ಉ.ಕ.ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಅನಂತ್ ಮೂರ್ತಿ ಹೆಗಡೆಯಿಂದ ಪಾದಯಾತ್ರೆ

Source: SOnews | By Staff Correspondent | Published on 7th February 2024, 6:28 PM | Coastal News |

ಭಟ್ಕಳ: ಉ.ಕ.ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿಲ್ಲೆಯ ಯುವಕರ ಉದ್ಯೋಗ ಸೃಷ್ಟಿಗಾಗಿ ಆಗ್ರಹಿಸಿ ಕುಮಟಾ ದಿಂದ ಆರಂಭಿಸಿದ್ದ ಉತ್ತರಕನ್ನಡ ಜನರ ಸ್ವಾಭಿಮಾನದ ಯಾತ್ರೆ ಬುಧವಾರ ಭಟ್ಕಳ ತಲುಪಿತು.

ಮುಂಬರುವ ಲೋಕಾಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಮಹತ್ವಕಾಂಕ್ಷಿಯ ಯುವ ನೇತಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಫೆ.೫ ರಂದು ಕುಮಟಾದಿಂದ ಆರಂಭಗೊಂಡ ಸ್ವಾಭಿಮಾನಿ ಪಾದ ಯಾತ್ರೆ ಸಚಿವ ಮಾಂಕಾಳ ವೈದ್ಯರಿಗೆ ಮನವಿ ಸಲ್ಲಿಸುವುದರ ಭಟ್ಕಳದಲ್ಲಿ ಮೂಲಕ ಕೊನೆಗೊಳ್ಳುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಮೂರ್ತಿ ಹೆಗಡೆ, ಉತ್ತರಕನ್ನಡ ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿಲ್ಲೆಯ ಯುವಕರ ಉದ್ಯೋಗ ಸೃಷ್ಟಿಗಾಗಿ ಆಗ್ರಹಿಸಿ ನಾನು ನಡೆಸುತ್ತಿರುವ ನಾಲ್ಕನೇಯ ಹೋರಾಟವಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಬಡಜನರ ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿಮಾರ್ಣವೊಂದೆ ದಾರಿಯಾಗಿದ್ದು, ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಮಾಂಕಾಳ್ ವೈದ್ಯರು ನೀಡಿದ ಭರವಸೆಯಂತೆ ಸರ್ಕಾರ ಹಣ ಬಿಡುಗಡೆ ಮಾಡಿದರೂ ಚಿಂತೆ ಇಲ್ಲ ತನ್ನ ಸ್ವಂತ ಹಣದಿಂದ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜ್ ಕಟ್ಟುತ್ತೇನೆ ಎಂದು ಹೇಳಿದ್ದರು. ಅದರಂತೆ ತಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಸಿಕೊಡಬೇಕು, ಮುಂಬರುವ ಬಜೆಟ್ ಅಧಿವೇಶನದಲ್ಲಿ ಉ.ಕ.ಜಿಲ್ಲೆಯ ಮೆಡಿಕಲ್ ಆಸ್ಪತ್ರೆಗೆ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿರು. ಒಂದು ಸಚಿವರು ತಮ್ಮ ಮಾತನ್ನು ಈಡೇರಿಸಲು ವಿಫರಾದಲ್ಲಿ ಜಿಲ್ಲೆಯ ಸಾವಿರಾರು ಯುವಕರನ್ನು ಸೇರಿಸಿ ಸಚಿವರ ಕಚೇರಿ ಎದುರು ಅಮರಣ ಉಪವಾಸ ಸತ್ಯಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದರು.

ಇವರ ಹೋರಾಟಕ್ಕೆ ಭಟ್ಕಳ ತಾಲೂಕು ಆಟೋರಿಕ್ಷಾ ಚಾಲಕರ ಸಂಘ ಬೆಂಬಲ ವ್ಯಕ್ತಪಡಿದೆ.

Read These Next