ಎನ್.ಎಸ್.ಎಸ್ ಹಾಗೂ ಇಕೋ ಕ್ಲಬ್ ಉದ್ಘಾಟನೆ

Source: sonews | By sub editor | Published on 11th October 2018, 10:46 PM | Coastal News |

ಭಟ್ಕಳ: ಸರ್ಕಾರಿ ಪದವಿ ಪೂರ್ವ ಕಾಲೇಜು ಹಡೀನದಲ್ಲಿ ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ಇಕೋ ಕ್ಲಬ್ ಘಟಕದ ಉದ್ಘಾಟನೆಯನ್ನು ತಾಲೂಕಾ ಪಂಚಾಯತ್ ಸದಸ್ಯ ಹನುಮಂತ ನಾಯ್ಕ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಸೇವಾ  ಮನೋಭಾವನೆ ಬೆಳೆಸುವದರೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕು. ಶಿಸ್ತು, ಸಂಯಮ, ಸಹಬಾಳ್ವೆ, ಸಾಮರಸ್ಯ ವಿದ್ಯಾರ್ಥಿ ಜೀವನದಲ್ಲಿ  ಹಾಸುಹೊಕ್ಕಾಗಿರಬೇಕು ಎಂದು ಕರೆ ನೀಡಿದರು. 

ಮುಖ್ಯ ಅಥಿತಿಗಳಾಗಿ ಯಲ್ವಡಿಕವೂರ ಗ್ರಾಮ ಪಂಚಾಯತ ಸದಸ್ಯ ನಾರಾಯಣ ನಾಯ್ಕ  ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣ, ರಾಷ್ಟ್ರೀಯ ಐಕ್ಯತೆ, ಸೇವಾ ಭಾವನೆ ಬೆಳೆಸಲು ಸಹಕಾರಿಯಾಗಿದೆ ಎಂದರು. 

ಇನ್ನೋರ್ವ ಅತಿಥಿ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ ನಾಯ ಮಾತನ್ನಾಡಿ ಸೇವಾ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಜನಜಾಗೃತಿ ಮತ್ತು ಸೇವಾ ಮನೋಭಾವನೆಗಳನ್ನು ಮೂಡಿಸಲು ಸಾಧ್ಯ ಎಂದರು. ರಮಾನಂದ ನಾಯ್ಕ ಉಪನ್ಯಾಸಕರು, ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಹಕಾರ, ಶ್ರಮ, ಸ್ವಚ್ಛತಾ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ ಜೀವನವನ್ನು ಉತ್ತಮ ಗೊಳಿಸುವ ಮೂಲಕ ಸಮಾಜಕ್ಕೆ ,ದೇಶಕ್ಕೆ ಮಾದರಿಯಾಗಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಸಂತರಾಯ ವಿ. ಗಾಂವಕರ ರವರು ರಾ. ಸೇ. ಯೋಜನೆ ವಿದ್ಯಾರ್ಥಿಗಳಲ್ಲಿ ವ್ಯಕ್ತತ್ವ ವಿಕಸನ, ರಾಷ್ಟ್ರೀಭಾವಕ್ಯತೆ ,ನಾಯಕತ್ವ ಗುಣ ಬೆಳೆಸಲು ಹಾಗೂ ಅವಿದ್ಯಾವಂತ ಮತ್ತು ವಿದ್ಯಾವಂತರ ನಡುವೆ ಸಂಪರ್ಕಕಲ್ಪಿಸುವದರ ಮೂಲಕ ನವಸಮಾಜದ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು. ಯೋಜನಾಧಿಕಾರಿಯಾದ ಮಂಜುನಾಥ ನಾಯ್ಕ ರಾ. ಸೇ. ಯೋ. ಘಟಕದ ಉದ್ದೇಶ, ಮಹತ್ವ, ಶ್ರಮದ ಅರಿವು, ಪರಿಸರ ಸಂರಕ್ಷಣೆ, ಮಹಾತ್ಮ ಗಾಂಧೀಜಿ ಕಂಡ ಕನಸಿನ ಪ್ರಯೋಜನಗಳ ಬಗ್ಗೆ ಪ್ರಾಸ್ತಾವಿಕ ಮಾತನ್ನಾಡಿದರು. 

