ಮುಂಡಗೋಡ:ಬೀದಿಗೆ ಬಂದ ಜೆಡಿಎಸ್ ಅಧಿಕಾರಲಾಲಸೆ

Source: nazir | By Arshad Koppa | Published on 27th May 2017, 9:56 AM | Coastal News |

ಮುಂಡಗೋಡ: ತಾಲೂಕಿನ ಜೆ.ಡಿ.ಎಸ್ ಘಟಕದ ಎರಡು ಬಣದ ನಾಯಕರ ಅಧಿಕಾರದ ಲಾಲಸೆ  ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದ್ದು, ಜೆಡಿಎಸ್ ರಾಜ್ಯ ರೈತ ಮೋರ್ಚಾಧ್ಯಕ್ಷರ ಎದುರೇ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿ ಜೆಡಿ.ಎಸ್ ಪದಾಧಿಕಾರಿಗಳ ಬಿನ್ನಾಭಿಪ್ರಾಯ ಈ ಭಾಗದ ಪಕ್ಷದ ವರ್ಚಸ್ಸನ್ನು ಮತ್ತಷ್ಟು ಕೆಳ ಹಂತಕ್ಕೆ ಒಯ್ಯುತ್ತಿರುವುದು ಅನಾವರಣಗೊಂಡಿತು.
ಗುರುವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಜೆ.ಡಿ.ಎಸ್ ರಾಜ್ಯ ರೈತ ಮೋರ್ಚಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಪತ್ರಿಕಾಗೋಷ್ಟಿ ನಡೆಸಲು ಮುಂದಾಗಿದ್ದ ಸಂದರ್ಭದಲ್ಲಿ ಪ್ರವಾಸಿ ಮಂದಿರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅನಧಿಕೃತವಾಗಿ ಪತ್ರಿಕಾಗೋಷ್ಟಿ ಹಾಗೂ ಸಭೆಗಳನ್ನು ಆಯೋಜಿಸುವಂತಿಲ್ಲ ಎಂಬ ಆಯುಕ್ತರ ಆದೇಶದ ಪ್ರತಿಯನ್ನು ಸಂಬಂಧಿಸಿದ ಇಲಾಖೆ ಸಿಬ್ಬಂದಿ ತೋರಿಸಿದಾಗ ಅನಿವಾರ್ಯವಾಗಿ ಸ್ಥಳ ಬದಲಾಯಸಲು ತೀರ್ಮಾನಿಸಿ ಪ್ರವಾಸಿ ಮಂದಿರದಿಂದ ಹೊರ ಬರಲಾಯಿತು. ಈ ವೇಳೆಯಲ್ಲಿ ಜೆ ಡಿ.ಎಸ್ ಪಕ್ಷದಿಂದ ಉಚ್ಚಾಟನೆಗೊಂಡವರು ನಮ್ಮ ಜೊತೆಗೆ ಬರುವಂತಿಲ್ಲ ನಿಮಗೆ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಲು ಅಧಿಕಾರ ನೀಡಿದವರಾರು ಇಲ್ಲಿಂದ ಹೊರಟು ಹೋಗಿ ಎಂದು ತಾಲೂಕಾ ಜೆ.ಡಿ.ಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ ಹಾಗೂ ಕ್ಷೇತ್ರಾಧ್ಯಕ್ಷ ಅರುಣ ಗೊಂದಳಿ ಜಿಲ್ಲಾ ಜೆ.ಡಿ.