ಭೋಪಾಲ: 40,000 ರೂ., ಕಳೆದುಕೊಂಡ 13ರ ಬಾಲಕ ಆತ್ಮಹತ್ಯೆ ಆನ್‌ಲೈನ್ ಗೇಮ್ ಪಿಡುಗು

Source: VB | By S O News | Published on 1st August 2021, 7:05 PM | National News |

ಭೋಪಾಲ: ಆನ್‌ಲೈನ್‌ ನಲ್ಲಿಯ 'ಫ್ರೀ ಫೈರ್' ಗೇಮ್‌ನಲ್ಲಿ 40,000 ರೂ. ಕಳೆದುಕೊಂಡ 13ರ ಹರೆಯದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತ್ತರಪುರದ ಶಾಂತಿನಗರದಲ್ಲಿ ನಡೆದಿದೆ. ಬಾಲಕ ತನ್ನ ಹೆತ್ತವರಿಗೆ ಗೊತ್ತಿಲ್ಲದೆ ಈ ಮೊತ್ತವನ್ನು ಆನ್‌ಲೈನ್‌ ಗೇಮ್‌ಗೆ ವ್ಯಯಿಸಿದ್ದ.

ಘಟನೆ ನಡೆದಾಗ ಬಾಲಕ ಮತ್ತು ಸೋದು ಮನೆಯಲ್ಲಿದ್ದರು. ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ತಾಯಿಗೆ ಆಕೆಯ ಬ್ಯಾಂಕ್ ಖಾತೆಯಿಂದ ಹಣ ಕಡಿತವಾದ ಬಗ್ಗೆ ಸಂದೇಶ ಬಂದಿತ್ತು. ಆಕೆ ತಕ್ಷಣ ಮಗನಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದು, ಆನ್‌ಲೈನ್‌ ಗೇಮ್‌ಗಾಗಿ ತಾನು ಹಣ ವ್ಯಯಿಸಿದ್ದನ್ನು ಆತ ಒಪ್ಪಿಕೊಂಡಿದ್ದ. ಹೀಗಾಗಿ ಆಕೆ ಮಗನಿಗೆ ಛೀಮಾರಿ ಹಾಕಿದ್ದರು. ಇದಾದ ಬಳಿಕ ಬಾಲಕ ತನಕೋಣೆಗೆ ತೆರಳಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳದಲ್ಲಿ ಆತ್ಮಹತ್ಯಾ ಚೀಟಿ ಪತ್ತೆಯಾಗಿದ್ದು, ತಾನು ತಾಯಿಯ ಬ್ಯಾಂಕ್ ಖಾತೆಯಿಂದ 40,000 ರೂ. ತೆಗೆದಿದ್ದನ್ನು ಬಾಲಕ ಒಪ್ಪಿಕೊಂಡಿದ್ದಾನೆ.

ಬಾಲಕ ಗೇಮ್ಸ್‌ನಲ್ಲಿ ಸ್ವತಃ ವಹಿವಾಟು ನಡೆಸುತ್ತಿದ್ದನೇ ಅಥವಾ ಯಾರಾದರೂ ಹಣಕ್ಕಾಗಿ ಆತನನ್ನು ಹೆದರಿಸುತ್ತಿದ್ದರೇ ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read These Next

ಓವೈಸಿ ಮನೆ ಮೇಲೆ ದಾಳಿ: ಐವರ ಬಂಧನ

ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರ ಇಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ ಆರೋಪದ ಮೇರೆಗೆ ಹಿಂದೂ ಸೇನಾದ ಐವರನ್ನು ...

ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ; ಚರಣ್‌ಜೀತ್ ಸಿಂಗ್ ಚನ್ನಿಗೆ ಸಿಎಂ ಪಟ್ಟ, ಇಂದು ಪ್ರಮಾಣ

ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ...