ಬೇಂಗ್ರೆಯಲ್ಲಿ ನಡೆದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಯಶಸ್ವಿ

Source: sonews | By Staff Correspondent | Published on 5th December 2019, 10:35 PM | Coastal News |

ಭಟ್ಕಳ: ಉಸಿರಾ ಇಂಡಸ್ಟ್ರಿ ಬೆಂಗ್ರೆ, ಮಹಾನಸ ಆಯು ರ್ವೇದ ಚಿಕಿತ್ಸಾ ಕೇಂದ್ರ ಬೆಂಗಳೂರು, ಆರೋಗ್ಯ ಭಾರತಿ ಭಟ್ಕಳ, ಸೈಂಟ್ ಮೀಲಗ್ರೆಸ್ ಕ್ರೆಡಿಟ್ ಸೌಹರ್ದ ಕೋ ಆಪರೇಟಿವ್ ಲಿಮಿಟಡ್ ಕಾರವಾರ, ಮತ್ತು ಸಾಧನ ಮಹಿಳಾ ಒಕ್ಕೂಟ ಬೆಂಗ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಯಶಸ್ವಿ ಯಾಗಿ ಬೆಂಗ್ರೆ ಉಸಿರೇ ಇಡಸ್ಟ್ರಿಯಲ್ಲಿ ಜರುಗಿತು,

ಶಿಬಿರದ ಉದ್ಘಾಟನೆಯನ್ನು ಬೆಂಗಳೂರಿನ ಖ್ಯಾತ ಆಯುರ್ವೇದ ವೈದ್ಯ ಡಾಕ್ಟರ್ ಸತ್ಯನಾರಾಯಣ ಭಟ್ ನೆರವೇರಿಸಿ ಮಾತನಾಡುತ್ತಾ ನಮ್ಮ ಸುತ್ತಮುತ್ತಲಿರುವ ಔಷಧೀಯ ಸಸ್ಯಗಳ ಬಗ್ಗೆ ಅರಿತು ಅವುಗಳನ್ನು ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಶೀರ ಇಂಡಸ್ಟ್ರಿಯ ಉದ್ಯಮಿ ಎಂ ಡಿ ಮ್ಯಾಥ್ಯೂ, ಕ್ಯಾನ್ಸರ್ ನಂಥ ರೋಗವನ್ನು ದೊಡ್ಡ ಆಸ್ಪತ್ರೆಯಲ್ಲಿ ಗುಣ ಮಾಡದ್ದನ್ನು ಆಯುರ್ವೇದ ಔಷಧಿ ಎಂದ ಸತ್ಯನಾರಾಯಣ ಭಾಗದ ಜನರಿಗೆ ಆಗಲಿ ಎಂದು ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಪಾಂಡುರಂಗ ನಾಯಕ್, ಡಾಕ್ಟರ್ ಅರ್ಚನ, ಡಾಕ್ಟರ್ ರೇಖಾ, ಶ್ರೀಮತಿ ಶಾಂತಿ ನಾಯಕ ,ಡಾಕ್ಟರ್ ಸುನೀಲ್ ಜಾತಾನಾ, ರಾಮರಥ , ಮೈಕಲ್ ಡಿಸೋಜ ಮತ್ತು ಕೆ ಮರಿಸ್ವಾಮಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಮೊದಲಿಗೆ ಕೆ ಮರಿಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು ಫರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.

ಶಿಬಿರದಲ್ಲಿ 305 ಜನರಿಗೆ ತಪಾಸಣೆ ಮಾಡಿ ಒಂದು ಲಕ್ಷಕ್ಕೂ ಅಧಿಕ ಉಚಿತ ಔಷಧಿ ವಿತರಣೆ 270 ಜನರಿಗೆ ಬಿಪಿ ಮತ್ತು ರಕ್ತ ತಪಾಸಣೆ ಉಚಿತವಾಗಿ ಮಾಡಲಾಯಿತು.

 

Read These Next

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...