ಕಾರವಾರ: ಹೊಸದಾಗಿ ಪ್ರದೇಶ ಬಯಸುವ 5 ರಿಂದ 10 ನೇ ತರಗತಿಯೊಳಗಿನ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Source: SO NEWS | By S O News | Published on 27th October 2021, 7:08 PM | Coastal News |

ಕಾರವಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರದೇಶ ಬಯಸುವ 5 ರಿಂದ 10 ನೇ ತರಗತಿಯೊಳಗಿನ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ನವೆಂಬರ್ 13 ಒಳಗಾಗಿ ಅರ್ಜಿ ಸಲ್ಲಿಸಬೇಕು. ಪ್ರವರ್ಗ 1, ಎಸ್‍ಸಿ ಮತ್ತು ಎಸ್‍ಟಿ 1 ಲಕ್ಷ ಹಾಗೂ ಪ್ರವರ್ಗ 2ಎ, 2ಬಿ, 3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ 44,500 ರೂ ಆದಾಯ ಮಿತಿಯನ್ನು ಹೊಂದಿರು ಕುರಿತು ಆದಾಯ ಪ್ರಮಾಣ ಪತ್ರ ಮತ್ತು ತಹಶೀಲ್ದಾರರಿಂದ ಪಡೆದ ಜಾತಿ ಪ್ರಮಾಣ ಪತ್ರ,  ರೇಷನ್ ಕಾರ್ಡ್, ಆಧಾರ ಕಾರ್ಡ್, ಇಐಡಿ ನಂಬರ್ ಪ್ರತಿ (ಲಭ್ಯವಿದ್ದಲ್ಲಿ) ಹಾಗೂ ಹಿಂದಿನ ತರಗತಿ ಕೋರ್ಸ್ ಅಂಕಪಟ್ಟಿ ಹೊಂದಿರಬೇಕು.

ಬ್ಯಾಂಕ್ ಪಾಸ್‍ಬುಕ್, (ಮೊದಲ ಪುಟ ಸ್ಪಷ್ಟವಾಗಿ ಕಾಣುವಂತಹ) ವಿದ್ಯಾರ್ಥಿಯ ವಿಕಲಚೇತನ ಆಗಿದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಪೋಟೋ, ತೀವೃತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿಲ್ಲ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಮುಚ್ಚಳಿಕೆ, ಪಾಲಕರ ಅನುಮತಿ ಪತ್ರ,  ಕೋವಿಡ್ ನೆಗೆಟಿವ್ ರಿಪೋಟ್ ( 72ಗಂಟೆ ಯೊಳಗಿನ) ದಾಖಲೆಗಳೊಂದಿಗೆ ಸಂಬಂಧಿಸಿದ ನಿಲಯದ ಮೇಲ್ವಿಚಾರಕರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು.  

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-226589,  ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ವಿಸ್ತರಣಾಧಿಕಾರಿ ಅಥವಾ ಸಂಬಂಧಿಸಿದ ನಿಲಯದ ಮೇಲ್ವಿಚಾರಕರನ್ನು ಸಂಪರ್ಕಿಸಹುದೆಂದು ಹಿಂದುಳಿದವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...