ಇಂದು ಶ್ರೀನಿವಾಸಪುರಕ್ಕೆ  ಎಚ್ ಡಿ ಕುಮಾರಸ್ವಾಮಿ ಆಗಮನ 

Source: sonews | By sub editor | Published on 1st May 2018, 12:09 AM | State News |

 ಶ್ರಿನಿವಾಸಪುರ ಪಟ್ಟಣದ ಹೊರವಲೆಯದ  ಕ್ರೀಡಾಂಗಣದಲ್ಲಿ ಮೇ 1 ರಂದು ಬೆಳಗ್ಗೆ  10 : 30 ಕ್ಕೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಂದ ಪ್ರಚಾರ ಸಭೆ ಏರ್ಪಡಿಸಲಾಗಿದೆ ಎಂದು ಜೆಡಿಎಸ್ ಮುಖಂಡ ಕೆ. ಶಿವಪ್ಪ ಹೇಳಿದರು. 
 

ಜೆಡಿಎಸ್ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದವರು ಅಂದು ಬೆಳಗ್ಗೆ  10: 00 ಗಂಟೆಗೆ ಹೆಲಿಕಾಪ್ಟರ್ ನಲ್ಲಿ ಬಂದು ಪಟ್ಟಣದ ಹೊರವಲೆಯದ  ರಾಜಧಾನಿ ಮಾವಿನ ಕಾಯಿ ಮಂಡಿ ಸಮೀಪ ದಿಂದ  ತೆರೆದ ವಾಹನ ರೋಡ್  ಶೋ ಮೂಲಕ ಪಟ್ಟಣದ ಟಿಪ್ಪು ಸರ್ಕಲ್ ಮುಳಬಾಗಲ್ ಸರ್ಕಲ್ ಎಂ ಜಿ ರಸ್ತೆ ಮೂಲಕ   ಕ್ರೀಡಾಂಗಣ ತಲುಪುವರು.ಅಲ್ಲಿ ಚುನಾವಣೆ ಪ್ರಚಾರ ಭಾಷಣ ಮಾಡಿದ ಬಳಿಕ ಸಭೆಯಲ್ಲಿ ಭಾಗವಹಿಸುವ ಮಹಿಳೆರೊಂದಿಗೆ ಸಂವಾದ ನಡೆಸುವರು ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ  ಸೇರುವ ನಿರೀಕ್ಷೆ ಇದೆ  ಎಂದು ಹೇಳಿದರು 

 ಜೆಡಿಎಸ್ ಅಭ್ಯರ್ಥಿ ಜಿ ಕೆ ವೆಂಕಟಶಿವಾರೆಡ್ಡಿ  ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮುಖಂಡರು ಸಭೆಯಲ್ಲಿ  ಭಾಗವಹಿಸುವರು.  ಎಂದು ಹೇಳಿದರು .

ಮುಖಂಡ ಡಾ ಜಿ ವಿ ಬಿರೇಂದ್ರ ಮಾತನಾಡಿ ಕ್ಷೇತ್ರದಲ್ಲಿ  ಜೆಡಿಎಸ್ ಗೆಲುವಿಗೆ ಪೂರಕವಾದ ವಾತಾವರಣವಿದೆ. ಕುಮಾರಸ್ವಾಮಿ ಅವರಮನ್ನು ಮುಖ್ಯ ಮಂತ್ರಿಯಾಗಿ ಮಾಡಲು ಮತದಾರರು ಹವಣಿಸುತ್ತಿದ್ದಾರೆ. 
 

Read These Next

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...