ಶ್ರೀ ಗುರು ಸುಧೀಂದ್ರ ಕಾಲೇಜಿನಿಂದ ಸ್ವಚ್ಛತಾ ಆಭಿಯಾನದ ವಿಶಿಷ್ಠ ಕಾರ್ಯಕ್ರಮ

Source: sonews | By Staff Correspondent | Published on 1st October 2018, 5:45 PM | Coastal News |

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜು ಭಟ್ಕಳದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸಪ್ಟೆಂಬರ್ 2 ರಿಂದ ಅಕ್ಟೋಬರ್ 01 ವರೆಗೆ 30 ದಿನಗಳ ಕಾಲ 30  ವಿಶಿಷ್ಟ, ವಿಭಿನ್ನ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. 

ದಿನಕ್ಕೊಂದರಂತೆ ಸೀಡ್ ಬಾಲ್, ಇ-ವೇಸ್ಟ್ ನಿರ್ವಹಣೆ, ಸ್ವಚ್ಛ ಮನ್, ಸಮುದ್ರ ಕಿನಾರೆ ಸ್ವಚ್ಛತೆ, ಗ್ರಾಮೀಣ ಪರಿಸರ ಸ್ವಚ್ಚತೆ, ಭಾಷಣ, ನಿಬಂಧ, ಕಸದಿಂದ ರಸ, ಪುರಸಭಾ ಕಾರ್ಮಿಕರಿಗೆ ಸನ್ಮಾನ,  ಸಾಮೂಹಿಕ ಘೋಷ ವಾಕ್ಯ, ಪ್ರತಿಜ್ಞಾ ಸ್ವೀಕಾರ ಮುಂತಾದ ಅರ್ಥಪೂರ್ಣ ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿ ಹಾಗೂ ನಾಗರಿಕರಿಗೆ ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು. 

ಇದರ ಭಾಗವಾಗಿ 30 ದಿನಗಳ ಕಾರ್ಯಕ್ರಮದ ಚಿತ್ರಮಾಲಿಕೆ ಹಾಗೂ "ಕಸದಿಂದ ರಸ" ಎಂಬ ವಸ್ತು ಪ್ರದರ್ಶನವನ್ನು ಚಕ್ರವರ್ತಿ ಸೂಲಿಬೆಲೆ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ|| ಸುರೇಶ ನಾಯಕ್, ಟ್ರಸ್ಟ್ ಅಡಳಿತಾಧಿಕಾರಿ ಹಾಗು ಪ್ರಾಂಶುಪಾಲ ನಾಗೇಶ್ ಭಟ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಬಿ.ಸಿ.ಎ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಚ್ಛತಾ ಅಭಿಯಾನದ ವಿವರವನ್ನು ನೀಡಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...