ಭಟ್ಕಳ: ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಬಿದ್ದು ಸಾವು

Source: S O News | By MV Bhatkal | Published on 6th December 2022, 11:49 PM | Coastal News |

ಭಟ್ಕಳ: ತಾಲೂಕಿನ ಅಳ್ವೆಕೋಡಿ ಬಂದರಿನಿದ ಮೀನುಗಾರಿಕೆಗೆ ತೆರಳಿದ ದೋಣಿಯೊಂದರಲ್ಲಿ ತೆರಳಿದ್ದ ಮೀನುಗಾರನೋರ್ವ ಅಕಸ್ಮಾತ್ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತ ಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. 

ಮೃತನನ್ನು ಹೆಬಳೆ ಗ್ರಾಮದ ಕುಕ್‌ನೀರ್ ನಿವಾಸಿ ರಾಮಚಂದ್ರ ಅಣ್ಣಪ್ಪ ಮೊಗೇರ (೬೬) ಎಂದು ಗುರುತಿಸಲಾಗಿದೆ. 

ಈತನು ಭಾನುವಾರ ಅಳ್ವೇಕೋಡಿ ಬಂದರಿನಿAದ ಮತ್ಸö್ಯದೀಪ ಎನ್ನುವ ಮೀನುಗಾರಿಕಾ ದೋಣಿಯಲ್ಲಿ ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆಂದು ತೆರಳಿರುವಾಗ ಸೋಮವಾರ ರಾತ್ರಿ ಮೀನುಗಾರಿಕಾ ಬಲೆಯನ್ನು ಬೀಸುವ ಸಂದರ್ಭದಲ್ಲಿ ಅಕಸ್ಮಾತ್ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. 

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

Read These Next

ಬೆಂಗಳೂರು ಚಲೋ ಪೂರ್ವಭಾವಿ ಸಭೆ: ಅರಣ್ಯವಾಸಿಗಳ ಮೇಲೆ ದೌರ್ಜನ್ಯ ನಿಲ್ಲಿಸಿ. ರವೀಂದ್ರ ನಾಯ್ಕ

ಅರಣ್ಯವಾಸಿಗಳ ಮೇಲೆ ಕಾನೂನುಬಾಹೀರ ದೌರ್ಜನ್ಯ ಮತ್ತು ಕಿರುಕುಳ ನೀಡುವುದನ್ನು ನಿಯಂತ್ರಿಸಿ ಇಲ್ಲದಿದ್ದರೆ ಜಿಲ್ಲಾದ್ಯಂತ ಅರಣ್ಯ ...