ಮುರ್ಡೇಶ್ವರ ಜಾತ್ರಾ ಪ್ರಯುಕ್ತ ಲೈಟಿಂಗ್ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ 

Source: sonews | By Staff Correspondent | Published on 13th January 2018, 12:39 AM | Coastal News |

ಭಟ್ಕಳ: ತಾಲೂಕಿನ ಮುರ್ಡೇಶ್ವರ ಜಾತ್ರಾ ಪ್ರಯುಕ್ತ ವಾಹನ ಪಾರ್ಕಿಂಗ್ ಜಾಗದಲ್ಲಿ ಲೈಟಿಂಗ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಇಲ್ಲಿನ ಮಾವಳ್ಳಿ-2 ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಓಗಳಿಗೆ ಶ್ರೀರಾಮ ಸೇನೆ ಮುರ್ಡೇಶ್ವರ ಹಾಗೂ ಇಲ್ಲಿನ ಸಾರ್ವಜನಿಕರು ಮನವಿಯನ್ನು ಸಲ್ಲಿಸಲಾಯಿತು.  
ಮನವಿಯಲ್ಲಿ ಜನವರಿ 20 ರಂದು ನಡೆಯಲಿರುವ ಮಾತ್ಹೋಬಾರ ಶ್ರೀ ಮುರ್ಡೇಶ್ವರ ದೇವರ ಮಹಾ ರಥೋತ್ಸವದ ಪ್ರಯುಕ್ತ ಗ್ರಾಮ ಪಂಚಾಯತ್ ವತಿಯಿಂದ ಪಾರ್ಕಿಂಗ್ ಟೆಂಡರ್ ಕರೆದು ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ ಪ್ರವಾಸಿಗರಿಗೆ ಪಾರ್ಕಿಂಗ್ ಜಾಗದಲ್ಲಿ ಯಾವುದೇ ರೀತಿಯ ಸೌಲಭ್ಯ ಇರುವುದಿಲ್ಲ. ಈ ಕಾರಣಕ್ಕೆ ಪಾರ್ಕಿಂಗ್ ಜಾಗದಲ್ಲಿ ಪ್ರವಾಸಿಗರಿಗೆ ಅನೂಕೂಲ ಮಾಡಿಕೊಡಬೇಕು ಹಾಗೂ ಮುರ್ಡೇಶ್ವರ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದ ಎದುರಿಗೆ ಮತ್ತು ಸೋನಾರಕೇರಿ ಕ್ರಾಸ್ ಬಳಿಯ ರಸ್ತೆಯ ಹೊಂಡ ಬಿದ್ದು ವಾಹನ ಸವಾರರಿಗೆ ತುಂಬಾ ಅನಾನೂಕೂಲ ಆಗುತ್ತಿದೆ. ಇದರಿಂದ ವಾಹನ ಸವಾರರು ಕೆಲವು ಬಾರಿ ಹೊಂಡ ತಪ್ಪಿಸಲು ವಿರುದ್ಧ ದಿಕ್ಕಿನಲ್ಲಿ ಬರುತ್ತಾರೆ ದೊಡ್ಡ ಅನಾಹುತ ಆಗುವುದಕ್ಕಿಂತ ಮುಂಚೆ ರಸ್ತೆಯ ಹೊಂಡವನ್ನು ಮುಚ್ಚಿ ವಾಹನ ಸವಾರರಿಗೆ ಅನೂಕೂಲ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.
ಈ ಸಂಧರ್ಭದಲ್ಲಿ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಜಯಂತ ನಾಯ್ಕ, ಶ್ರೀಧರ ನಾಯ್ಕ, ಉಮೇಶ ಗೊಂಡ, ಸಂತೋಷ ನಾಯ್ಕ ಮಾದೇವ ನಾಯ್ಕ ದೇವಿದಾನ ನಾಯ್ಕ ಸೇರಿದಂತೆ ಊರಿನ ನಾಗರಿಕರು ಇದ್ದರು.                     
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...