ಗಗನಕ್ಕೇರಿದ ಅಣಬೆ ಬೆಲೆ ಜನಸಾಮಾನ್ಯನ ಕೈಗೆಟುಕದ ಅಣಬೆ

Source: SO News | By MV Bhatkal | Published on 31st July 2018, 12:19 AM | Coastal News |

                                                                                                                   
                                                                                                                                                                                                                                             
ಭಟ್ಕಳ: ಭಟ್ಕಳದಲ್ಲಿ ಹೆಚ್ಚು ಮಾರಾ ಟವಾಗುವ ಹೆಗ್ಗಲಿ ಜನಸಾಮಾನ್ಯರ ಕೈಗೆಟಕದಂತಾಗಿರುವುದು ನೋಡಿಯೇ ಬಾಯಿಯಲ್ಲಿ ನೀರೂರಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ.
ಮಳೆಗಾಲ ಆರಂಭದಲ್ಲಿಯೇ ಕಾಡಿನಲ್ಲಿ ಬೆಳೆಯುವ ಹೆಗ್ಗಲಿ (ಅಣಬೆ)ಗಳನ್ನು ಗ್ರಾಮೀಣ ಭಾಗದ ಜನರು ಬೆಳಗಿನ ಜಾವವೇ ಕಾಡಿಗೆ ಹೋಗಿ ಕಾಡಿನಲ್ಲಿ ಹುತ್ತಗಳಲ್ಲಿ ಹಾಗೂ ಅತ್ಯಂತ ಹುಲುಸಾಗಿರುವ ಪ್ರದೇಶದಲ್ಲಿ ಬೆಳೆದಿರುವ ಅಣಬೆಗಳನ್ನು ಕಿತ್ತು ತರುತ್ತಾರೆ. ಭಟ್ಕಳ ಪೇಟೆಗೆ ಬಂದರೆ ಅಣಬೆಗೆ ಎಲ್ಲಿಲ್ಲದ ಡಿಮಾಂಡ್!
ಮೊದ ಮೊದಲು ಬರುತ್ತಿದ್ದ ಅಣಬೆಗೆ 100ಕ್ಕೆ 600 ರೂಪಾಯಿ ತನಕವಿದ್ದರೆ ಇಂದು ಸ್ವಲ್ಪ ದರ ಕಡಿಮೆಯಾಗಿದ್ದು ಉತ್ತಮ ಜಾತಿಯ ಅಣಬೆಗೆ 500 ರೂಪಾಯಿ ಇದ್ದರೆ ಸ್ವಲ್ಪ ಅರಳದೇ ಇರುವ ಅಣಬೆಗೆ 400 ರಿಂದ 500 ರೂಪಾಯಿ ಇದೆ. ಇದಕ್ಕೆ ಕಾರಣ ಅನಿವಾಸಿ ಮುಸ್ಲಿಂ ಬಾರತೀಯರು  ಭಟ್ಕಳಕ್ಕೆ ಬಂದಿದ್ದು ಅಪರೂಪದ ಹೆಗ್ಗಲಿ ಎಷ್ಠೆ ದರವಿದ್ದರೂ ಖರೀದಿ ಮಾಡಿ ಹೋಗುತ್ತಿದ್ದಾರೆ.
ಮಳೆಗಾಲದಲ್ಲಿ ಕಾಡಿನಲ್ಲಿ ಬೆಳೆಯುವ ತಾಜಾ ಹೆಗ್ಗಲಿ (ಅಣಬೆ)ಗೆ ಪ್ರತಿವರ್ಷ ಭಟ್ಕಳದಲ್ಲಿ ಭಾರೀ ಬೇಡಿಕೆ ಇರುತ್ತದೆ. ಕಳೆದ ವರ್ಷ 100ಕ್ಕೆ 100 ರಿಂದ 300 ರೂಪಾಯಿ ತನಕ ಇದ್ದರೆ ಈ ಬಾರಿ ಮಾತ್ರ ಒಂದೇ ಸವನೆ ದರ ಗಗನ್ನೇರಿದ್ದು ಹೆಗ್ಗಲಿ ಪ್ರಿಯರಿಗೆ ಸ್ವಲ್ಪ ಕಹಿಯಾಗಿದೆ. ಹೆಗ್ಗಲಿಯ ದರ ದುಪ್ಪಟ್ಟಾಗಿದ್ದರೂ ಕೂಡಾ ಖರೀಧಿಗೆ ಮಾತ್ರ ಜನ ಹಿಂದೆ ಬಿದ್ದಿಲ್ಲ. ಬೆಳಿಗ್ಗೆಯಿಂದಲೇ ಕಾಯುತ್ತಿರುವ ಜನರು ಗ್ರಾಮೀಣ ಭಾಗದಿಂದ ಹೆಗ್ಗಲಿಯನ್ನು ಚೀಲದಲ್ಲಿ ತರುವುದನ್ನೇ ಕಾಯುತ್ತಿರುತ್ತಾರೆ.
