ದೇವರ ದಾಸಿಮಯ್ಯ ಸಮಾಜ ಪರಿವರ್ತನೆಗೆ ಶ್ರಮಿಸಿದ ಶ್ರೇಷ್ಠ ವಚನಕಾರ: ಜಿಲ್ಲಾಧಿಕಾರಿ ಎಸ್. ಎಸ್. ನಕುಲ್

Source: sonews | By Staff Correspondent | Published on 22nd March 2018, 11:25 PM | Coastal News |

ಕಾರವಾರ  : ತಮ್ಮ ವಚನಗಳ ಮೂಲಕ ಸಮಾಜದಲ್ಲಿನ  ಮೌಡ್ಯಗಳನ್ನು ತೋಡೆಯಲು ಶ್ರಮಿಸಿದ ವಚನಕಾರರಲ್ಲಿ ದೇವರ ದಾಸಿಮಯ್ಯನವರ ಪಾಲು ಕೂಡಾ ಸ್ಮರಣಾರ್ಥ ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತ ಇಲಾಖೆಯ ಸಹಯೋಗದಲ್ಲಿ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಲೋಪಗಳನ್ನು ಸರಿಪಡಿಸಲು ತಮ್ಮ ವಚನಗಳ ಮೂಲಕ ಉತ್ತಮ ಸಂದೇಶಗಳನ್ನು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ  ಆದ್ಯ ವಚನಕಾರ ದೇವರ ದಾಸಿಮಯ್ಯ, ಅನಿಷ್ಟ ಮತ್ತು ಮೌಡ್ಯಗಳ ವಿರುದ್ದ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ ಎಂದರು.
ಬಸವಣ್ಣನವರ ಸವiಕಾಲಿನ ವಚನಕಾರಾದ ದಾಸಿಮಯ್ಯ ಶಿವ ಭಕ್ತನಾಗಿದ್ದು ದೇವರ ಹೆಸರಿನಲ್ಲಿನ ಮೋಸಗಳನ್ನು ಮಾಡಬಾರದು ಹಾಗೂ ಇದರಿಂದ ಯಾವುದೇ ರೀತಿಯ ನೆಮ್ಮದಿಯು ಸಿಗುವುದಿಲ್ಲ ಎಂಬ ಸಂದೇಶವನ್ನು ತಮ್ಮ ವಚನಗಳ ಸಾರಾಂಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ನೇಕಾರ ಸಮಾಜದಲ್ಲಿ ಹುಟ್ಟಿ ತಮ್ಮ ಜೀವನವನ್ನೇ ಸಮಾಜದ ಏಳಗೇಗೆ ಸಮರ್ಪಿಸಿ, ಸಮಾಜದಲ್ಲಿ ಅರಿವು ಮೂಡಿಸಲು ಸುಮಾರು 150 ಕ್ಕೂ ಹೆಚ್ಚಿನ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ನಿರ್ವಹಿಸಿ ದೇವರ ದಾಸಿಮಯ್ಯ ಶ್ರೇಷ್ಠ ವಚನಕಾರರ ಸಾಲಿನಲ್ಲಿ ಗುರುತಿಸಲ್ಪಡುತ್ತಾರೆ ಎಂದು ಸ್ಮರಿಸಿದರು.  
 ಕನ್ನಡ ಮತ್ತು ಸಂಸ್ಖøತಿ ಇಲಾಖೆಯ ಪ್ರಭಾರ ಸಹಾಯಕ  ನಿರ್ದೇಶಕ ಹಿಮಂತರಾಜು. ಜಿ ಪ್ರಸ್ತಾವಿಕವಾಗಿ ಮಾತನಾಡಿ   ಸಂಶೋಧಕರ ಪ್ರಕಾರ ವಿಶ್ವ ವಿಖ್ಯಾತ ವಚನಕಾರ ಬಸವಣ್ಣ ನವರ ಕಾಲಕ್ಕಿಂತಲೂ ದೇವರ ದಾಸಿಮಯ್ಯ ಮೊದಲಿನ ವಚನಕಾರ ಎಂಬ ಅಂಶವನ್ನು ಕಂಡುಕೊಳ್ಳಲಾಗಿದೆ ಹಾಗೂ ತಮ್ಮ ವಚನಗಳ ಮೂಲಕ ಶಿವ ಭಕ್ತಿಯ ಮಹತ್ವವನ್ನು ತಿಳಿಸಿದ್ದಾರೆ ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ನೇಕಾರ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂಧಿ  ಹಾಜರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...