ಸುರತ್ಕಲ್ ಮಾರುಕಟ್ಟೆ : ಹೋರಾಟಕ್ಕೆ ಮಣಿದ ಪಾಲಿಕೆ. ಧರಣಿ ಹಿಂಪಡೆಯಲು ನಿರ್ಧಾರ

Source: sonews | By Staff Correspondent | Published on 12th March 2018, 11:06 PM | Coastal News |

ಸುರತ್ಕಲ್ ಸ್ಥಳಾಂತರಿತ ಮಾರುಕಟ್ಟೆಯ ಕಟ್ಟಡದ ಗೋಡೆಗಳನ್ನು ಪ್ರಭಾವಿ ಅಂಗಡಿದಾರರು ಒಡೆದು ಹಾಕಿದ ನಂತರಮಾರುಕಟ್ಟೆ ಅಕ್ರಮಗಳ ವಿರುದ್ದ  ಅನಿರ್ಧಿಷ್ಟ ಹಗಲು ರಾತ್ರಿ ಧರಣಿ ಕೂತಿದ್ದ dyfi ಸುರತ್ಕಲ್ ಘಟಕಇಂದು ಒಡೆದ ಕಟ್ಟಡ ಗೋಡೆಗಳನ್ನು ಪಾಲಿಕೆ ಮರು ನಿರ್ಮಿಸಲು ತೊಡಗಿದ ಹಿನ್ನಲೆಯಲ್ಲಿಕಳೆದ ಹತ್ತು ದಿನಗಳಿಂದ ನಡೆಸುತ್ತಿರುವ ಧರಣಿಯನ್ನು ಹಿಂಪಡೆಯಲು ನಿರ್ಧರಿಸಿತು.

