ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ದೀಪದಾನಕಾರ್ಯಕ್ರಮ

Source: S O News | By I.G. Bhatkali | Published on 7th December 2023, 12:24 PM | Coastal News |

ಭಟ್ಕಳ: ಬಿ.ಎಡ್.ಪ್ರಶಿಕ್ಷಣಾರ್ಥಿಗಳು ತಾವು ಪಡೆದತರಬೇತಿಯನ್ನು ಮುಂದೆ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ಅನುಸರಿಸಿ ಉತ್ತಮ ಶಿಕ್ಷಕರಾಗಬೇಕು ಎಂದುಅಂಕೋಲಾದಕೆ.ಎಲ್.ಇ.ಎಸ್. ಬಿ.ಎಡ್.ಕಾಲೇಜಿನ ಪ್ರ್ರಾಂಶುಪಾಲ ವಿನಾಯಕ ಹೆಗಡೆ ಹೇಳಿದರು.

ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ದೀಪದಾನಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಭಟ್ಕಳ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್‍ರಾಜೇಶ ನಾಯಕ ಮಾತನಾಡುತ್ತಾ ಶಿಕ್ಷಕರು ಆಧುನಿಕ ಶಿಕ್ಷಣದಲ್ಲಿ ಪರಿವರ್ತನೆಗೆ ಒಳಪಡುವ ಸಂದರ್ಭ ಮತ್ತು ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿದವರು ಮಾತ್ರಯಶಸ್ಸನ್ನು ಪಡೆಯುತ್ತಾರೆ, ಕೊರೋನಾ ಸಂದರ್ಭದಲ್ಲಿಕ್ಯಾಮೆರಾ ಮುಂದೆ ನಿಂತು ಪಾಠ ಮಾಡುವ ಶಿಕ್ಷಕರು ಮಾತ್ರ ಯಶಸ್ವಿಯಾದರು ಎಂದು ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟಿನಚೇರಮೆನ್‍ಡಾ.ಸುರೇಶ ನಾಯಕಅಧ್ಯಕ್ಷತೆ ವಹಿಸಿದ್ದರು.ಶೈಕ್ಷಣಿಕ ವರ್ಷದಉತ್ತಮ ವಿದ್ಯಾರ್ಥಿಯಾಗಿದಾಕ್ಷಾಯಿಣಿ ಕಲಬಾಗ್, ಭವಿಷ್ಯದಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಭಾರ್ಗವಿ ಭಟ್ ಮತ್ತುಉತ್ತಮ ನಾಯಕತ್ವಗುಣದ ಶಿಕ್ಷಕಿ ಪ್ರಶಸ್ತಿಯನ್ನು ವೀಣಾ ನಾಯ್ಕ ಪಡೆದುಕೊಂಡರು.

ನಿವೃತ್ತ ಪ್ರಾಂಶುಪಾಲ ಡಾ.ಅಜಾತ ಸ್ವಾಮಿ ಅವರು, ಅವರತಂದೆಯವರಾದ ಎಚ್.ಎಮ್.ಜಿ.ಮೂರ್ತಿ ಅವರ ನೆನಪಿನಲ್ಲಿ ನೀಡುವಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಉಪನ್ಯಾಸಕ ಸುಬ್ರÀ್ರಮಣ್ಯ ಮತ್ತು ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಭಾರ್ಗವಿ ಭಟ್‍ಪಡೆದುಕೊಂಡರು.

ಪ್ರಾಂಶುಪಾಲ ಡಾ.ವಿರೇಂದ್ರ ಶಾನಭಾಗ ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ ವರದಿ ವಾಚಿಸಿದರು. ಮತ್ತು ಗಜಾನನ ಶಾಸ್ತ್ರಿ ದೀಪದಾನ ಕಾರ್ಯಕ್ರಮವನ್ನು ನೆರವೇರಿಸಿದರು. ಬಿ.ಎಡ್.ಪ್ರಶಿಕ್ಷಣಾರ್ಥಿಗಳಾದ ವಿಶಾಲಾ ಮತ್ತು ಸಂಗಡಿಗರು ಪ್ರಾರ್ಥಿಸಿದರು ಅನುಪ್ರಿಯಾ ವಂದಿಸಿದರು ಹಾಗೂ ಅನುಶ್ರೀ ಮತ್ತು ವರದಾ ಕಾರ್ಯಕ್ರಮವನ್ನು ನಿರೂಪಿಸಿದರು.

Read These Next