ಮುಂಡಗೋಡ ಕ್ಯಾಸನಕೇರಿ-ತ್ಯಾಮನಕೊಪ್ಪ ರಸ್ತೆಯಲ್ಲಿ ಹೊಂಡಗಳು ಪರದಾಡುತ್ತಿರುವ ಗ್ರಾಮಸ್ಥರು

Source: so english | By Arshad Koppa | Published on 18th October 2017, 8:19 AM | Coastal News |

ಮುಂಡಗೋಡ :  ತಾಲೂಕಿನ ಚೌಡಳ್ಳಿ  ಪಂಚಾಯತ್ ವ್ಯಾಪ್ತಿಯ ಕ್ಯಾಸನಕೇರೆ-ತ್ಯಾಮನಕೊಪ್ಪ  ರಸ್ತೆಯಲ್ಲಿ ಹೊಂಡಗಳು ಬಿದ್ದು ರಸ್ತೆ ತೀರಾ ಹದಗೆಟ್ಟಿದ್ದು 3-4 ಗ್ರಾಮದ ಗ್ರಾಮಸ್ಥರು ಪರದಾಡುವಂತಾಗಿದೆ.
ಈ ರಸ್ತೆಯು ಕ್ಯಾಸನಕೇರೆ ಹಾಗೂ ಮುಂಡಗೋಡ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯಕೊಂಡಿಯಾಗಿದೆ ಈ ಡಾಂಬರ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದ ಪರಿಣಾಮ  ಹೊಂಡಗಳಲ್ಲಿ ಮಳೆಯನೀರಿನಿಂದ ತುಂಬಿಹೋಗಿವೆ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ದುಸ್ತರವಾಗಿದೆ ರಾತ್ರಿ ಯಂತೂ ವಾಹನ ಸಂಚಾರ ಮಾಡುವುದು ಕಷ್ಟಸಾಧ್ಯ.

ಗ್ರಾಮಸ್ಥರು 3 ಕಿಮಿ ದೂರದ ಮುಂಡಗೋಡ ಪಟ್ಟಣಕ್ಕೆ ಬರಲು ಈ ರಸ್ತೆಯ ಮೇಲೆಯೇ ಅವಲಂಬಿತ ಈಗ ರಸ್ತೆ ಹದಗೆಟ್ಟಿರುವುದರಿಂದ ತ್ಯಾಮನಕೊಪ್ಪ ಗ್ರಾಮಸ್ಥರು ತಗ್ಗಿನಕೊಪ್ಪ ಮಾರ್ಗವಾಗಿ ಕರವಳ್ಳಿ ಬಂದು ಅಲ್ಲಿಂದ ಕುಸೂರ ಕತ್ತರಿಯ ಯಲ್ಲಾಪುರ-ಮುಂಡಗೋಡ ರಸ್ತೆಗೆ ಬಂದು 7-8 ಕಿಮಿ ಪ್ರಯಾಣಿಸಿ ಮುಂಡಗೋಡ ಬರುವಂತಾಗಿದೆ. ಇದರಿಂದ ಗ್ರಾಮಸ್ಥರ ವೇಳೆ ಜೊತೆಗೆ ಹಣವು ಖರ್ಚು ಸಂಬಂದ ಪಟ್ಟ ಇಲಾಖೆ ಈ ರಸ್ತೆಯನ್ನು ಕೂಡಲೇ ಡಾಂಬರಿಕರಣಮಾಡಿದರೆ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೇರಿದಂತೆ ಗ್ರಾಮಸ್ಥರಿಗೂ ಅನುಕೂಲವಾಗಲಿದೆ ಎಂದು ಗ್ರಾಮಸ್ಥರ ಅಭಿಪ್ರಾಯ. ಈ ರಸ್ತೆಯ ಕುರಿತು ನಿಷ್ಕಾಳಜಿ ತೋರಿದರೆ ಮುಂದಿನ ದಿನಗಳಲ್ಲಿ ಹೊರಾಟದ ಹಾದಿ ಹಿಡಿಯುವುದಾಗಿ ಗ್ರಾಮಸ್ಥರಿಂದ ಮಾತು ಕೇಳಿಬಂದಿದೆ

ಬ್ಲಾಕ್ ಸುದ್ದಿ ಗಾಯದ ಮೇಲೆ ಉಪ್ಪು ಸವರಿದಂತೆ ಮುಂಡಗೋಡ ಗೆ ಹಾಗೂ ಹೀಗೋ ಅಂತಾ ಬರಲು ಹವಣಿಸುತ್ತಿದ್ದ ತ್ಯಾಮನಕೊಪ್ಪ, ತಗ್ಗಿನಕೊಪ್ಪ, ಕ್ಯಾಸನಕೇರಿ, ಕರವಳ್ಳಿ ಗ್ರಾಮಸ್ಥರಿಗೆ  ತ್ಯಾಮನಕೊಪ್ಪ- ಮುಂಡಗೋಡ ರಸ್ತೆಯಲ್ಲಿರುವ ಕ್ಯಾಸನಕೇರಿ ಕೆರೆ ಯ ಒಡ್ಡಿನ ಮೇಲಿರುವ ರಸ್ತೆ ಮಳೆಯ ಕಾರಣದಿಂದ ರಸ್ತೆಯು ರೊಜ್ಜುಗೊಜ್ಜಾಗಿದೆ ಈ ಕೆರೆಯಮೇಲೆ ರಸ್ತೆಯು ಡಾಂಬರಿಕರಣ ಇಲ್ಲವೆ ಕಾಂಕ್ರೀಟ್ ಕರಣ ಮಾಡಿದರೆ ತ್ಯಾಮನಕೊಪ್ಪ ಗ್ರಾಮದವರಿಗೆ ಹಾಗೂ ಕ್ಯಾಸನಕೇರಿ ಗ್ರಾಮದವರಿಗೆ ತುಂಬಾ ಅನುಕೂಲವಾಗಲಿದೆ
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...