ಟೋಮೋಟೋ ಹಾಗೂ ಚೆಂಡೂ ಹೂ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

Source: sonews | By Staff Correspondent | Published on 9th October 2018, 10:41 PM | State News | Don't Miss |

ಕೋಲಾರ: ಟೋಮೋಟೋ ಹಾಗೂ ಚೆಂಡೂ ಹೂ ಬೆಲೆ ಕುಸಿತದಿಂದ ಕಂಗಲಾಗಿರುವ ರೈತರ ನೆರವಿಗೆ ಬರಲು ಕೂಡಲೇ ಬೆಂಬಲ ಬೆಲೆ ಜೊತೆಗೆ ವೈಜ್ಞಾನಿಕ ಬೆಲೆ ಘೋಷಣೆ ಮಾಡಬೇಕು. ಮತ್ತು ಮಾರುಕಟ್ಟೆಯನ್ನು ಅಭಿವೃದ್ದಿಪಡಿಸಿ ಕಮೀಷನ್ ದಂದೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಪಲ್ಲವಿ ವೃತ್ತದಲ್ಲಿ ಟೋಮೊಟೋ ಮತ್ತು ಹೂ ಸುರಿದು ಜಾನುವಾರಗಳ ಸಮೇತ ದರಣಿ ಮಾಡಿ  ಭೂತದಹನ ಮಾಡುವ ಮೂಲಕ ಸರ್ಕಾರಗಳನ್ನು ಅಗ್ರಹಿಸಲಾಯಿತು.

ಹೋರಾಟದ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ 1200-2000 ಅಡಿಗಳÀವರೆಗೂ ಕೊಳವೆ ಬಾವಿಗಳನ್ನು ಕೊರೆಸಿ, ವ್ಯವಸಾಯ ಮಾಡಿ ಇಡೀ ದೇಶಕ್ಕೆ ಹಾಲು ಹಣ್ಣು ತರಕಾರಿ, ರೇಷ್ಮೇ, ಚಿನ್ನವನ್ನು ಕೊಟ್ಟಂತಹ ಸ್ವಾಭಿಮಾನದ ರೈತರು ಹಾಲು, ರೇಷ್ಮೇ, ಮಾವು ಬೆಲೆ ಕುಸಿತದಿಂದ ಕಂಗಲಾಗಿ ಸಾಲದ ಸುಳಿಗೆ ಸಿಲುಕಿ ಒದ್ದಾಡುವ ಸಂಧರ್ಭದಲ್ಲಿ ಈಗ ಅತಿ ಹೆಚ್ಚು ಟೋಮೊಟೋ ಹಾಗೂ ಹೂ ಬೆಳೆ ಬೆಳೆಯುವ ರೈತರ ಬದುಕು ಬೆಲೆ ಕುಸಿತದಿಂದ ಬೀದಿಗೆ ಬಿದ್ದಿದೆ ಲಕ್ಷಾಂತರ ರೂ ಖರ್ಚು ಮಾಡಿ ಬೆಳೆದ ಟೋಮೋಟೋ ಬೆಳೆಗೆ ಒಂದು ಕಡೆ ರೋಗದ ಕಾಟ ಮತ್ತೊಂದೆಡೆ ಮಾರುಕಟ್ಟೆಯಲ್ಲಿ  ಬೆಲೆÉ ಇಲ್ಲದೆ ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯಬೇಕಾದ ಪರಿಸ್ಥಿತಿಯಾದರೆ ಹೂ ಬೆಳೆದ ರೈತರದ್ದು ಇದೇ ಪರಿಸ್ಥಿತಿಯಾಗಿದೆ. ಒಂದು ಎಕರೆ ಟೊಮೋಟೋ ಬೆಳೆಯಲು ಇತ್ತೀಚೆಗೆ ಆದುನೀಕರಣವಾಗಿರುವ ಕೃಷಿಯಲ್ಲಿ ಸಮುದ್ರದಲ್ಲಿ ಈಜಿದಂತೆ 1.5 ಲಕ್ಷ ಖರ್ಚು ಬರುತ್ತಿದೆ ಮಾರುಕಟ್ಟೆಯಲ್ಲಿ ಪ್ರತಿ 15 ಕೆ.ಜಿ ಬಾಕ್ಸ್ ಟೋಮೋಟೋ ಬೆಲೆ 10ರಿಂದ 50 ರೂ ಮಾರಾಟವಾಗುತ್ತಿದ್ದು ಖರ್ಚು ಸಹ ವಸೂಲಿಯ ಜೊತೆಗೆ ಹಾಕಿದ ಬಂಡವಾಳ ವಾಪಸ್ಸು ಬಾರದೆ ಖಾಸಗಿ ಸಾಲದ ಸುಳಿಗೆ ಸಿಲುಕಿ ಅನ್ನದಾತ ಒದ್ದಾಡುವ ಜೊತೆಗೆ ಅತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾನೆ.ಆದರೆ ಸರ್ಕಾರಗಳು ಮಾತ್ರ ರೈತರ ಹೆಸರೇಳಿಕೊಂಡು ರಾಜಕಾರಣ ಮಾಡಿ ಅನ್ನದಾತನ ಮರಣ ಶಾಸನ ಬರೆಯುತ್ತಿದ್ದಾರೆ. ಮತ್ತೊಂದೆಡೆ ಕಷ್ಟಪಟ್ಟು ಬೆಳೆಗೆ ಬೆಲೆ ನಿಗದಿ ಮಾಡುವ ತಾಕತ್ತು ರೈತರಿಗಿಲ್ಲ. ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಮಾಡುವ ದಲ್ಲಾಳಿಗಳ ಹಗಲು ದರೋಡೆ ಮತ್ತು ಕಮೀಷನ್ ದಂದೆಗೆ ಕಡಿವಾಣವಿಲ್ಲದ ಬೆಳೆ ಬೆಳೆದ ರೈತನಿಗೆ ಮೂರು ಕಾಸು ಒಂದು ನಿಮಿಷ ವ್ಯಾಪಾರ ಮಾಡುವ ದಲ್ಲಾಳಿಗೆ 10 ಕಾಸು ಎಂಬಂತಾಗಿದೆ. ಅದರ ಜೊತೆಗೆ ಸೂಕ್ತವಾದ ಮಾರುಕಟ್ಟೆಯಿಲ್ಲದೆ ರೈತರು ಪರದಾಡುವಂತಾಗಿದೆ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಸರ್ಕಾರಗಳಿಗೆ ಇನ್ನೆಷ್ಟೂ ಅನ್ನದಾತರ ಬಲಿ ಬೇಕಾಗಿದೆಂದು ಆಕ್ರೋಶ ವ್ಯಕ್ತಪಡಿಸಿದರು.


ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಸರ್ಕಾರಗಳೂ ಮತ್ತು ಅಧಿಕಾರಿಗಳು ರೈತರ ಪಾಲಿಗೆ ಸತ್ತು ಮಲಗಿದ್ದು,  ವ್ಯವಸಾಯ ನೀಸಾಯ ನಿನ್ನ ಹೆಂಡತಿ ಮಕ್ಕಳೆಲ್ಲಾ ಸಾಯ ಎಂಬಂತೆ ದೀನೇ ದೀನೇ ಕೃಷಿಯೆಂಬುದು ಇತ್ತೀಚೆಗೆ ಯುವಕರನ್ನು ಸಾವಿಗೆ ದೂಡುವ ಬ್ಯೂವೆಲ್ ಆಟಕ್ಕಿಂತ ಬೀಕರವಾದ ಆಟವೆಂದರೆ ಅದು ಕೃಷಿಯಾಗಿದೆ. ಒಂದು ಕಡೆ ನಕಲಿ ಕೀಟನಾಶಕ ಬಿತ್ತನೆ ಬೀಜಗಳ ಆರ್ಭಟ, ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿ ದಂದೆಯಂತೆ 10ರೂ ಕಮೀಷನ್ ಜೊತೆಗೆ ದಲ್ಲಾಳಿಗಳ ಆರ್ಭಟ ಇದರ ಜೊತೆಗೆ ಕೈಗೆ ಬಂದ ಬೆಳೆಗೆ ಬೆಲೆಯಿಲ್ಲದೆ ಹೈರಾಣಾಗುತ್ತಿರುವ ರೈತರ ಗೋಳು ಕೇಳುವವರಿಲ್ಲ. ಮತ್ತೊಂದೆಡೆ ಬೀಕರ ಬರಗಾಲದಲ್ಲೂ ಬೆಳೆದ ಟೋಮೊಟೋ ಹಾಗೂ ಹೂ ಬೆಳೆಗೆ ಮಾರುಕಟ್ಟೆಯಲ್ಲಿ ಸಂಪೂರ್ಣ ಬೆಲೆ ಕುಸಿತದಿಂದ ಹಾಕಿದ ಬಂಡವಾಳ ಕೈಗೆ ಬಾರದೆ ಬೆಳÉಯನ್ನು  ರಸ್ತೆಗೆ ಸುರಿಯಬೇಕಾದ ಪರಿಸ್ಥಿಯ ಜೊತೆಗೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದರೂ ಅನ್ನದಾತನ ರಕ್ಷಣೆಗೆ ದಾವಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಬೂಟು ನಕ್ಕುವ ಗುಲಾಮರಾಗಿದ್ದಾರೆ ಸರ್ಕಾರಗಳಿಗೆ ಮಾನ ಮರ್ಯಾದೆಯಿದ್ದರೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯ ಜೊತೆಗೆ ಸೂಕ್ತವಾದ ಮಾರುಕಟ್ಟೆಯನ್ನು ಅಭಿವೃದ್ದಿಪಡಿಸಿ ಕಮೀಷನ್ ದಂದೆಗೆ ಕಡಿವಾಣ ಹಾಕಿ ಅನ್ನದಾತನನ್ನು ಉಳಿಸದೇ ಹೋದರೆ ಮುಂದಿನ ದಿನಗಳಲ್ಲಿ ತುತ್ತು ಅನ್ನಕ್ಕಾಗಿ ಹೊರದೇಶಗಳ ಬಳಿ ಕೈಚಾಚಬೇಕಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಸ್ಥಳಕ್ಕೆ ಬಂದು ಮಾತನಾಡಿದ ಉಪ ತಹಶೀಲ್ದಾರ್ ಸುಜಾತರವರು ರೈತರ ಕಷ್ಟಗಳು ನಮಗೂ ಅರಿವಿದೆ, ಜೊತೆಗೆ ಮಾರುಕಟ್ಟೆಯ ಅವ್ಯವಸ್ಥೆ, ಕಮೀಷನ್ ದಂದೆ ಮತ್ತು ರೈತರ ಶೋಷಣೆ ನಿರಂತರವಾಗಿದೆ ಹಾಗೂ ಟೋಮೊಟೋ ಮತ್ತು ಹೂ ಬೆಳೆಗೆ ಬೆಂಬಲ ಬೆಲೆ ಜೊತೆಗೆ ವೈಜ್ಞಾನಿಕ ಬೆಲೆ ಕೇಳುತ್ತಿರುವುದು ನ್ಯಾಯಯುತವಾಗಿದೆ. ನಮ್ಮ ಹಂತದಲ್ಲಾಗುವ ಕೆಲಸವನ್ನು ನಾವು ಮಾಡುತ್ತೇವೆ. ಮತ್ತು ಕೂಡಲೇ ಈ ಮನವಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು. ಯಾವುದೇ ಕಾರಣಕ್ಕೂ ರೈತರು ಕಠಿಣ ನಿರ್ಧಾರ ತೆಗೆದುಕೊಳ್ಳಬಾರದೆಂದು ವಿಶ್ವಾಸದ ಮಾತು ಹೇಳಿದರು

