ಹೈದರಾಬಾದ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿಗಳ ಎನ್‌ಕೌಂಟರ್‌ ನಕಲಿ. ಸುಪ್ರೀಂ ಕೋರ್ಟ್ ನೇಮಿತ ಆಯೋಗ

Source: Vb | By I.G. Bhatkali | Published on 21st May 2022, 8:12 AM | National News |

ಹೈದರಾಬಾದ್: ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿದ್ದ ನ್ಯಾಯಮೂರ್ತಿ ವಿ.ಎಸ್. ಸಿರ್‌ಪೂರ್ಕರ್ ಆಯೋಗವು, 'ಎನ್‌ಕೌಂಟರ್' 'ಕಪೋಲಕಲ್ಪಿತ ಮತ್ತು 'ನಂಬಲನರ್ಹ'ವಾಗಿದೆ ಎಂದು ಹೇಳಿದೆ. “ಎನ್‌ಕೌಂಟರ್'ನಲ್ಲಿ ಪಾಲ್ಗೊಂಡ ತಂಡದ 10 ಪೊಲೀಸರ ವಿರುದ್ಧ ತನಿಖೆ ನಡೆಯಬೇಕೆಂದೂ ಆಯೋಗವು ಶಿಫಾರಸು ಮಾಡಿದೆ.

ಆಯೋಗದ ವರದಿಯನ್ನು ಶುಕ್ರವಾರ ಸಾರ್ವಜನಿಕರಿಗೆ ಲಭಿಸುವಂತೆ ಮಾಡಲಾಗಿದೆ.ಪೊಲೀಸ್ ತಂಡವು ಆತ್ಮರಕ್ಷಣೆಗಾಗಿ ಅಥವಾ ಶಂಕಿತರ ಮರುಬಂಧನಕ್ಕಾಗಿ ಗುಂಡು ಹಾರಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಸುರಕ್ಷಿತ ಮನೆಯಿಂದ ಮೊದಲ್ಗೊಂಡು ಚಟನ್‌ಪಲ್ಲಿಯಲ್ಲಿ ನಡೆದ' ಎನ್‌ಕೌಂಟರ್'ವರೆಗೆ ಪೊಲೀಸ್ ತಂಡವು ಎನ್ನುವುದನ್ನು ದಾಖಲೆಗಳು ತೋರಿಸುತ್ತವೆ.

ಪೊಲೀಸರ ಆಯುಧಗಳನ್ನು ಎಳೆಯುವುದು ನೀಡಿರುವ ಇಡೀ ವಿವರಣೆಯು 'ಕಪೋಲಕಲ್ಪಿತ ಶಂಕಿತರಿಗೆ ಸಾಧ್ಯವಿರಲಿಲ್ಲ. ಅವರು ಬಂದೂಕುಗಳನ್ನು ಬಳಸುವುದೂ ಸಾಧ್ಯವಿರಲಿಲ್ಲ. ಹಾಗಾಗಿ, ಪೊಲೀಸರ ಇಡೀ ಹೇಳಿಕೆ ನಂಬಲನರ್ಹ” ಎಂದು ವರದಿ ಹೇಳಿದೆ.

2019 ನವೆಂಬರ್ 28ರಂದು, ಹೈದರಾಬಾದ್ ನಲ್ಲಿ ಪಶು ವೈದ್ಯೆ 'ದಿಶಾ'ರನ್ನು ಅಪಹರಿಸಲಾಗಿತ್ತು. ಬಳಿಕ ಅವರ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲ್ಲಲಾಗಿತ್ತು. ದುಷ್ಕರ್ಮಿಗಳು ಆಕೆಯ ದೇಹವನ್ನು ಹೈದರಾಬಾದ್‌ನ ಹೊರವಲಯದಲ್ಲಿ ಎಸೆದು ಸುಟ್ಟು ಹಾಕಿದ್ದರು. ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. 2019 ಡಿಸೆಂಬರ್ 6ರಂದು ಆರೋಪಿಗಳನ್ನು ಪೊಲೀಸರು 'ಎನ್ ಕೌಂಟರ್”ನಲ್ಲಿ ಕೊಂದಿದ್ದರು.

ಈ 'ಎನ್‌ಕೌಂಟರ್' ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ 2019 ಡಿಸೆಂಬರ್ 12ರಂದು ಆಯೋಗವನ್ನು ರಚಿಸಿತ್ತು. ಸಿರ್‌ಪೂರ್ಕರ್ ಆಯೋಗವನ್ನು ಆಯೋಗವು 2022 ಜನವರಿ 28ರಂದು ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.

ಸಿರ್‌ಪೂರ್ಕರ್ ಆಯೋಗದ ಇತರ ಸದಸ್ಯರೆಂದರೆ ನ್ಯಾಯಮೂರ್ತಿ ರೇಖಾ ಪೀ ಸೊಂಡೂರ್ ಬಲ್ನೋಟ ಮತ್ತು ಡಿ.ಆರ್. ಕಾರ್ತಿಕೇಯನ್.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...