ಕಾರವಾರ: ಕಾನೂನು ಪದವೀಧರರಿಗೆ ತರಬೇತಿ ಭತ್ಯೆಗೆ ಅರ್ಜಿ ಆಹ್ವಾನ

Source: S O News | By I.G. Bhatkali | Published on 8th November 2023, 8:45 PM | Coastal News | Don't Miss |

ಕಾರವಾರ: ಪ್ರಸಕ್ತ ಸಾಲಿನ ಜಿಲ್ಲೆಯ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲ ವೃತ್ತಿ ಸೇವೆಗೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ತರಬೇತಿ ಭತ್ಯೆ ನೀಡುವ ಸಂಬಂಧ  ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. 

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ನ.18 ರಂದು ಸಂಜೆ 5:30 ಗಂಟೆಯೊಳಗೆ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಕಾರವಾರ ರವರಿಗೆ ಅರ್ಜಿಯನ್ನು ಸಲ್ಲಿಸಬೇಕು. ನಿಗಧಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಅಥವಾ ತಾಲೂಕು ಹಿಂದುಳಿದ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದಾಗಿದೆ.

ಅಭ್ಯರ್ಥಿಯು ಕರ್ನಾಟಕ ರಾಜ್ಯ ನಿವಾಸಿಯಾಗಿರಬೇಕು, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ, (ಪ್ರವರ್ಗ-3ಬಿ,ಯಲ್ಲಿನ ಕ್ರಿಶ್ಚಿನ್, ಜೈನರುಗಳನ್ನು ಹೊರತು ಪಡಿಸಿ)ಗೆ ಸೇರಿದವರಾಗಿರಬೇಕು, ಕಾನೂನು ಪದವಿ ಪೂರೈಸಿರಬೇಕು, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಪ್ರವರ್ಗ-2ಎ, 3ಎ, 3ಬಿ(ಪ್ರವರ್ಗ-3ಬಿ,ಯಲ್ಲಿನ ಕ್ರಿಶ್ಚಿನ್, ಜೈನರುಗಳನ್ನು ಹೊರತು ಪಡಿಸಿ) ಗೆ ಸೇರಿದ ಅಭ್ಯರ್ಥಿಗಳು 38 ವರ್ಷಗಳನ್ನು ಮೀರಿರಬಾರದು, ಅಭ್ಯರ್ಥಿಗಳ ಪಾಲಕರ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ 1ಕ್ಕೆ ರೂ. 3.50 ಲಕ್ಷ ಹಾಗೂ ಪ್ರವರ್ಗ 2ಎ, 3ಎ, 3ಬಿ, (ಪ್ರವರ್ಗ-3ಬಿ,ಯಲ್ಲಿನ ಕ್ರಿಶ್ಚಿನ್, ಜೈನರುಗಳನ್ನು ಹೊರತು ಪಡಿಸಿ) ರೂ.2.50 ಲಕ್ಷ ಒಳಗೊಂಡಿರಬೇಕು ಅಭ್ಯರ್ಥಿಯು ಕಡ್ಡಾಯವಾಗಿ ಸ್ಟೇಟ್ ಬಾರ್ ಕೌನ್ಸಿಲ್‍ನಲ್ಲಿ ಹೆಸರನ್ನು ನೊಂದಾಯಿಸಿಕೊಂಡಿರಬೇಕು.

ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ 10ನೇ ತರಗತಿ ಅಂಕಪಟ್ಟಿ, ಕಾನೂನು ಪದವಿಯ ಧೃಢಿಕೃತ ಅಂಕಪಟ್ಟಿ (ಎಲ್ಲಾ ಸೆಮಿಸ್ಟರ್) ಕಾನೂನು ಪದವೀಯ ಉತ್ತೀರ್ಣ ಪ್ರಮಾಣ ಪತ್ರ, ಸ್ಟೇಟ್ ಬಾರ್ ಕೌನ್ಸಿಲ್‍ನಲ್ಲಿ ನೊಂದಣಿಯಾಗಿರುವ ಬಗ್ಗೆ ಪ್ರಮಾಣ ಪತ್ರ, ಜಿಲ್ಲಾ ಮತ್ತು ತಾಲೂಕ ಬಾರ್ ಅಸೋಸಿಯೇಷನ್‍ನಲ್ಲಿ ಸದಸ್ಯರಾಗಿರುವ ಬಗ್ಗೆ ಪ್ರಮಾಣ ಪತ್ರ, ಅಭ್ಯರ್ಥಿಯ ಬ್ಯಾಂಕ್ ಖಾತೆ ವಿವರ, ಅಭ್ಯರ್ಥಿಯ ಪಾಸ್‍ಪೋರ್ಟ್ ಸೈಜ್ 02 ಭಾವಚಿತ್ರ, ಈ ಎಲ್ಲಾ ದಾಖಲಾತಿಗಳ ದೃಢೀಕರಣದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next