ತಾಲೂಕಿನ ಗ್ರಾಮೀಣ ಪ್ರದೇಶವಾದ ಹಾಡುವಳ್ಳಿ, ಕೋಣಾರ, ಮಾರೂಕೇರಿ. ಶಿರಾಲಿ, ಶಿರಾಣಿ, ಕಟಗಾರಕೊಪ್ಪ ಮುಂತಾದ ಕಡೆಗಳಲ್ಲಿ ಅರಣ್ಯದಲ್ಲಿ ಇರುವ ಹುತ್ತದ ಮೇಲೆ ಇಲ್ಲವೇ ಹುಲುಸಾಗಿ ಇರುವ ಮಣ್ಣು ದಿಣ್ಣೆಯ ಮೇಲೆ ಹೆಗ್ಗಲಿ ಬೆಳೆಯುತ್ತಿದ್ದು, ಎರಡು ತಿಂಗಳುಗಳ ಕಾಲ ಮಾತ್ರ ಇದು ದೊರೆಯುತ್ತದೆ. ಇಲ್ಲಿನ ಕೆಲವೊಬ್ಬರ ಸಂಪ್ರದಾಯದ ಪ್ರಕಾರ ನಾಗರ ಪಂಚಮಿಯ ನಂತರ ಹೆಗ್ಗಲಿಯನ್ನು ತಿನ್ನುವುದಿಲ್ಲವಾದ್ದರಿಂದ ನಂತರ ಈ ಪ್ರಮಾಣದಲ್ಲಿ ದರ ಸಮರ ಇರುವುದಿಲ್ಲ.
ಗ್ರಾಮೀಣ ಭಾಗದಲ್ಲಿ ಹಲವರು ಹೆಗ್ಗಲಿ ಮಾರಾಟವನ್ನೇ ಕಾಯಕವನ್ನಾಗಿ ಮಾಡಿಕೊಳ್ಳುತ್ತಾರೆ. ಬೆಳಿಗ್ಗೆಯ ಮಳೆಯನ್ನೂ ಲೆಕ್ಕಿಸದೇ ಅವರು ಕಾಡಿಗೆ ಹೋಗಿ ಹೆಗ್ಗಲಿಯಲ್ಲಿ ಸಂಗ್ರಹ ಮಾಡಿಕೊಂಡು ಆದಷ್ಟು ಬೇಗ ಭಟ್ಕಳ ನಗರವನ್ನು ತಲುಪಲು ಪ್ರಯತ್ನಿಸುತ್ತಾರೆ. ಒಬ್ಬರು 200-300 ರಿಂದ 1000ದ ತನಕವೂ ಅಣಬೆಯನ್ನು ಕಿತ್ತು ತರುವುದರಿಂದ ಉತ್ತಮ ಆದಾಯವೂ ದೊರೆಯುವುದು.
ಗ್ರಾಮೀಣ ಭಾಗದ ತಾಜಾ ಹೆಗ್ಗಲಿಯಿಂದ ಮಾಡಿದ ಪದಾರ್ಥ ಹೆಚ್ಚಿನ ರುಚಿ ನೀಡುತ್ತದಾದ್ದರಿಂದ ಇದಕ್ಕೆ ಹೆಚ್ಚು ಹೆಚ್ಚು ಬೇಡಿಕೆಯಿದೆ. ಹೆಗ್ಗಲಿಯಿಂದ ಸಂಬಾರು, ಪಲ್ಯ, ಸುಕ್ಕ, ಚಟ್ನೆ ಮುಂತಾದ ಪದಾರ್ಥಗಳನ್ನು ರುಚಿಕರವಾಗಿ ತಯಾರಿಸಬಹುದಾಗಿದೆ ಎನ್ನುವುದು ಗ್ರಾಹಕರ ಅಭಿಪ್ರಾಯವಾಗಿದೆ.
ಇದು ಉತ್ತಮ ಪೌಷ್ಟಿಕಾಂಶವನ್ನೂ ಸಹ ಹೊಂದಿದ್ದರಿಂದ ಆರೋಗ್ಯಕ್ಕೂ ಒಳ್ಳೆಯದು ಎಂಬ ಅಭಿಪ್ರಾಯವಿದೆ.
ನಗರದ  ತಾ. ಪಂ ಎದುರುಗಡೆ, ಹಳೇ ಬಸ್ ನಿಲ್ದಾಣದ ಬಳಿ ಗ್ರಾಮೀಣ ಪ್ರದೇಶದ ಜನರು ಹೆಗ್ಗಲಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾರೆ. ಬೆಳಿಗ್ಗೆ ಬಂದರೆ ಒಮ್ಮೊಮ್ಮೆ ಸಂಜೆಯ ತನಕವೂ ವ್ಯಾಪಾರ ನಡೆದೇ ಇರುತ್ತದೆ.
ಈ ಬಾರಿ ಎಲ್ಲಾ ವಸ್ತುಗಳ ಬೆಲೆಯೂ ಜಾಸ್ತಿಯಾಗಿರುವುದರಿಂದ ಸಹಜವಾಗಿ ಹೆಗ್ಗಲಿಯ ದರ ಜಾಸ್ತಿಯಾಗಿದೆ ಎನ್ನುತ್ತಾರೆ ಮಾರಾಟಗಾರರು. ಜೊತೆಗೆ ಹಳ್ಳಿಗಳಿಂದ ನಾವು ಬೆಳಗಿನ ಜಾವವೇ ಹೋಗಿ ಕಾಡನ್ನು ಸುತ್ತಾಡಿ ಕಷ್ಟಪಟ್ಟು ಹುಡುಕಿ ಕಿತ್ತು ತರುವುದೆಂದರೆ ಪ್ರಯಾಸದ ಕೆಲಸವಾಗಿದೆ ಎನ್ನುತ್ತಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...