ಗೋವಾ:ಸನ್‍ರೈಸ್ ನೋಡಲು ಹೋದ ಬೀಚ್​ನಲ್ಲಿ ನೀರುಪಾಲಾದ ಇಬ್ಬರು ಪ್ರವಾಸಿಗರು 

Source: so news | Published on 18th June 2018, 10:22 PM | National News |

ಪಣಜಿ: ಪ್ರವಾಸಿಗರಿಬ್ಬರು ಸಮುದ್ರ ಅಲೆಗಳಲ್ಲಿ ಕೊಚ್ಚಿ ಹೋಗಿರುವ ಘಟನೆ ಗೋವಾದ ಬಾಗಾ ಬೀಚ್ ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಓರ್ವ ಯುವತಿ, ಇಬ್ಬರು ಯುವಕರು ಜೊತೆಯಾಗಿ ಬಾಗಾ ಬೀಚ್ ನಲ್ಲಿ ಸೂರ್ಯೋದಯ ನೋಡಲು ಹೋಗಿದ್ದರು. ಈ ವೇಳೆ ಶಶಿಕುಮಾರ್ ಎಂಬ ವ್ಯಕ್ತಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾನೆ.
ಶಶಿಕುಮಾರ್ ಸಮುದ್ರ ಬಂಡೆಗಳ ಮೇಲೆ ಕುಳಿತು ಹತ್ತಿರದಿಂದ ಸಮುದ್ರ ಅಲೆಗಳನ್ನು ನೋಡಲು ತೆರಳಿದ್ದರು. ಈ ವೇಳೆ ಸಮುದ್ರದ ಅಲೆ ಬಂಡೆಗಲ್ಲಿಗೆ ಅಪ್ಪಳಿಸಿದ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಶಶಿಕುಮಾರ್ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸ್ನೇಹಿತರ ಮೊಬೈಲ್ ನಲ್ಲಿ ಸೆರೆಯಾಗಿದೆ.

Read These Next

ಗೃಹ ಸಚಿವ ಅಮಿತ್ ಶಾಗೆ ಎಲುಬು ಕ್ಯಾನ್ಸರ್? ಇದು ವದಂತಿ ಎಂದ ಆಲ್ಟ್ ನ್ಯೂಸ್‌ ಫ್ಯಾಕ್ಟ್ ಚೆಕ್

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಟ್ವೀಟ್‌ ಮಾಡಿದ್ದಾರೆ ಎನ್ನಲಾಗಿರುವ ನಕಲಿ ಟ್ವೀಟ್‌ವೊಂದರ ಸ್ಕ್ರೀನ್‌ಶಾಟ್ ...

ತಬ್ಲಿಗಿ ಜಮಾಅತ್ ಸಮ್ಮೇಳನ; ಸುಳ್ಳು ಸುದ್ದಿ ಹರುತ್ತಿರುವ ಮಾಧ್ಯಮಗಳ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಲೇರಿದ ಯತ್ ಉಲೇಮಾ ಹಿಂದ್

ನವದೆಹಲಿ: ಮಾರ್ಚ್ ನಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಗೀ ಜಮಾಅತ್ ಸಮ್ಮೇಳನದ ಹೆಸರಲ್ಲಿ ಮಾಧ್ಯಮದ ಒಂದು ವರ್ಗವು ಮುಸ್ಲಿಂ ಸಮುದಾಯದ ...

ನಿಝಾಮುದ್ದೀನ್ ಮರ್ಕಝ್ ಖಾಲಿ ಮಾಡಿಸುವಾಗ ತಬ್ಲೀಗಿಗಳು ಒಮ್ಮೆಯೂ ಕೆಟ್ಟದಾಗಿ ವರ್ತಿಸಿಲ್ಲ: ಡಾ. ಊರ್ವಿ ಶರ್ಮ

ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ದೇಶದ ವಿವಿಧೆಡೆಗೆ ಕೊರೊನ ಹರಡಿತು ಎಂಬ ಮಾಧ್ಯಮ ವರದಿಗಳ ...