ತಾಲೂಕುಮಟ್ಟದ ಕ್ರೀಡಾಕೂಟ;ಆನಂದ ಆಶ್ರಮ ಪಿಯು  ಕಾಲೇಜ್ ವಿದ್ಯಾರ್ಥಿಗಳ ಸಾಧನೆ

Source: sonews | By sub editor | Published on 9th September 2018, 4:02 PM | Coastal News |

ಭಟ್ಕಳ:  ಅಂಜುಮಾನ್ ಗಲ್ರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಆನಂದ ಆಶ್ರಮ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಜೀವನ ಎಮ್. ನಾಯ್ಕ ಗುಂಡು ಎಸೆತ ಪ್ರಥಮ,  ವಿಕಿತ್ ಕೆ. ನಾಯ್ಕ ಕರಾಟೆ ಪ್ರಥಮ, ನಿರ್ಮಲ್ ಜೇಮ್ಸ್ 400ಮೀ. ಓಟ ಪ್ರಥಮ, ಪ್ರವೀಣ ಕೆ. ನಾಯ್ಕ, ನಿರ್ಮಲ್ ಜೇಮ್ಸ್, ಜೆಫಿನ್ ಥೋಮಸ್, ಹೃತಿಕ್ 4-400 ಮೀ. ರಿಲೇ ಪ್ರಥಮ, ವಿನಯ ಎಸ್. ದೇವಡಿಗ ಚೆಸ್ ಪ್ರಥಮ, ಸೈಮಾ ಫರ್ಜಿನ್ ಸಂಗಡಿಗರು ಶೆಟಲ್ ಬ್ಯಾಡ್ಮಿಟನ್ ಪ್ರಥಮ, ಅನುಷಾ ಪಿರೇರಾ ಜಾವೆಲಿನ್ ಥ್ರೋ ದ್ವಿತೀಯ, ಹೃತಿಕ್ ನಾಯ್ಕ 400 ಮೀ ಓಟ ದ್ವಿತೀಯ, ಜ್ಯೋತಿ ನಾಯ್ಕ ಗುಂಡು ಎಸೆತ ದ್ವಿತೀಯ, ಮಹಮ್ಮದ್ ಅರ್ಶಾದ್ ಚೆಸ್ ತೃತೀಯ, ಜೀವನ್ ನಾಯ್ಕ 100 ಮೀ. ಓಟ ತೃತೀಯ, ಹರ್ಷಿತಾ ಶೆಟ್ಟಿ 800 ಮೀ. ಓಟ ತೃತೀಯ, ರೇನಿಷಾ ಪುರ್ಟಾಡೋ ಗುಂಡು ಎಸೆತ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 
ತಾಲೂಕಾ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕ ವಸಂತ ಲೋಪಿಸ್ ಅವರನ್ನು ಆಡಳಿತ ಮಂಡಳಿ, ಪ್ರಾಂಶುಪಾಲೆ ಥೆರೇಸಿಯಾ ಸೆರಾ ಹಾಗೂ ಶಿಕ್ಷಕ ವೃಂದ  ಅಭಿನಂದಿಸಿದೆ.
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...