ಈ ಹೋರಾಟದಲ್ಲಿ  ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಐತಂಡಹಳ್ಳಿ ಅಮರೀಶ್,  ಪುರುಷೋತ್ತಮ್, ಶೆಟ್ಟಿಕೊತ್ತನೂರು ನಾರಾಯಣಸ್ವಾಮಿ, ಅಣ್ಣಿಹಳ್ಳಿ ಶ್ರೀನಿವಾಸ್, ನಾಗರಾಜಪ್ಪ,   ಸಾಗರ್, ರಂಜಿತ್, ಸುಪ್ರೀಂ ಚಲ, ಮೀಸೆ ವೆಂಕಟೇಶಪ್ಪ, ಬೂದಿಕೋಟೆ ಹರೀಶ್, ಅನಿಲ್,  ತೆರ್ನಹಳ್ಳಿ ವೆಂಕಿ, ಹುಲ್ಕೂರ್ ಹರೀಕುಮಾರ್, ಆಂಜಿನಪ್ಪ, ಮಂಗಸಂದ್ರ ನಾಗೇಶ್, ಪುತ್ತೇರಿ ರಾಜು, ವೇಣುರೆಡ್ಡಿ, ಕೃಷ್ಣಮೂರ್ತಿ, ವಿಜಿಯ್‍ಕುಮಾರ್, ನಾರಾಯಣ್, ಶಿವು, ಹೊಸಹಳ್ಳಿ ವೆಂಕಟೇಶ್, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ಈಕಂಬಳ್ಳಿ ಮಂಜುನಾಥ್, ಕೊಂಡೇನಹಳ್ಳಿ ಮುರುಳಿ ಮುಂತಾದವರಿದ್ದರು.

Read These Next

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ರಾಜ್ಯಾದ್ಯಂತ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.73.40ರಷ್ಟು ಉತ್ತೀರ್ಣತೆ ದಾಖಲಾಗಿದೆ. ...

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ; 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

ಈ ವರ್ಷದ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ 94 ರಷ್ಟು ಪ್ರಥಮ ಹಾಗೂ ದಕ್ಷಿಣ ಕಾಂಡ ಶೇ 92.12 ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...