ಮುಂಡಗೋಡ   ಕಸಪಾ ದಿಂದ ಸ್ವಚ್ಚತಾ ಕಾರ್ಯಕ್ರಮ

Source: nazir | By Arshad Koppa | Published on 23rd October 2017, 8:10 AM | Coastal News |

ಮುಂಡಗೋಡ : ಪರಿಸರ ನಮ್ಮೆಲ್ಲರ ಆಸ್ತಿ . ಇದನ್ನು ನಾವು ಮಾಲಿನ್ಯದಿಂದ ಮುಕ್ತವನ್ನಾಗಿ ಮಾಡಬೇಕಾಗಿರುವುದು ನಮ್ಮೆಲರ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗೇಶ ಪಾಲನಕರ ಹೇಳಿದರು.

ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಬೆಳಗ್ಗೆ ಪಟ್ಟಣದ ಗಾಂಧಿನಗರದ ಶ್ರೀ ಮಳೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು
ಸ್ವಚ್ಚತಾ  ಕಾರ್ಯಕ್ರಮ ಕೇವಲ ಸಂಘ ಸಂಸ್ಥೆಗಳಿಗೆ ಮಿಸಲಲ್ಲಾ. ಬದಲಾಗಿ ಪ್ರತಿಯೊಬ್ಬರು ಭಾಗವಹಿಸಬೇಕು ಹಾಗೂ ಸ್ವಚ್ಚತೆಗೆ ಆದ್ಯತೆ ನೀಡಿ ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಭಾಗಗಳನ್ನು ಸ್ವಚ್ಚತೆ ಇರುವಂತೆ ನೋಡಿಕೊಂಡಾಗ ಮಾತ್ರ ಸ್ವಸ್ಥ ಯುಕ್ತ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದರು
ಶೀ ಮಳೆ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ರಾಕೇಶ ರಾಯ್ಕರ, ಸಾಹಿತಿ ಚಿದಾನಂದ ಕೋವಿ, ಕೃಷ್ಣಾ ಕಟ್ಟಿ, ಚೆನ್ನಬಸು,  ಶಂಭಣ್ಣಾ ಕೊಳೂರ, ವಿನಯ ಪಾಲನಕರ, ಆರ್.ಜೆ.ಬೆಳ್ಳಣ್ಣನವರ, ತುಕಾರಾಮ ಸಾನು ಸೇರಿದಂತೆ ಕಸಾಪ ಸದಸ್ಯರು ಉಪಸ್ಥಿತರಿದ್ದರು 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...