ಅದಾನಿ ಗ್ರೂಪ್ ಶೇರುಗಳಲ್ಲಿ ನಿಲ್ಲದ ಕುಸಿತ; ಕೇವಲ 22 ದಿನಗಳಲ್ಲಿ ಗೌತಮ್ ಅದಾನಿಗೆ ಅರ್ಧಕ್ಕೂ ಹೆಚ್ಚು ನಿವಳ ಸಂಪತ್ತು ನಷ್ಟ

Source: Vb | By I.G. Bhatkali | Published on 15th February 2023, 11:57 AM | National News |

ಹೊಸದಿಲ್ಲಿ,: ಅದಾನಿ ಗ್ರೂಪ್ ನ ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ ಅಮೆರಿಕದ ಹಿಂಡನ್ ಬರ್ಗ್ ರಿಸರ್ಚ್ ವರದಿ ಬಿಡುಗಡೆ ಗೊಂಡಾಗಿನಿಂದ ಕೇವಲ 22 ದಿನಗಳಲ್ಲಿ ತನ್ನ ಅರ್ಧಕ್ಕೂ ಹೆಚ್ಚಿನ ನಿವ್ವಳ ಸಂಪತ್ತನ್ನು (66 ಶತಕೋಟಿ ಡಾ.) ಕಳೆದುಕೊಂಡಿದ್ದು, ಮಂಗಳ ವಾರವೂ ಶೇರು ಮಾರುಕಟ್ಟೆಗಳಲ್ಲಿ ಅದಾನಿ ಕಂಪೆನಿಗಳ ಶೇರುಗಳಲ್ಲಿ ಭಾರೀ ಕುಸಿತ ಮುಂದುವರಿದಿತ್ತು.

ಮಂಗಳವಾರ ಒಂದು ಹಂತದಲ್ಲಿ ಅದಾನಿ ಗ್ರೂಪ್‌ನ 10 ಕಂಪೆನಿಗಳ ಶೇರುಗಳ ಪೈಕಿ ಹೆಚ್ಚುಕಡಿಮೆ ಎಲ್ಲವೂ ಲೋವರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿದ್ದವು ಅಥವಾ ಬೆಲೆಗಳು ಕುಸಿದಿದ್ದವು, ತನ್ಮೂಲಕ ಅದಾನಿ ಒಂದೇ ದಿನದಲ್ಲಿ 3.40 ಶತಕೋಟಿ ಡಾ. ನಷ್ಟವನ್ನು ಅನುಭವಿಸಿದ್ದಾರೆ.

ಅಪರಾಹ್ನ ಶೇರು ಮಾರುಕಟ್ಟೆಗಳು ಮುಕ್ತಾಯಗೊಂಡಾಗ ಕೇವಲ
ಮೂರು ಕಂಪೆನಿಗಳ ಶೇರುಗಳು ಚೇತರಿಸಿಕೊಂಡು ಇಂದಿನ ವಹಿ  ವಾಟಿನಲ್ಲಿ ಕೊಂಚ ಮಟ್ಟಿಗೆ ಲಾಭ ದಾಖಲಿಸಿವೆ.

ಅದಾನಿ ಗ್ರೀನ್, ಅದಾನಿ ಪವರ್, ಅದಾನಿ ಟ್ರಾನ್ಸ್ಮಿಷನ್, ಎನ್‌ಡಿಟಿವಿ, ಅದಾನಿವಿಲ್ಲರ್ ಮತ್ತು ಅದಾನಿ ಟೋಟಲ್ ಗ್ಯಾಸ್ ನ ಶೇರುಗಳು ಶೇ.5ರಷ್ಟು ನಷ್ಟದೊಂದಿಗೆ ಲೋವರ್ ಸರ್ಕ್ಯೂಟ್ ನಲ್ಲಿ ಲಾಕ್ ಆಗಿದ್ದರೆ, ಅಂಬುಜಾ ಸಿಮೆಂಟ್ಸ್ ಶೇ.2.06ರಷ್ಟು ನಷ್ಟವನ್ನು ಅನುಭವಿಸಿದೆ. ಅದಾನಿ ಎಂಟರ್‌ಪೈಸಸ್, ಅದಾನಿ ಪೋರ್ಟ್ಸ್ ಮತ್ತು ಎಸಿಸಿ ಕೂಡ ಬೆಳಗಿನ ವ್ಯವಹಾರದಲ್ಲಿ ಕುಸಿತ ಅನುಭವಿಸಿದ್ದು, ನಂತರ ಕೊಂಚ ಚೇತರಿಸಿಕೊಂಡು ವಹಿವಾಟಿನ ಅಂತ್ಯದಲ್ಲಿ ಕ್ರಮವಾಗಿ ಶೇ.1.88, ಶೇ.1.86 ಮತ್ತು ಶೇ.0.57ರಷ್ಟು ಗಳಿಕೆಯೊಂದಿಗೆ ಮುಕ್ತಾಯಗೊಂಡಿವೆ.

ಜ.14ರಂದು 119 ಶತಕೋಟಿ ಡಾ.ಗಳಷ್ಟಿದ್ದ ಅದಾನಿಯವರ ನಿವ್ವಳ ಸಂಪತ್ತು ಹಿಂಡನ್‌ಬರ್ಗ್ ವರದಿಯ ಬಳಿಕ 52.4 ಶತಕೋಟಿ ಡಾ.ಗೆ ಕುಸಿದಿದೆ. ಪರಿಣಾಮವಾಗಿ ವಿಶ್ವ ಬಿಲಿಯಾಧಿಪತಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಈಗ 24ನೇ ಸ್ಥಾನಕ್ಕೆ ಜಾರಿದ್ದಾರೆ.

ಅದಾನಿ ಕಂಪೆನಿಗಳ ಶೇರುಗಳ ಭರಾಟೆಯಿಂದಾಗಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಅದಾನಿ ಕಳೆದುಕೊಂಡಿದ್ದು,ಅದೀಗ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿಯವರ ಪಾಲಾಗಿದೆ.

Read These Next

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರಾಜಿನಾಮೆ ನಿಡ್ತಾರಾ? ಹಾಗಾದ್ರೆ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ?

ಹೊಸದಿಲ್ಲಿ : ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ನಿಜವಾಗ್ಲೂ ...

ಕೇಜ್ರವಾಲ್‌ಗೆ ಜಾಮೀನು; ಬಂಧನದ ಕಾನೂನುಬದ್ಧತೆ ಬಗ್ಗೆ ನ್ಯಾಯಾಧೀಶರಲ್ಲಿ ಭಿನ್ನಾಭಿಪ್ರಾಯ

ಅಭಿವೃದ್ಧಿ ಹೊಂದಿದ ಸಮಾಜಕ್ಕಾಗಿ ಸುಧಾರಿತ ನ್ಯಾಯವ್ಯವಸ್ಥೆಯೊಂದು ಯೊಂದು ಬೇಕು, ವಿಚಾರಣೆ ನಡೆಯುತ್ತಿರುವಾಗ ಆರೋಪಿಗಳನ್ನು ...

“ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ” ಸೆ.13-22 ರಾಜ್ಯವ್ಯಾಪಿ “ಸೀರತ್’ ಅಭಿಯಾನ

ಬೆಂಗಳೂರು: ಪ್ರವಾದಿ ಮುಹಮ್ಮದ್ ಅವರ ಜನ್ಮ ತಿಂಗಳ ಪ್ರಯುಕ್ತ ಅವರ ಮಾನವೀಯ ಹಾಗೂ ಚಾರಿತ್ರ್ಯದ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿರುವ ...