ಭಟ್ಕಳದ ಶಮ್ಸುದ್ಧೀನ್ ವೃತ್ತದ ಬಳಿ ರಸ್ತೆ ಅಪಘಾತ; ಆಟೋ ರಿಕ್ಷಾ ಚಾಲಕ ಗಂಭೀರ

Source: SOnews | By Staff Correspondent | Published on 27th March 2024, 5:55 PM | Coastal News |

ಭಟ್ಕಳ:  ಭಟ್ಕಳದ ಹೃದಯಭಾಗವಾಗಿರುವ ಶಂಶುದ್ದೀನ್ ವೃತ್ತದ ಬಳಿ ಖಾಸಗಿ ಬಸ್ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡ ಆಟೋ ರಿಕ್ಷಾ ಚಾಲಕನನ್ನು ಜಾಮಿಯಾಬಾದ್ ರಸ್ತೆಯ ಮಾಸ್ಟರ್ ಕಾಲೋನಿ ನಿವಾಸಿ ಮುಹಮ್ಮದ್ ಸುಹೇಲ್ (22) ಎಂದು ಗುರುತಿಸಲಾಗಿದೆ.

ಮೂವರು ಪ್ರಯಾಣಿಕರನ್ನು ಮದೀನಾ ಕಾಲೋನಿಯಿಂದ ಹಳೆ ಬಸ್ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದಾಗ ಪೆಟ್ರೋಲ್ ಪಂಪ್ ಬಳಿ ಯು-ಟರ್ನ್ ತೆಗೆದುಕೊಳ್ಳುವ ಸಂದರ್ಭ ಖಾಸಗಿ ಬಸ್ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಿಕ್ಷಾ ಚಾಲಕನ ತಲೆಗೆ ಗಂಭೀರ ಗಾಯವಾಗಿದೆ. ಅಪಘಾತದಲ್ಲಿ ಆಟೋ ಮುಂಭಾಗದ ಭಾಗವೂ ಜಖಂಗೊಂಡಿದೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next