ಒಡೆದ ಪಾಲಿಕೆಯ ಕಟ್ಟಡಗಳನ್ನು ಮರು ನಿರ್ಮಿಸಬೇಕುಸಾರ್ವಜನಿಕ ಸ್ವತ್ತಿಗೆ ಹಾನಿ ಉಂಟು ಮಾಡಿದವರಿಂದ ದಂಡ ವಸೂಲಿ ಮಾಡಬೇಕುಅಕ್ರಮವಾಗಿನಡೆದಿರುವ ಅಂಗಡಿ ಹಂಚಿಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿ ಕ್ರಮಬದ್ದವಾಗಿ ನಡೆಸಬೇಕುತಾತ್ಕಾಲಿಕ ಕಟ್ಟಡಕ್ಕೆ ಐದು ಕೋಟಿ ಖರ್ಚು ಮಾಡಿರುವುದರಹಿಂದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು ಭ್ರಷ್ಟಾಚಾರದಲ್ಲಿ ಗುತ್ತಿಗೆದಾರರುಅಧಿಕಾರಿಗಳುಜನಪ್ರತಿನಿಧಿಗಳು ಶಾಮೀಲಾಗಿದ್ದುಗುತ್ತಿಗೆಕಾಮಗಾರಿ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕುಎಲ್ಲಾ ವ್ಯಾಪಾರಿಗಳಿಗೂ ಸ್ಥಳಗಳನ್ನು ನಿಗದಿ ಪಡಿಸಬೇಕುಹೊಸದಾಗಿ ನಿರ್ಮಾಣಗೊಳ್ಳುವ ಮಾರುಕಟ್ಟೆ ಸಂಕೀರ್ಣದಲ್ಲಿ ಹಳೆ ಮಾರುಕಟ್ಟೆ ವ್ಯಾಪಾರಿಗಳಿಗೆ ಮಳಿಗೆಗಳನ್ನು ಖಾತರಿ ಪಡಿಸಬೇಕುಸ್ಥಳಾಂತರದಸಂದರ್ಭ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಾರ್ವಜನಿಕರುಮಾರುಕಟ್ಟೆ ವ್ಯಾಪಾರಿಗಳ ಬೆಂಬಲದೊಂದಿಗೆdyfi ಕಾರ್ಯಕರ್ತರು ಕಳೆದ ಹತ್ತು ದಿನಗಳಿಂದ ಮಾರುಕಟ್ಟೆ ಮುಂಭಾಗ ಹಗಲು ರಾತ್ರಿ ಧರಣಿ ನಡೆಸುತ್ತಿದ್ದರುಅಧಿಕಾರಿಗಳುಶಾಸಕರುಅಂಗಡಿಮಾಲಕರು ಸೇರಿದಂತೆ ಧರಣಿ ನಿರತರೊಂದಿಗೆ ನಡೆಯುತ್ತಿದ್ದ ಹಗ್ಗಜಗ್ಗಾಟ ಸ್ಥಳೀಯರಲ್ಲಿ ವ್ಯಾಪಕ ಕುತೂಹಲಕ್ಕೆ ಕಾರಣವಾಗಿತ್ತುಯಾವುದೇ ಒತ್ತಡಕ್ಕೆಮಣಿಯದೆ ಛಲದಿಂದ ಮುಂದುವರಿದ ಹೋರಾಟಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಸಹಾನುಭೂತಿ ವ್ಯಕ್ತವಾಗಿತ್ತುಧರಣಿಯ ಎಂಟನೇ ದಿನ ಶಾಸಕಮೊಯ್ದಿನ್ ಬಾವಾಮಂಗಳೂರು  ಸಿತಹಶೀಲ್ದಾರ್ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ್ದರು‌. ಕೊನೆಗೂ ಸಾರ್ವಜನಿಕಅಭಿಪ್ರಾಯಕ್ಕೆ ಮಣಿದ ಪಾಲಿಕೆ ಇಂದು ಒಡೆದ ಕಟ್ಟಡಗಳನ್ನು ಪುನರ್ನಿರ್ಮಾಣದ ಕಾಮಗಾರಿಯನ್ನು ಆರಂಭಿಸಿದ್ದುಪ್ರತಿಭಟನಾಕಾರರುಸಾರ್ವಜನಿಕರುಮಾರುಕಟ್ಟೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳ  ಸೂಚನೆಯಂತೆ ಸ್ಥಳಕ್ಕೆ ಬಂದಿದ್ದ ಹಿರಿಯ ಅಧಿಕಾರಿಗಳ ಮಾತಿನಂತೆ ಗೋಡೆ ನಿರ್ಮಾಣ ಕಾಮಗಾರಿ ಆರಂಭಗೊಂಡಿರುವುದರಿಂದಅನಿರ್ಧಿಷ್ಟ ಧರಣಿಯನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದೇವೆಹೂವಿನ ವ್ಯಾಪರಿಗಳುಮಾರುಕಟ್ಟೆಯ ಸುತ್ತ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಸೂಕ್ತಸ್ಥಳ ನೀಡುವುದುಅಂಗಡಿ ಹಂಚುವಿಕೆಯಲ್ಲಿ ಅಕ್ರಮ ನಡೆಸಿರುವ ಅಧಿಕಾರಿಗಳ ಮೇಲೆ ಕ್ರಮತಾತ್ಕಾಲಿಕ ಕಟ್ಟಡ ನಿರ್ಮಾಣದಲ್ಲಿ ನಡೆದಿರುವಕೋಟ್ಯಾಂತರ ಮೊತ್ತದ ಹಗರಣವನ್ನು ಸಮಗ್ರ ನಡೆಸುವುದು ಸೇರಿದಂತೆ ಉಳಿದ ಬೇಡಿಕೆಗಳ ಬಗ್ಗೆ ನೀಡಿರುವ ಭರವಸೆಗಳನ್ನು ಜಿಲ್ಲಾಧಿಕಾರಿಗಳುಈಡೇರಿಸುತ್ತಾರೆ ಎಂಬ ನಂಬಿಕೆಯಿದೆಪ್ರಮುಖ  ಬೇಡಿಕೆಗಳು ಈಡೇರದಿದ್ದಲ್ಲಿ ಮುಂದೆ ಇನ್ನಷ್ಟು ಹೋರಾಟಗಳನ್ನು ನಡೆಸುವುದಾಗಿ ಪ್ರತಿಭಟನೆಯನೇತೃತ್ವ ವಹಿಸಿದ್ದ  dyfi ಮುಖಂಡರಾದ ಮುನೀರ್ ಕಾಟಿಪಳ್ಳಬಿ ಕೆ ಇಮ್ತಿಯಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆಹೋರಾಟವನ್ನು ಬೆಂಬಲಿಸಿದಕಾಳಜಿವಹಿಸಿದ ಸುರತ್ಕಲ್ ಭಾಗದ ನಾಗರಿಕರುಸಂಘಸಂಸ್ಥೆಗಳ ಮುಖಂಡರುಮಾರುಕಟ್ಟೆ ವ್ಯಾಪಾರಿಗಳಿಗೆ ದನ್ಯವಾದ ಸಲ್ಲಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...