೇತೃತ್ವದಲ್ಲಿ ಮತ್ತೆ ಆರಂಭಗೊಡಿತು. ಸ್ಥಳದಲ್ಲಿ ಜಿಲ್ಲೆಯ ವಿವಿದೆಡೆಯಿಂದ ಆಗಮಿಸಿದ ಸಿಪಿಐ, ಪಿಎಸ್‌ಐ ಸೇರಿ ನೂರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ. ತಹಸೀಲ್ದಾರ ರವಿಚಂದ್ರ ಸ್ಥಳಕ್ಕೆ ಬೇಟಿ ಕಾಮಗಾರಿ ಪರೀಶೀಲನೆ ನಡೆಸುತ್ತಿರುವದು ಕಂಡು ಬಂದಿದೆ

Read These Next