ಕಾರ್ಯಕ್ರಮದ ಆರಂಭದಲ್ಲಿ ಕು. ಮಮತಾ ಮತ್ತುಸಂಗಡಿಗರು ಪ್ರಾರ್ಥನೆ ಮಾಡಿದರು.ನಾಡಗೇತೆಯನ್ನು ಕುಮಾರಿ ರಂಜಿತಾ ಮತ್ತು ಸಂಗಡಿಗರು ಹಾಡಿದರು. ನಂತರ ರಾಷ್ಟೀಯ ಸೇವಾ ಯೋಜನಾ ಗೀತೆಯನ್ನು ಕುಮಾರಿ. ಸುಚಿತಾ ನಾಯ್ಕ ಮತ್ತು ಸಂಗಡಿಗರು ಹಾಡುವದರ ಮೂಲಕ  ಸಭಿಕರ ಗಮನ ಸೆಳೆದರು. ಕೊನೆಯಲ್ಲಿ ರಾಮನಾಥ ನಾಯ್ಕ ಉಪನ್ಯಾಸಕರು, ಇವರು ಎಲ್ಲರನ್ನು ವಂದಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಶಾಲಿನಿ ನಾಯ್ಕ  ನಿರ್ವಹಿಸಿದರು.

 

Read These Next

ದಸರಾ ಉತ್ಸವವನ್ನು ವಿಶಿಷ್ಠವಾಗಿ ಸಂಘಟಿಸುತ್ತಿರುವ ಯುವ ಸಂಘಟಕರ ಕಾರ್ಯ ಶ್ಲಾಘನೀಯ:ಡಾ,ಆರ್. ನರಸಿಂಹ ಮೂರ್ತಿ

ಭಟ್ಕಳ:ಶಿರಾಲಿಯ ಸಾಲೆಮನೆಯ ಮಠದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಅತ್ಯಂತ ವಿಶಿಷ್ಟವಾದುದು. ...

'ಪಾಳು ಬಿದ್ದಿದೆ ಮಹಿಳಾ ಮೀನು ವ್ಯಾಪಾರಿಗಳಿಗೆ ಹಸ್ತಾಂತರಗೊಳ್ಳಬೇಕಾದ ಸುಸಜ್ಜಿತ ಮೀನು ಮಾರುಕಟ್ಟೆ'

ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ಸಂತೆ ಮಾರುಕಟ್ಟೆಯ ಆವರಣದೊಳಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿಯಲ್ಲಿ 1.30 ...

'ಭಟ್ಕಳ ಬೈಲೂರಿನಲ್ಲಿ ನಿಶ್ಚಯವಾದ ಬಾಲ್ಯ ವಿವಾಹವನ್ನು ತಡೆದ ಇಲಾಖೆ ಅಧಿಕಾರಿಗಳು'

ಭಟ್ಕಳ: ಇಲ್ಲಿನ ಬೈಲೂರಿನ ಗುಡಿಗಾರಬೋಲೆಯ ಸಮೀಪ 17 ವರ್ಷದ 1 ತಿಂಗಳ ಮುಸ್ಲಿಂ ಹುಡುಗಿಗೆ ಅದೇ ಊರಿನ 24 ವರ್ಷದ ಯುವಕನೊಂದಿಗೆ ಬಾಲ್ಯ ವಿವಾಹ ...

'ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಾಣಕ್ಕೆ ನಾಗರಿಕ ವೇದಿಕೆ ಆಗ್ರಹ'

ಭಟ್ಕಳ: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಆಗುವ ತೊಂದರೆ ಹಾಗೂ ಅವ್ಯವಸ್ಥೆಯನ್ನು ...

'ಪಂಚಾಯತ ವ್ಯಾಪ್ತಿಯ ಅನಧೀಕೃತ ಕಟ್ಟಡದ ಶೀಘ್ರ ತೆರವು ಕ್ರಮಕ್ಕೆ ಅಧಿಕಾರಿಗಳಿಗೆ ಸದಸ್ಯರ ತಾಕೀತು'

ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸೈಯದ್ ಅದಮ್ ಪಣಂಬೂರ ಅವರ ಅಧ್ಯಕ್ಷತೆಯಲ್ಲಿ ಮೊದಲ ಹಂತದ ಸಾಮಾನ್ಯ ಸಭೆಯೂ ಪಂಚಾಯತ ...