ಎಸ್.ಎಸ್.ಎಲ್.ಸಿ. ಯಲ್ಲಿ ’ಎ’ ಗ್ರೇಡ್ ಪಡೆದ ಅಸ್ನೋಟಿ ಪ್ರೌಢಶಾಲೆ

Source: sonews | By Staff Correspondent | Published on 13th August 2020, 5:53 PM | Coastal News |

ಕಾರವಾರ: ಕಾರವಾರ ತಾಲೂಕಿನ ಅಸ್ನೋಟಿ ಪ್ರೌಢಶಾಲೆಯು 2020 ರ ಜುಲೈನಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗುಣಾತ್ಮಕ ಫಲಿತಾಂಶದೊಂದಿಗೆ 'A' ಗ್ರೇಡ್ ಪಡೆದು, ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. 

ಪರೀಕ್ಷೆಯಲ್ಲಿ 3 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 06 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, 01 ವಿದ್ಯಾರ್ಥಿಯು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಕು. ಖುಷಿ ಗುರವ-91% ಹಿಂದಿಯಲ್ಲಿ 100ಕ್ಕೆ 100, ಕು. ಪ್ರಣಿತಾ ತಾಮಸೆ-89% ಹಿಂದಿಯಲ್ಲಿ 100ಕ್ಕೆ 100, ಕು. ನರೇಂದ್ರ ಎಲ್ಲೇಕರ-88% ಪ್ರಥಮಭಾಷೆ ಕನ್ನಡದಲ್ಲಿ 125ಕ್ಕೆ 125, ಕು. ವಿಪುಲ ಕೋಠಾರಕರ- 85%, ಕು. ಅಜೇಯ ಗಜಿನಕರ-78%, ಕು. ಪ್ರಥ್ವಿ ದೇವಳಿ-78%, ಕು. ದೀಕ್ಷಾ ಪಾರವಾಡಕರ-77.58%, ಕು. ತನ್ವಿ ಸಾವಂತ-76%, ಕು. ಪವಿತ್ರಾ ವೇಳಿಪ-76%, ಕು. ದಿಪೇಶ ಗಾವಡಾ-75.44%, ಕು. ಶ್ವೇತಾ ದೇಸಾಯಿ-75.44%, ಕು. ಸ್ವಾರ್ಥಿಕಾ ವೇಳಿಪ-75% ಫಲಿತಾಂಶವನ್ನು ದಾಖಲಿಸುವುದರ ಮೂಲಕ ಶಾಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಉಮೇಶ ಸಾಳುಂಕೆ, ಕಾರ್ಯದರ್ಶಿ ಸಂಜಯ ಸಾಳುಂಕೆ, ಉಪಾಧ್ಯಕ್ಷರಾದ ಅರುಣಕುಮಾರ ಸಾಳುಂಕೆ, ಪ್ರೇಮಾಶ್ರಮ ಚ್ಯಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಜಿ. ಎಸ್. ನಾಯ್ಕ, ಸೀತಾರಾಮ ಗಾಂವಕರ, ಡಾ. ಅನಿಲ ಗಾಂವಕರ, ಕಲ್ಲೂರು ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಎಮ್.ಎಫ್.ಜೆ. ಲಯನ್ ಇಬ್ರಾಹಿಂ ಕಲ್ಲೂರು, ಸಮಾಜ ಸೇವಕರಾದ ಆರ್.ಜಿ.ಪ್ರಭು, ಉಪತಹಶೀಲ್ದಾರರಾದ ಪರಶುರಾಮ ನಾಯಿಕ ಹಾಗೂ ಮುಖ್ಯಾಧ್ಯಾಪಕರಾದ ದಿನೇಶ ಗಾಂವಕರ, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್‍ನ ಅಧ್ಯಕ್ಷರು-ಪದಾಧಿಕಾರಿಗಳು ಜೊತೆಗೆ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಮಾಜಿ ವಿದ್ಯಾರ್ಥಿಗಳ ಸಂಘ, ಊರ ನಾಗಿಕರು ಅಭಿನಂದಿಸಿ ಶುಭಕೋರಿದ್ದಾರೆ. 
 

Read These Next

ಲಾಕ್ ಡೌನ್ ಆಗಿ ನಷ್ಟ ಅನುಭವಿಸಿದ್ದೇವೆ. ಮಾನವೀಯ ನೆಲೆಯಲ್ಲಿ ಅವಕಾಶ ಮಾಡಿಕೊಡಲು ಭಟ್ಕಳ ವ್ಯಾಪಾರಸ್ಥರ ಮನವಿ.

ಭಟ್ಕಳ : ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರು‌ ಲಾಕ್ ಡೌನ್ ಅವಧಿಯಲ್ಲಿ ನಷ್ಟ ಅನುಭವಿಸಿದ್ದು, ...