ಗಣತಿದಾರರು ಮನೆ, ಕಟ್ಟಡಗಳಿಗೆ ತೆರಳಿ ವ್ಯಾಪಾರ-ಉದ್ಯಮದ ವರದಿ ಸಲ್ಲಿಸಿ : ವಿನೋದ ಅಣ್ವೇಕರ

Source: sonews | By Staff Correspondent | Published on 27th June 2019, 6:44 PM | Coastal News |

7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ತರಬೇತಿ  ಕಾರ್ಯಗಾರ

ಕಾರವಾರ ; ಗಣತಿದಾರರು ತಮಗೆ ನಿರ್ದಿಷ್ಟಪಡಿಸಿದ ಗಡಿಯೊಳಗೆ ಬರುವ ಪ್ರತಿಮನೆ, ಕಟ್ಟಡಗಳಿಗೆ ಭೇಟಿನೀಡುವುದರ ಮೂಲಕ ಅಲ್ಲಿ ನಡೆಯುವ ವ್ಯಾಪಾರ-ಉದ್ಯಮದ ವರದಿ ಸಲ್ಲಿಸುವ ಮೂಲಕ 7ನೇ ಆರ್ಥಿಕ ಗಣತಿಯವನ್ನು ಸುಗಮವಾಗಿ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು.  
    
7ನೇ ಆರ್ಥಿಕ ಗಣತಿ 2019ರ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಲಾದ ಜಿಲ್ಲಾ ಮಟ್ಟದ ತರಬೇತಿಯಲ್ಲಿ ಮಾತನಾಡಿ, 7ನೇ ಆರ್ಥಿಕ ಗಣತಿಯ ಉದ್ದೇಶ, ಕಾರ್ಯವ್ಯಾಪ್ತಿ ಅನ್ವಯ ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಟ ಮಂತ್ರಾಲಯವು ಕಾಮನ ಸರ್ವಿಸ್ ಸೆಂಟರ್, ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ & ಐಟಿ ಇದರ ಮೂಲಕ 7ನೇ ಆರ್ಥಕ ಗಣತಿಯನ್ನು ಕೈಗೊಳ್ಳಲು ಉದ್ದೇಶಿಸಿದ್ದು ಇಂದು (ಜೂನ್.15 ರಂದು) ದೇಶಾದ್ಯಂತ ಚಾಲನೆಗೊಂಡಿದೆ.  ಆರ್ಥಿಕ ಗಣತಿಯ ಅವಧಿ ಮೂರು ತಿಂಗಳದ್ದಾಗಿದೆ.  ಆರ್ಥಿಕ ಗಣತಿ ಕಾರ್ಯದಲ್ಲಿ ಗಣತಿದಾರರು ತಮಗೆ ನಿರ್ದಿಷ್ಟಪಡಿಸಿದ ಗಡಿಯೊಳಗೆ ಬರುವ ಪ್ರತಿಮನೆ, ಕಟ್ಟಡಗಳಿಗೂ ಭೇಟಿನೀಡುವುದರ ಮೂಲಕ ಅಲ್ಲಿ ನಡೆಯುವ ಉದ್ಯಮದ ಅಥವಾ ವ್ಯಾಪಾರ ಘಟಕದ ಎಣಿಕೆ ಮಾಡಬೇಕು ಎಂದು ತಿಳಿಸಿದರು. 
   
