25 ವರ್ಷದ ನಂತರ ಡಾ.ಯು.ಚಿತ್ತರಂಜನ್ ಕುರಿತು "ಅಜಾತ ಶತ್ರು" ಪುಸ್ತಕದ ಬಿಡುಗಡೆ

Source: so news | By MV Bhatkal | Published on 25th January 2021, 10:43 PM | Coastal News |

 

ಭಟ್ಕಳ:ಮಾಜಿ ಶಾಸಕ,ಪ್ರಸಿದ್ಧ ವೈದ್ಯರಾಗಿದ್ದ ಡಾ. ಯು. ಚಿತ್ತರಂಜನ್ ಅವರ ಕುರಿತು ಅವರ ಸಹೋದರಿ ಶಾಲಿನಿ ಮೂರ್ತಿ ಅವರು ಸಂಪಾದಿಸಿ ಪ್ರಕಟಿಸಿದ "ಅಜಾತ ಶತ್ರು" ಪುಸ್ತಕದ ಬಿಡುಗಡೆ ಕಾರ್ಯಕ್ರಮ ಇಲ್ಲಿನ ಕಾಶೀಮಠದ ಸಭಾಂಗಣದಲ್ಲಿ ನಡೆಯಿತು.
ಪುಸ್ತಕವನ್ನು ಹಿರಿಯರಾದ ವಿಠಲ ರಾಮ ಪ್ರಭು, ಮಳ್ಳಾ ನಾಯ್ಕ, ನಾಗೇಂದ್ರ ಶೆಟ್ಟಿ ಹಾಗೂ ಎಂ.ವಿ. ಹೆಬಳೆ ಅವರು ಜಂಟಿಯಾಗಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಆರ್.ಎಸ್.ಎಸ್. ವಕ್ತಾರರಾದ ಹನುಮಂತ ಶ್ಯಾನಭಾಗ ಅವರು ಮಾತನಾಡಿ ಡಾ. ಚಿತ್ತರಂಜನ್ ಅವರು ಭಟ್ಕಳಕ್ಕೆ ಬಂದು ಇಲ್ಲಿನ ಆರ್.ಎಸ್.ಎಸ್. ಶಾಖೆಯನ್ನು ಸೇರಿದ ನಂತರ ಅವರ ಜೀವನದ ಚಿತ್ರಣವೇ ಬದಲಾಯಿತಲ್ಲದೇ ವಯಕ್ತಿಕವಾಗಿಯೂ ಬದಲಾದರು. ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ ಸಹ ರಾಜಕೀಯದ ಕೆಲವೊಂದು ಘಟನೆಗಳಿಂದ ಬೇಸರಗೊಂಡು ರಾಜಕೀಯವೇ ಬೇಡಾ ಎನ್ನುವ ಸ್ಥಿತಿಯಲ್ಲಿದ್ದರಲ್ಲದೇ ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ನಿರ್ಧಾರ ಕೂಡಾ ಮಾಡಿದ್ದರು. ಆದರೆ ವಿಧಯಾಟವೇ ಬೇರೆಯಾಗಿತ್ತು, ಹುತಾತ್ಮರಾದರು ಎಂದು ಹೇಳಿದರು.
ಡಾಕ್ಟರ್‍ಜಿಯವರ ಬಲಿದಾನದ 25 ವರ್ಷದ ನಂತರ ಅವರ ಕುರಿತು ಪುಸ್ತಕ ಬಿಡುಗಡೆಯಾಗುತ್ತಿದೆ. ಅವರ ಜೀವನ ಇತರರಿಗೆ ಮಾರ್ಗದರ್ಶನವಾಗಲಿ ಎನ್ನುವುದೇ ನಮ್ಮ ಇಚ್ಚೆ ಎಂದರು.
ಡಾ. ಚಿತ್ತರಂಜನ್ ಅವರ ಪುತ್ರ ಹೃದಯರೋಗ ತಜ್ಞ ಡಾ. ರಾಜೇಶ್ ಚಿತ್ತರಂಜನ್ ಅವರು ಮಾತನಾಡಿ ತಮ್ಮ ತಂದೆಯವರ ಸಾಮಾಜಿಕ ಕಾರ್ಯದ ಕುರಿತು ವಿವರಿಸಿದರು. ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕುರಿತು ಕನಸು ಕಂಡಿದ್ದರು, ಜನರಿಗೆ ಸ್ವ ಉದ್ಯೋಗ ನೀಡುವ ಉದ್ದೇಶದಿಂದ ಸೇವಾ ವಾಹಿನಿಯನ್ನು ತೆರೆದು ಅನೇಕರಿಗೆ ಸ್ವಾವಲಂಬಿ ಜೀನವಕ್ಕೆ  ದಾರಿ ತೊರಿಸಿದ್ದರು. ಅಂದಿನ ವಿಧಾನ ಸಭೆಯಲ್ಲಿ ಅವರು ನೀಡಿದ ಭಾಷಣ ಅನೇಕವು ಇಂದಿಗೂ ದಾಖಲೆಯಾಗಿವೆ. ಸ್ವತಹ ಮುಖ್ಯ ಮಂತ್ರಿ, ಉಪಮುಖ್ಯ ಮಂತ್ರಿಗಳೇ ಇವರ ಮಾತಿಗೆ ಬೇಷ್ ಎಂದಿದ್ದರು ಎಂದು ನೆನಪಿಸಿಕೊಂಡ ಅವರು ಅವರ ಜೀವನದ ಉನ್ನತಿಗೆ ಸಾಮಾಜಿಕ, ರಾಜಕೀಯ ಕಾರ್ಯಕ್ಕೆ ತಮ್ಮ ತಾಯಿ ಶೋಭಾ ಅವರ ಕೊಡುವೆ ಅಪಾರವಾದದ್ದು ಎಂದು ನೆನಪಿಸಿಕೊಳ್ಳುತ್ತಾ ಗದ್ಗದಿತರಾದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ ಎಸ್. ವೈದ್ಯ, ಮೀನುಗಾರರ ಮುಖಂಡ ವಸಂತ ಖಾರ್ವಿ, ಪುಸ್ತಕ ಬಿಡುಗಡೆಗೊಳಿಸಿದ ವಿಠಲ ಪ್ರಭು, ಎಂ.ವಿ.ಹೆಬಳೆ ಮಾತನಾಡಿದರು.
ಗಣಪತಿ ಶಿರೂರು ಸ್ವಾಗತಿಸಿದರು. ಎ.ಎನ್. ಪೈ  ಪ್ರಾಸ್ತಾವಿಕವಾಗಿ ಮಾತನಾಡಿದರು,  ಶಾಲಿನಿ ಮೂರ್ತಿ ಪುಸ್ತಕ ಪರಿಚಯ ಮಾಡಿದರು. ಗಂಗಾಧರ ನಾಯ್ಕ ಹಾಗೂ ನಾರಾಯಣ ನಾಯ್ಕ ನಿರೂಪಿಸಿದರು. ನಳಿನಿ ಭಟ್ಟ ವಂದಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...