ರೋಗಿಗಳು 'ಮೃತ' ಪಟಿದರೂ ಚಿಕಿತ್ಸೆಗೆ 7 ಕೋ.ರೂ. ಪಾವತಿ; ಪಿಎಂಜಿವೈ ಯೋಜನೆಯಲ್ಲಿ ಭ್ರಷ್ಟಾಚಾರ? ಸಿಎಜಿ ವರದಿ

Source: Vb | By I.G. Bhatkali | Published on 17th August 2023, 8:37 AM | State News |

ಹೊಸದಿಲ್ಲಿ: ಈ ಮೊದಲೇ ಮೃತಪಟ್ಟಿದ್ದಾರೆಂದು ಘೋಷಿಸಲ್ಲಟ್ಟ 3,446 ರೋಗಿಗಳ ಚಿಕಿತ್ಸೆಗಾಗಿ ಆಯುಷ್ಠಾನ್ ಭಾರತ' - ಪ್ರಧಾನ ಮ೦ತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ)ಯಡಿ ಒಟ್ಟು 6.96 ಕೋಟಿ ರೂ. ಪಾವತಿಸಿರುವುದನ್ನು ಭಾರತೀಯ ನಿಯಂತ್ರಕರು ಹಾಗೂ ಮಹಾಲೇಖಪಾಲ(ಸಿಎಜಿ) ವರದಿ ಬಹಿರಂಗಪಡಿಸಿದೆ. ಆ ಮೂಲಕ ಬಡಜನರಿಗೆ ಉಚಿತವಾಗಿ ಚಿಕಿತ್ಸೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯ ಪಿಎಂಜೆಎವೈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಈ ವರದಿ ಸುಳಿವು ನೀಡಿದೆ.

ಪಿಎಂಜೆಎವೈ ಯೋಜನೆಯ ವ್ಯವಹಾರ ನಿರ್ವಹಣಾ ವ್ಯವಸ್ಥೆಯಲ್ಲಿ (ಟಿಎಂಎಸ್) ಮೃತಪಟ್ಟಿದ್ದಾರೆಂದು ನಮೂದಿಸಲ್ಪಟ್ಟ ರೋಗಿಗಳಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಇಂತಹ 3,446 ರೋಗಿಗಳಿಗೆ ಸಂಬಂಧಿಸಿದ 3,903 ಕ್ಷೇಮುಗಳನ್ನು ತಾನು ಪತ್ತೆಹಚ್ಚಿರುವುದಾಗಿ ಅದು ಹೇಳಿದೆ.

'ಮೃತಪಟ್ಟರೂ' ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪೈಕಿ ಹೆಚ್ಚಿನ ಸಂಖ್ಯೆಯ ರೋಗಿಗಳು ಕೇರಳದಲ್ಲಿದ್ದು, ಅವರ ಸಂಖ್ಯೆ 966 ಆಗಿದೆ. ಅವರ ಚಿಕಿತ್ಸೆಗಾಗಿ 2.60 ಕೋಟಿ ರೂ. ಪಾವತಿಸಲಾಗಿದೆ. ಆನಂತರದ ಸ್ಥಾನದಲ್ಲಿರುವ ಮಧ್ಯಪ್ರದೇಶಲ್ಲಿ 403 ರೋಗಿಗಳಿಗೆ 1.12 ಕೋಟಿ ರೂ. ಪಾವತಿಸಲಾಗಿದೆ ಹಾಗೂ ಛತ್ತೀಸ್‌ ಗಡದಲ್ಲಿ 365 ರೋಗಿಗಳಿಗೆ 33.70 ಲಕ್ಷ ರೂ. ಪಾವತಿಸಲಾಗಿದೆ. ಎಂದು ಸಿಎಜಿ ವರದಿ ತಿಳಿಸಿದೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಲ್ಲಿ ಮೃತ ರೋಗಿಗಳ ನೋಂದಣಿಯಲ್ಲಿ ಲೋಪಗಳಿರುವುದನ್ನು 2020ರಲ್ಲಿ ಮೊದಲ ಬಾರಿಗೆ ತಾನು ಬೆಟ್ಟು ಮಾಡಿ ತೋರಿಸಿರುವುದಾಗಿ ಅದು ಹೇಳಿದೆ.

ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು 2020ರ ಜುಲೈನಲ್ಲಿ ಸಿಎಜಿಗೆ ನೀಡಿದ ವಿವರಣೆ ಒಂದರಲ್ಲಿ, ವ್ಯವಹಾರ ನಿರ್ವಹಣಾ ವ್ಯವಸ್ಥೆಯಲ್ಲಿ ಮೃತಪಟ್ಟಿದ್ದಾರೆಂದು ತೋರಿಸಲಾದ ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಯೋಜನೆಯ ಇನ್ನಷ್ಟು ಪ್ರಯೋಜನಗಳನ್ನು ಪಡೆಯದಂತೆ ನೋಡಿಕೊಳ್ಳಲು ಪಿಎಂಜೆಎವೈ ಗುರುತುಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದೆ.

ಪಿಎಂಜೆಎವೈ ಯೋಜನೆಯಡಿ ಸುಮಾರು 7.5 ಲಕ್ಷ ಫಲಾನುಭವಿಗಳು ಒಂದೇ ಮೊಬೈಲ್ ಫೋನ್ ಸಂಖ್ಯೆಯಡಿ ನೋಂದಾಯಿಸಲ್ಪಟ್ಟಿರುವುದು ಸಿಎಜಿ ಕಳೆದ ವಾರ ಪ್ರಕಟಿಸಿದ ವರದಿಯೊಂದರಲ್ಲಿ ಬಯಲುಪಡಿಸಿತ್ತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...