ಆರ್ಥಿಕ ಗಣತಿ ಬಗ್ಗೆ ಹೆಚ್.ಎಲ್. ಲಮಾಣಿ ತರಬೇತಿ ನೀಡಿ ಯಾವುದೇ ಘಟಕದಲ್ಲಿ ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವಂತಹ ಉದ್ಯಮಗಳ ಪಟ್ಟಿಯನ್ನು ಗಣತಿದಾರರು ಸಿದ್ದಪಡಿಸಬೇಕಾಗುತ್ತದೆ.  ಹೀಗೆ ಪಟ್ಟಿಮಾಡುವಾಗ ನಿರ್ಧಿಷ್ಟ ಕಟ್ಟಡ ಹೊಂದಿ ವ್ಯವಹಾರ ಮಾಡುವ ಉದ್ಯಮಗಳಲ್ಲದೆ ನಿರ್ದಿಷ್ಟ ಕಟ್ಟಡವಿಲ್ಲದೆ ಸಂತೆ, ಬೀದಿ ಬದಿಯ ವ್ಯಾಪಾರ, ಮನೆಯಲ್ಲಿಯೇ ಕುಳಿತು ನಿರ್ವಹಿಸುವ ಟೈಲರಿಂಗ್ ಮತ್ತು ವಿವಿಧ ಸ್ವಉದ್ಯೋಗಗಳು, ಸಣ್ಣ ಪ್ರಮಾಣದ ಹೈನುಗಾರಿಕೆ ಇತ್ಯಾದಿ ಆರ್ಥಕ ಚಟುವಟಿಕೆ ನಡೆಸುವ ಉದ್ಯಮಗಳನ್ನು ಅದರ ಮಾಲೀಕರ ಮನೆಯಲ್ಲಿ ಎಣಿಕೆಮಾಡಲಾಗುತ್ತದೆ.  ಉದ್ದಿಮೆ ಮಾಲೀಕರ ಲಿಂಗವಾರು, ಸಾಮಾಜಿಕ ಗುಂಪುವಾರು ಮಾಹಿತಿಗಳು, ಗಂಡು, ಹೆಣ್ಣು ಕೆಲಸಗಾರರು, ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸಗಾರರು, ಉದ್ದಿಮೆಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಗಳು ಸಹ ಲಭ್ಯವಾಗುತ್ತದೆ.  ಆರ್ಥಿಕ ಗಣತಿಯ ಮೂಲಕ ಲಭ್ಯವಾಗುವ ಮಾಹಿತಿಗಳು ವಿವಿಧ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಲು, ಯೋಜನೆ ಸಿದ್ದಪಡಿಸಲು ಸರಕಾರಕ್ಕೆ ಮೂಲ ಅಂಕಿ ಅಂಶಗಳಾಗಿರುತ್ತವೆ ಎಂದು ತಿಳಿಸಿದರು. 
      
ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕರಾದ ಗೋಪನಾಥ ನಾಯಕ ಹಾಗೂ ಅಕ್ಷಯ ನಾಯ್ಕ ಅವರು ಮೊಬೈಲ್ ಆಪ್ ಬಗ್ಗೆ ಮಾಹಿತಿ ನೀಡಿ 7ನೇ ಆರ್ಥಿಕಗಣತಿಯ ಕ್ಷೇತ್ರಕಾರ್ಯವನ್ನು ಇದೇ ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಕಕೈಗೊಳ್ಳಲು ಉದ್ದೇಶಿಸಲಾಗಿದೆ.  ಗಣತಿ ಕಾರ್ಯ ಮತ್ತು ಮೊದಲನೇ ಹಂತದ ಮೇಲ್ವಿಚಾರಣೆಯನ್ನು ಕಾಮನ ಸರ್ವಿಸ್ ಸೆಂಟರ್, ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ & ಐಟಿ ಇದರ ಮೂಲಕ ಕೈಗೊಳ್ಳಲಾಗುತ್ತದೆ.  2011ರ ಗಣತಿ ಬ್ಲಾಕುಗಳು ಮತ್ತು ನಕ್ಷೆಗಳನ್ನು ಜನಗಣತಿ ನಿರ್ದೇಶನಾಲಯದಿಂದ ಸಿಎಸ್‍ಸಿ ಗಳಿಗೆ ಒದಗಿಸಲಾಗುತ್ತದೆ. ನೋಂದಾಯಿತ ಗಣತಿದಾರರಿಗೆ ಹಂಚಿಕೆಯಾಗುವ ಗಣತಿ ಬ್ಲಾಕುಗಳ ವಿವರಗಳು ಮೊಬೈಲ್ ಆಪ್ನಲ್ಲಿಯೇ ಲಭ್ಯವಾಗುವ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...