ಸಂಭ್ರಮ ಸಡಗರದ ಸ್ವಾತಂತ್ರ್ಯೋತ್ಸವ ಹಬ್ಬಕ್ಕೆ ಎಲ್ಲ ಇಲಾಖೆ ಅಧಿಕಾರಿಗಳು ಸಿದ್ಧರಾಗಿರುವಂತೆ ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ ಸೂಚನೆ

Source: sonews | By Staff Correspondent | Published on 3rd August 2019, 10:22 PM | Coastal News |

ಭಟ್ಕಳ: 'ಸ್ವಾತಂತ್ರ್ಯ ದಿನಾಚರಣೆಯನ್ನು ವೈವಿಧ್ಯಮಯವಾಗಿ ಎಲ್ಲರು ಸಂಭ್ರಮದಿಂದ ಆಚರಿಸಬೇಕು. ದೇಶ ಸಿಕ್ಕ ಸ್ವಾತಂತ್ರ್ಯ ನಮ್ಮೆಲ್ಲರ ಹಬ್ಬದಂತಾಗಬೇಕು. ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಆಯಾ ಇಲಾಖೆ ಕಾರ್ಯಾಲಯದಲ್ಲಿ ನಡೆಯುವ ಧ್ವಜಾರೋಹಣದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಅದಾಗ ಬಳಿಕ ಸಾರ್ವಜನಿಕ ಧ್ವಜಾರೋಹಣ ಸ್ಥಳದಲ್ಲಿಯೂ ಪಾಲ್ಗೊಳ್ಳಬೇಕು ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಆಹ್ಮದ್ ಮುಲ್ಲಾ ಹೇಳಿದರು. 

ಗುರುವಾರ ತಹಸಿಲ್ದಾರ್ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸ್ವಾತಂತ್ಯ್ರೋತ್ಸ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಎಲ್ಲಾ ಕಾರ್ಯಕ್ರಮಕ್ಕೆ ನಿಯೋಜಿಸಿದ ಅಧಿಕಾರಿಗಳು ಶ್ರದ್ಧೆ ಮತ್ತು ಜಾಗರೂಕತೆಯಿಂದ ನಿರ್ವಹಿಸಬೇಕೆ ಎಂದು ಸೂಚಿಸಿದ ಅವರು, ಈ ಬಾರಿ ಮುಖ್ಯವಾಗಿ ಪ್ಲಾಸ್ಟಿಕ್ ಧ್ವಜ ಉಪಯೋಗಿಸಬಾರದು ಹಾಗೂ ಧ್ವಜಾರೋಹಣ ಮಾಡುವ ಪ್ರತಿಯೊಂದು ಕಡೆ ಹರಿದ ಅಥವಾ ಹಾಳಾದ ಧ್ವಜಗಳನ್ನು ಉಪಯೋಗಿಸದಂತೆ ಎಚ್ಚರವಹಿಸಬೇಕು ಎಂದರು. 

ನಂತರ ಕ್ರೀಡಾಂಗಣ ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಲು ಅನೂಕೂಲಕರ ವಾತಾವರಣ ಕಲ್ಪಿಸುವ ಕುರಿತು ಚರ್ಚಿಸಿ ಸಹಾಯಕ ಆಯುಕ್ತರು ಆಯಾ ಇಲಾಖೆಯ ಅಧಿಕಾರಿಗಳಿಗೆ ದಿನಾಚರಣೆಯ ಪೂರ್ವಭಾವಿಯ ಜವಾಬ್ದಾರಿಯನ್ನು ಸೂಚಿಸಿದರು. ಹಾಗೂ ತಾಲೂಕಿನ ಎಲ್ಲಾ ಸರಕಾರಿ ಕಛೇರಿಯಲ್ಲಿ ಅಗಸ್ಟ14ಮತ್ತು 15 ರ ಸಂಜೆಯವರೆಗೆ ದೀಪಾಲಂಕಾರ ಮಾಡಬೇಕು ಹಾಗೂ ಉತ್ತಮ ದೀಪಾಲಂಕಾರ ಮಾಡಿದವರಿಗೆ ಬಹುಮಾನ ನೀಡಲಾಗುವದು ಎಂದು ತೀರ್ಮಾನಿಸಲಾಯಿತು. 

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೇ ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲು ಸೂಚಿಸಲಾಯಿತು.  

ಈ ಬಾರಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಶಾಲಾಮಕ್ಕಳಿಗೆ ಸಿಹಿ ತಿಂಡಿ ಹಂಚಬೇಕೆಂದು ಸಭೆಯಲ್ಲಿ ತೀರ್ಮಾನಿಸಿದ್ದು ಇದಕ್ಕೆ ತಗಲುವ ವೆಚ್ಚವನ್ನು ರಾಬಿತಾ ಸೊಸೈಟಿ ಅವರು ಭರಿಸುವುದಾಗಿ ಸಭೆಯಲ್ಲಿ ಹಾಜರಿದ್ದ ಸಮಿತಿ ಸದಸ್ಯರು ತಿಳಿಸಿದರು. 

ಕಾರ್ಯಕ್ರಮದಲ್ಲಿಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ, ಅಗ್ನಿ ಶಾಮಕ ದಳಕ್ಕೆ ಸೂಚಿಸಿದ್ದು, ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಹಿನ್ನೆಲೆ ಆಕಸ್ಮಿಕ ತುರ್ತು ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಿ ಸೂಚಿಸಿದರು. ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ವೈ.ಎಸ್.ಎಸ್.ಎ. ಸಂಸ್ಥೆ ಬಟ್ಕಳ ಅವರಿಗೆ ಸಹಾಯಕ ಆಯಕ್ತರ ತಿಳಿಸಿದರು. ಅಲ್ಪೋಪಹಾರದ ವ್ಯವಸ್ಥೆಯನ್ನು ತಂಜೀಂ ಸಂಸ್ಥೆ ವಹಿಸಿಕೊಂಡಿತು. 
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಥ ಸಂಚಲನದಲ್ಲಿ ಭಾಗವಹಿಸುವ ಶಾಲಾ ಕಾಲೇಜು, ಸೇವಾದಳ, ಎನ್.ಸಿ.ಸಿ. ಸ್ಕೌಟ್ಸ ಅವರಿಗೆ ಪಥ ಸಂಚಲನದ ಬಗ್ಗೆ ತರಬೇತಿಯನ್ನು ತಾಲೂಕಾ ಕ್ರೀಡಾಂಗಣದಲ್ಲಿ ಅಗಸ್ಟ 13ಮತ್ತು14ರಂದು ನೀಡಲು ಪೊಲೀಸ ನಿರೀಕ್ಷಕರಿಗೆ ಸಹಾಯಕ ಆಯುಕ್ತರು ತಿಳಿಸಿದರು. 

ಈ ಸಂಧರ್ಭದಲ್ಲಿ ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ, ಪೊಲೀಸ ಇಲಾಖೆ ಅಧಿಕಾರಿಗಳು, ತಾಲೂಕಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...