ವ್ಯಕ್ತಿ ಕುತ್ತಿಗೆ ಕಡಿದ ಆರೋಪಿ ಬಂದಿಸದಿದ್ದಲ್ಲಿ ಚುನಾವಣಾ ಬಹಿಷ್ಕಾರ:ಮರಾಠಿ ಸಮಾಜದವರಿಂದ ಎಚ್ಚರಿಕೆ

Source: so news | Published on 5th April 2019, 12:47 AM | Coastal News |

 

ಭಟ್ಕಳ:ಕಳೆದ ಒಂದು ವಾರದ ಹಿಂದೆ ತಾಲೂಕಿನ ಹಾಡುವಳ್ಳಿ ಅರುಕಿ ಬಳಿ ಮಾಸ್ತಿ ಗೊಂಡ ಎಂಬಾತನು ತನ್ನ ಮಗನೆಲ್ಲಿದ್ದಾನೆಂದು ವಿಠ್ಠಲ ರಾಮ ಮರಾಠಿ ಎಂಬಾತನ ಬಳಿ ಕೇಳಿದ್ದಕ್ಕೆ ಆತನ ನೀಡಿದ ಉತ್ತರ ಸಮಂಜಸವಿಲ್ಲ ಎಂಬ ಕಾರಣಕ್ಕೆ ಏಕಾಏಕಿ ಕತ್ತಿಯಿಂದ ಮಾಸ್ತಿ ಗೊಂಡನು ಕುತ್ತಿಗೆ ಕಡಿದು ಪರಾರಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಶೀಘ್ರದಲ್ಲಿ ಪತ್ತೆ ಕಾರ್ಯಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಲೋಕಸಭಾ ಚುನಾವಣೆಯನ್ನು ಸಮಾಜದಿಂದ ಬಹಿಷ್ಕರಿಸಲಿದ್ದೇವೆ ಎಂದು ಕುಂಬ್ರಿ ಮರಾಠಿಯರ ಅಭಿವೃದ್ಧಿ ತಾಲೂಕಾ ಸಂಘದ ಅಧ್ಯಕ್ಷ ರುಕ್ಮ ಸೋಮ ಮರಾಠಿ ಆಗ್ರಹಿಸಿದರು.
ಅವರು ಬುಧವಾರದಂದು ಇಲ್ಲಿನ ಖಾಸಗಿ ಹೋಟೆಲನಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
ಮಾರ್ಚ 27ರಂದು ಮಾಸ್ತಿ ಗೋಯ್ದ ಗೊಂಡ ಎಂಬಾತನು ರಾಮಯ್ಯ ಗೊಂಡ ಎಂಬುವವರ ಮನೆಯ ಹೊರಗಡೆ ವಿಠ್ಠಲ ರಾಮ ಮರಾಠಿ ಎಂಬಾತನು ಕುಳಿತು ಮಾತನಾಡುತ್ತಿರುವಾಗ ಕತ್ತಿಯಿಂದ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದು ಕೊಲ್ಲುವ ಪ್ರಯತ್ನ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಾಸ್ತಿ ಗೊಂಡನು ವಿಠ್ಠಲ ರಾಮ ಮರಾಠಿಯನ್ನು ಕೊಲೆಮಾಡುವ ಉದ್ದೇಶದಿಂದಲೇ ಕತ್ತಿಯಿಂದ ಜೋರಾಗಿ ಕುತ್ತಿಗೆಯ ಹಿಂಭಾಗಕ್ಕೆ ಬಿಸಿ ಹೊಡೆದು ಕತ್ತಿಯನ್ನು ತೋಟದಲ್ಲಿ ಎಸೆದು ನಾಪತ್ತೆಯಾಗಿದ್ದಾನೆ. ನಂತರ ಸ್ಥಳಿಯರೆಲ್ಲರು ಮನೆ ಮಂದಿ ಸೇರಿ ವಿಠ್ಠಲ ಮರಾಠಿಯನ್ನು ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಜೀವನ್ಮರಣ ಹೋರಾಟದೊಂದಿಗೆ ಆಸ್ಪತ್ರೆಯಲ್ಲಿದ್ದಾನೆ. 
ಈ ಕುರಿತು ನಾಗರಾಜ್ ಶೇಷ ಮರಾಠಿ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪ್ರಕರಣ ನಡೆದು ಒಂದು ವಾರವಾದರೂ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿಲ್ಲವಾಗಿದೆ. ಇದರಿಂದ ಮರಾಠಿ ಸಮಾಜದ ಜನರಲ್ಲಿ ಆತಂಕ ಹುಟ್ಟಿದ್ದು, ಪ್ರಕರಣವನ್ನು ಮೇಲ್ನೋಟಕ್ಕೆ ತಳ್ಳಿ ಹಾಕುವ ಸಂಶಯ ಎದುರಾಗಿದೆ. ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿಠ್ಠಲ ಮರಾಠಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು,ಆರ್ಥಿಕವಾಗಿ ಸಾಕಷ್ಟು ಅನಾನೂಕೂಲತೆಯನ್ನು ಎದುರಿಸುತ್ತಿದ್ದಾನೆ. ಆರೋಪಿ ಪತ್ತೆ ಆಗದಿದ್ದಲ್ಲಿ ಏಪ್ರಿಲ್ 23ರಮದು ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡಿದರು. 
ಕುಂಬ್ರಿ ಮರಾಠಿಯರ ಅಭಿವೃದ್ಧಿ ಶಿರಸಿ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ ಮರಾಠಿ ಮಾತನಾಡಿ ‘ಆರೋಪಿ ಮಾಸ್ತಿ ಗೊಂಡನನ್ನು ತಕ್ಷಣ ಬಂಧಿಸಿ ಗಾಯಾಳು ವಿಠ್ಠಲ ಮರಾಠಿ ಹೋರಾಟ ತನ್ನ ಶಾಶ್ವತ ಅಂಗವಿಕಲನಾದ ಸಾಧ್ಯತೆ ಇರುವುದರಿಂದ ಇವರಿಗೆ ಸೂಕ್ತ ಪರಿಹಾರ ನೀಡಬೇಕು. ಒಂದಾನು ವೇಳೆ ತಕ್ಷಣ ಆರೋಪಿಯನ್ನು ದಸ್ತಗಿರಿ ಮಾಡದೇ ಇದ್ದಲ್ಲಿ ಮರಾಠಿ ಸಮಾಜದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಹಾಗೂ ಮುಂದಿನ 10 ದಿನದೊಳಗಾಗಿ ಆರೋಪಿ ಮಾಸ್ತಿ ಗೊಂಡ ಬಂಧಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಛೇರಿಯ ಎದುರು ಕುಳಿತು ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ಕುಂಬ್ರಿ ಮರಾಠಿಯರ ಅಭಿವೃದ್ಧಿ ತಾಲೂಕಾ ಸಂಘದ ಕಾರ್ಯದರ್ಶಿ ನಾಗೇಶ ಮರಾಠಿ, ನಾರಾಯಣ ತಿಮ್ಮ ಮರಾಠಿ ಸೇರಿದಂತೆ ಸಮಾಜದ ಪ್ರಮುಖರು, ಗಾಯಾಳು ವಿಠ್ಠಲ ಮರಾಠಿ ಪತ್ನಿ,ಮಕ್ಕಳು ಉಪಸ್ಥಿತರಿದ್ದರು. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...