ಎಸ್ ಅಲ್ಪಸಂಖ್ಯಾತ ಮುಖಂಡ ಮುನಾಫ್ ಮಿರ್ಜಾನಕರ ಅವರಿಗೆ ಹೇಳಿದರು. ಈ ಮಾತಿನಿಂದ ಕುಪಿತಗೊಂಡ ಮಿರ್ಜಾನಕರ, ಉಚ್ಚಾಟನೆಗೊಂಡಿದ್ದೇನೆ ಎಂದು ಹೇಳಲು ನೀರಾರು ತಾಕತ್ತಿದ್ದರೆ ಆದೇಶ ಪ್ರತಿ ತೋರಿಸಿ ಮಾತನಾಡು ಈ ಮಾತನ್ನು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರೆ ನಾನು ತಲೆ ಬಾಗುತ್ತೇನೆ. ನಿನ್ನೆ ಮೊನ್ನೆ ಬಿಜೆಪಿ ಯಿಂದ ವಲಸೆ ಬಂದವನು ನೀನು ನಿನ್ನ ಯೋಗ್ಯತೆ ಎಲ್ಲರಿಗೂ ಗೊತ್ತಿದೆ. ನಾನು 20 ವರ್ಷಗಳಿಂದ ಕೆಳ ಹಂತದಿಂದ ಮೇಲ್ಮಟ್ಟದವರೆಗೆ ಜೆಡಿಎಸ್ ಗೆ ದುಡಿದವನು ನಾನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡವನು. ಹಣ ಮಾಡಲು ಜೆಡಿಎಸ್ ಗೆ ಬಂದವನೀನು ಎಂದು ಕುಟ್ರಿ ವಿರುದ್ದ ಗುಡುಗಿದರು. ಇಬ್ಬರ ನಡುವೆ ವೈಯಕ್ತಿಕ ಅವಾಚ್ಯ ಶಬ್ದಗಳು ವಿನಿಮಯಗೊಂಡವು. ಈ ಸಂದರ್ಭದಲ್ಲಿ ಆಕ್ರೊಶಭರಿತವಾಗಿ ಮಾತನಾಡಿದ ಜೆಡಿಎಸ್ ಕಾರ್ಯದರ್ಶಿ ತುಕಾರಾಮ ಗುಡಕರ, ನಮ್ಮ ಯೋಗ್ಯ ಏನು ಹಾಗೂ ನಿನ್ನ ಯೋಗ್ಯತೆ ಏನು ಎಂಬುವುದು ಸದ್ಯದಲ್ಲಿಯೇ ತಿಳಿಯಲಿದೆ. ನಿನ್ನ ಸ್ಥಾನ ಉಳಿಯುತ್ತದೆ ಎಂಬ ಕಲ್ಪನೆ ಕೂಡ ಮಾಡಿಕೊಳ್ಳಲಾಗಲ್ಲ ಎಂದು ಮಲ್ಲಿಕಾರ್ಜುನ ಕುಟ್ರಿಗೆ ಸವಾಲೆಸಗಿದರು. ಒಬ್ಬರಿಗೊಬ್ಬರು ಸೆಡ್ಡು ಹೊಡೆಯಲಾರಂಬಿಸಿ ಕೈ ಕೈ ಮಿಲಾಯಿಸುವ ಹಂತ ತಲುಪಿ ಇನ್ನೇನು ಮಾರಾಮಾರಿ ನಡೆದೇ ಹೋಯಿತೆನ್ನುವಷ್ಟರಲ್ಲಿ ರಾಜ್ಯ ರೈತ ಮೋರ್ಚಾಧ್ಯಕ್ಷ ಗಂಗಾಧರ ಪಾಟೀಲ ಕುಲಕಣ ್ ಹಾಗೂ ಪತ್ರಕರ್ತರು ಮದ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದನ್ನೆಲ್ಲ ಗಮನಿಸಿ ಬೇಸರಗೊಂಡ ರಾಜ್ಯ ರೈತ ಮೋರ್ಚಾಧ್ಯಕ್ಷ ಗಂಗಾಧರ ಪಾಟೀಲ ಕುಲಕಣ ್, ನಿಮ್ಮ ನಡವಳಿಕೆಯಿಂದ ಪಕ್ಷದ ಹೆಸರು ಹಾಳಾಗುತ್ತದೆ ಎಂದು ಹೇಳಿ ಯಾವುದೇ ಕಾರು ಹತ್ತದೇ ಬೈಕ್‍ವೊಂದರ ಮೇಲೆ ಖಾಸಗಿ ಹೋಟೆಲ್ ಗೆ ತೆರಳಿದರು ಬಳಿಕ ಇಲ್ಲಿಯ ಎಲ್ಲ ಬೆಳವಣ ಗೆಯನ್ನು ಅವಲೋಕಿಸಿದ್ದೇನೆ. ಈ ಬಗ್ಗೆ ರಾಜ್ಯ ನಾಯಕರಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪತ್ರಕರ್ತರಿಗೆ ತಿಳಿಸಿದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...