ಗುವಾಹಟಿ: ಅಸ್ಸಾಮಿನಲ್ಲಿ ಬಾಲ್ಯ ವಿವಾಹದ ವಿರುದ್ಧ ರಾಜ್ಯ ಪೊಲೀಸರು ಮೂರನೇ ದಿನವಾದ ರವಿವಾರ ಕೂಡ ಕಾರ್ಯಾಚರಣೆ ಮುಂದುವರಿಸಿದ್ದು, ಇದುವರೆಗೆ ಬಂಧಿತರಾದವರ ಸಂಖ್ಯೆ 2,278ಕ್ಕೆ ಏರಿದೆ.
ರಾಜ್ಯಾದ್ಯಂತ ದಾಖಲಿಸಲಾದ 4,074 ಎಫ್‌ಐಆರ್ ಆಧಾರದಲ್ಲಿ ಬಂಧನ ನಡೆದಿದೆ. ವಿಶ್ವನಾಥ್ ನಿಂದ 139, ಬಾರ್ಪೇಟದಿಂದ 130 ಹಾಗೂ ದುಬ್ರಿಯಿಂದ 126 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 100ಕ್ಕಿಂತ ಅಧಿಕ ಮಂದಿಯನ್ನು ಬಂಧಿಸಲಾದ ಇತರ ಜಿಲ್ಲೆಗಳೆಂದರೆ ಬಕ್ಸಾ (123), ಬೊಂಗೈಗಾಂವ್ ಹಾಗೂ ಹೊಜೈ (ತಲಾ 1 ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಾಲ್ಯ ವಿವಾಹದ ವಿರುದ್ಧ ಧುಬ್ರಿಯಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ. ಆನಂತರ ಅತಿ ಹೆಚ್ಚು ಎಫ್‌ಐಆರ್‌ಗಳು ಹೊಟ್ಟೆಯಲ್ಲಿ 225 ಹಾಗೂ ಮೊರಿಗಾಂವ್‌ನಲ್ಲಿ 224 ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.