ಕುಸ್ತಿಪಟುಗಳು ಸರ್ಕಾರಕ್ಕೆ 5 ದಿನಗಳ ಗಡುವು; ರಾಷ್ಟ್ರಪತಿ ಮೌನ, ಪ್ರಧಾನಿ ನಿರ್ಲಕ್ಷ್ಯ; ಸಾಕ್ಷಿ ಮಲಿಕ್ ಆಕ್ರೋಶ

Source: Vb | By I.G. Bhatkali | Published on 1st June 2023, 8:28 AM | National News |

ಹೊಸದಿಲ್ಲಿ: ಒಲಿಂಪಿಕ್ ಪದಕ ವಿಜೇತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಮಂಗಳವಾರ ಪೋಸ್ಟ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೆ ಸ್ಪಂದಿಸಿದ ಇದ್ದುದಕ್ಕಾಗಿ ರಾಷ್ಟ್ರಾಧ್ಯಕ್ಷೆ ದ್ರೌಪದಿ ಮೂರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಖಂಡಿಸಿದ್ದಾರೆ.

ರಾಷ್ಟ್ರಾಧ್ಯಕ್ಷೆ ದ್ರೌಪದಿ ಮುರ್ಮು ಅವರಿಗೆ ಪದಕಗಳನ್ನು ಹಿಂದಿರುಗಿಸುವುದು ತಮಗೆ ಹಿತಕರವೆನಿಸುವುದಿಲ್ಲವೆಂದು ಆಕೆ ಹೇಳಿದ್ದಾರೆ. “ರಾಷ್ಟ್ರಾಧ್ಯಕ್ಷೆಯಾಗಿ ಮುರ್ಮು ನಮ್ಮಿಂದ ಕೇವಲ ಎರಡು ಕಿ.ಮೀ.ದೂರದಲ್ಲಿ ಕುಳಿತುಕೊಂಡು ನೋಡುತ್ತಿದ್ದಾರೆ, ಆದರೆ ಏನೂ ಹೇಳುತ್ತಿಲ್ಲ' ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಕುಸ್ತಿಪಟುಗಳನ್ನು ತನ್ನ ಮನೆಯ ಮಗಳಂದಿರು ಎಂದು ಬಣ್ಣಿಸಿದ್ದ ಪ್ರಧಾನಿ ಮೋದಿಯವರ ವಿರುದ್ಧ ಮಲಿಕ್ ತೀವ್ರ ಆಕ್ರೋಶ ವೈಕ್ತ ಪಡಿಸಿದ್ದಾರೆ. ಪದಕಗಳನ್ನು ಪ್ರಧಾನಿಯವರಿಗೆ ಹಿಂದಿರುಗಿಸುವುದಕ್ಕೊ ಕುಸ್ತಿಪಟುಗಳು ವಿರೋದವಾಗಿದ್ದಾರೆ. ಏಕೆಂದರೆ ತನ್ನ ಮನೆಯ ಮಗಳಂದಿರ ಬಗ್ಗೆ ಅವರು ಕಾಳಜಿ ವಹಿಸುತ್ತಿಲ್ಲ. ಬದಲಿಗೆ, ನೂತನ ಸಂಸತ್ ಭವನದ ಉದ್ಘಾಟನೆಗೆ ದೌರ್ಜನ್ಯಕೋರನನ್ನು ಆಹ್ವಾನಿಸಿದ್ದಾರೆ. ಆತ ಬಿಳಿಬಣ್ಣದ ಉಡುಪುಗಳೊಂದಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿದ್ದ ಆ ಬಿಳುಪುನಮ್ಮನ್ನು ಇರಿಯುತ್ತಿತ್ತು. ನಾನೇ ಇಲ್ಲಿನ ವ್ಯವಸ್ಥೆ ಎಂದು ಹೇಳುತ್ತಿರುವಂತೆ ಭಾಸವಾಗುತ್ತಿತ್ತು ಎಂದು ಆಕೆ ಪರೋಕ್ಷವಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ನನ್ನು ಉಲ್ಲೇಖಿಸಿ ಟ್ವಿಟ್ ಮಾಡಿದ್ದಾರೆ.

ಇಂತಹ ವ್ಯವಸ್ಥೆಯಲ್ಲಿ, ಭಾರತದ ಪುತ್ರಿಯರಿಗೆ ಎಲ್ಲಿ ಸ್ಥಳವಿದೆ?. ನಾವು ಕೇವಲ ಘೋಷಣೆಗಳಾಗಿದ್ದೇವೆಯೇ ಅಥವಾ ಕೇವಲ ಅಧಿಕಾರಕ್ಕೇರಲು ಬೇಕಾದ ಕಾರ್ಯಸೂಚಿಯಾಗಿದ್ದೇವೆಯೇ?. ಇಂತಹ ಪದಕಗಳ ಅಗತ್ಯ ಇನ್ನು ನಮಗಿಲ್ಲ. ಯಾಕೆಂದರೆ ಅವುಗಳನ್ನು ಈ ವ್ಯವಸ್ಥೆ ಕೇವಲ ಅದರ ಪ್ರಚಾರಕ್ಕೆ ಬಳಸಿಕೊಳ್ಳುತ್ತದೆ. ಆನಂತರ ನಮ್ಮನ್ನು ಶೋಷಿಸುತ್ತದೆ. ಒಂದು ವೇಳೆ ನಾವು ಶೋಷಣೆಯ ವಿರುದ್ಧ ಧ್ವನಿಯೆತ್ತಿದಲ್ಲಿ, ನಮ್ಮನ್ನು ಜೈಲಿಗಟ್ಟಲು ಸಿದ್ಧತೆ ನಡೆಸಲಾಗುತ್ತದೆ ಎಂದು ಮಲಿಕ್ ಹೇಳಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...